ನೈಸರ್ಗಿಕವಾಗಿ_ಸಿಗುವ_ಕಾಡಿನ_ಅಣಬೆಗಳು.
ತಿನ್ನ ಬಹುದಾದ ಮತ್ತು ತಿನ್ನಬಾರದ ಅಣಬೆಗಳು ಇದೆ.
ನೀವೂ ಕಾಡಿನಲ್ಲಿ ಅರಳುವ ಈ ಅಣಬೆಗಳನ್ನ ನೋಡಿದ್ದೀರಾ? ...
ಇದರ ಖಾದ್ಯ ಸವಿದಿದ್ದೀರಾ? ....
ನಿಮ್ಮ ಅನುಭವ ಹಂಚಿಕೊಳ್ಳಿ ....
ಧಾರ್ಮಿಕ ಕಾರಣದಿಂದ ಕೆಲ ಜಾತಿಗಳಲ್ಲಿ ಅಣಬೆ ಸೇವನೆ ನಿಶೇಧ ಇದೆ.
ವಿಶ್ವದ ಪ್ರಮುಖ ಧರ್ಮಗಳನ್ನು ಗಮನಿಸಿದರೆ, ಜೈನ, ಬ್ರಾಹ್ಮಣ ಮತ್ತು ಲಿಂಗಾಯತ ಸಂಪ್ರದಾಯಗಳಂತೆ ಬೇರೆ ಯಾವುದೇ ಪ್ರಮುಖ ಜಾಗತಿಕ ಧರ್ಮಗಳು ಉದಾಹರಣೆಗೆ ಇಸ್ಲಾಂ, ಕ್ರಿಶ್ಚಿಯನ್ ಅಥವಾ ಬೌದ್ಧ ಧರ್ಮಅಣಬೆಯನ್ನು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ನಿಷೇಧಿಸಿಲ್ಲ.
ಮುಂಗಾರು ಮಳೆಯ ದಿನದಲ್ಲಿ ಕಾಡಿನಲ್ಲಿ - ಕೃಷಿ ಜಮೀನಿನಲ್ಲಿ ಅರಳಿ ಬರುವ ತರಹೇವಾರಿ ಅಣಬೆಗಳಲ್ಲಿ ತಿನ್ನಲು ಬಾರದ ಅಣಬೆಗಳು ಹೆಚ್ಚು ಇದೆ,ಎಲ್ಲವೂ ಆಹಾರವಾಗಿ ಬಳಸಲು ಸಾಧ್ಯವಿಲ್ಲ ವಿಷಪೂರಿತ ಅಣಬೆಗಳು ಸೇವಿಸಲೇ ಬಾರದು.
ಮು೦ಗಾರು ಮಳೆ ಪ್ರಾರಂಭ ಆಗುವಾಗ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿನ ಮನೆಗಳಲ್ಲಿವಿವಿದ
ಮಲೆನಾಡಿನ ಸಂಪ್ರದಾಯಿಕ ಆಹಾರ ಕೂಡ ತಯಾರಾಗುತ್ತದೆ.
ಕಳಲೆ - ಮರಕೆಸ - ಅಣಬೆ-ಅರಿಶಿಣದ ಎಲೆ ಕಡಬು
ಹೀಗೆ ಉದ್ದವಾದ ಪಟ್ಟಿ ಸಾಲು...
ಸಂಪ್ರದಾಯಿಕ ಮೇಲ್ವರ್ಗದ ಬ್ರಾಹ್ಮಣ, ಜೈನ ಮತ್ತು ಲಿಂಗಾಯಿತರ ಕುಟುಂಬಗಳಲ್ಲಿ ಅವರಿಗೆ ಅಣಬೆ ಆಹಾರವಾಗಿ ಸ್ವೀಕರಿಸಲು ಅವಕಾಶ ಇಲ್ಲ ಅವರಲ್ಲಿ ಅಣಬೆ ನಿಷೇದ ಇದೆ.
ಸಸ್ಯ ವರ್ಗದ ಅಣಬೆ ಶಿಲೀಂದ್ರವಾದ್ದರಿಂದ ಇದನ್ನು ಅವರು ಬಳಸುವುದಿಲ್ಲ.
ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆ ಭೂಮಿಗೆ ಬಿದ್ದಾಗ ಅರಳುವ 51 ವಿದದ ಅಣಬೆಗಳು ಇದೆ.
ಇದರಲ್ಲಿ ತಿನ್ನಲು ಯೋಗ್ಯವಾದದ್ದು 8 ವಿದದ ಅಣಬೆಗಳು ಮಾತ್ರ.
ತರಕಾರಿ ಗುಂಪಿನ ಸಸ್ಯ ವರ್ಗಕ್ಕೆ ಸೇರಿದ ಈ ಶಿಲೀಂದ್ರ ಅಣಬೆ ಉತ್ತಮ ಆಹಾರ ಮತ್ತು ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವುದರಿಂದ ಡಯಾಬಿಟೀಸ್ ಇರುವವರಿಗೆ ಒಳ್ಳೆಯ ಆಹಾರ ಇದು.
ನಾನು ನೋಡಿದ್ದು ಇದರಲ್ಲಿ ಕೆಲವೇ ಕೆಲವು ಮತ್ತು ತಿಂದಿದ್ದು ಇನ್ನೂ ಕೆಲವು ಮಾತ್ರ.
ನಮ್ಮಲ್ಲಿ ಹೆಚ್ಚಾಗಿ ಸಿಗುವುದು #ಹೆಗ್ಗಲಾಣಬೆ ಅಂತ ಇದನ್ನು ಬೇರೆ ಹೆಸರಲ್ಲೂ ಕರೆಯುತ್ತಾರೆ ಇದರಲ್ಲಿ ಕಪ್ಪು ಮೊಗ್ಗು ಮತ್ತು ಬಿಳಿ ಮೊಗ್ಗು ಎಂಬ ಎರೆಡು ವಿದವಿದೆ.
ಇದು ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ದೊರೆಯುತ್ತದೆ ಇದಕ್ಕೆ ಬೇಡಿಕೆ ಜಾಸ್ತಿ, ರುಚಿ ಜಾಸ್ತಿ ಆದ್ದರಿಂದ ಕೆಜಿಗೆ 300 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಆಗುತ್ತೆ.
#ನುಚ್ಚಾಣುಬೆ ಹೆಸರು ಹೇಳುವಂತೆ ಸಣ್ಣ ಗಾತ್ರದ್ದು, ಸಾಮಾನ್ಯವಾಗಿ ಹುತ್ತದ ಮೇಲೆ ಅರಳುವುದು ಜಾಸ್ತಿ.
ಇದರ ರುಚಿ ಜಾಸ್ತಿ ಆದರೆ ಇದನ್ನು ಕಿತ್ತು ತಂದು ಸ್ವಚ್ಚ ಮಾಡುವುದು ಹೆಚ್ಚು ಶ್ರಮದ ಕೆಲಸವಾದ್ದರಿಂದ ಇದರ ಬಳಕೆ ಸಲೀಸಲ್ಲ, ನಾನು ಸಣ್ಣವನಾಗಿದ್ದಾಗ ತಿಂದ ನೆನಪು.
#ಎಣ್ಣಾಣುಬೆ ಅಣಬೆ ಮೇಲ್ಪದರದಲ್ಲಿ ಎಣ್ಣೆ ಇದ್ದ೦ತೆ ಇರುತ್ತದೆ ಇದು ಕೂಡ ಅತ್ಯಂತ ರುಚಿಕರವಾದ ಅಣುಬೆ ಹೆಚ್ಚು ಜನ ಬಳಸುತ್ತಾರೆ.
ರಾಣಿ ಬೆನ್ನೂರು ಹುಬ್ಬಳಿ ಬಾಗದಲ್ಲಿ ಹುತ್ತದ ಮಣ್ಣಿನಲ್ಲಿ ಹೆಚ್ಚು ಬೆಳೆಯುವ #ಹುತ್ತದ_ಅಣಬೆ ಬಳಕೆಯಲ್ಲಿದೆ ನಾನು ಇದರ ರುಚಿ ನೋಡಿಲ್ಲ.
ದೂಪದ ಮರದ ಬುಡದಲ್ಲಿ ಬೀಳುವ ಒಣ ಎಲೆ ಮರೆಯಲ್ಲಿ ಬರುವ ಕಪ್ಪು ಬಣ್ಣದ ತಲೆಯ #ಮಣ್ಣು_ಆಣಬೆ ಅತ್ಯಂತ ರುಚಿಕರ ಅಂತೆ ಆದರೆ ಇದು ಸಾವಿರ ರೂಪಾಯಿ ಕೊಟ್ಟರು ಸಿಗುವುದಿಲ್ಲ ನಾನು ಪ್ರಯತ್ನ ಪಟ್ಟರು ನನಗೆ ಈವರೆಗೂ ದೊರೆತಿಲ್ಲ.
#ಕೂಗಲು_ಅಣಬೆ ಇದಕ್ಕೆ ಕೋಳಿ ಮಾಂಸದ ರುಚಿ ಇರುತ್ತದೆ, ಕಿತ್ತಳೆ ಹಣ್ಣಿನ ಗಾತ್ರದ ಮೇಲು ಬಾಗ ಅರಿಶಿಣ ಬಣ್ಣ ಒಳಗೆ ಕಪ್ಪು ಮತ್ತು ಬಿಳಿ ಬಣ್ಣದ ಈ ಅಣಬೆಗೆ ಬಾರೀ ಬೇಡಿಕೆ ಇದೆ ಇದು ನನ್ನ ಗೆಳೆಯರ ಅನುಭವ ನಾನು ಈವರೆಗೆ ಇದನ್ನು ನೋಡಿಲ್ಲ ಮತ್ತು ತಿಂದಿಲ್ಲ.
#ಮ್ಯಾಜಿಕ್_ಮಷ್ರೂ೦ ತಿಂದರೆ 24 ಗಂಟೆ ಅಮಲು ಇರುತ್ತದೆ ಎನ್ನುವ ಸುದ್ದಿ ಇದೆ ಇದು ಕೊಡಗು ಜಿಲ್ಲೆಯ ಕಾಡಿನಲ್ಲಿ ಅರಳುತ್ತದೆ, ಇದನ್ನು ನಾನು ಪ್ರವಾಸೋದ್ಯಮ ಲೇಖನದಲ್ಲಿ ಮಾತ್ರ ಓದಿದ್ದು.
ಅಣಬೆ ಖಾಧ್ಯದ ಜೊತೆ ಮಲೆನಾಡಿನ ಬಿಸಿ ಬಿಸಿ ಅಕ್ಕಿ ರೊಟ್ಟಿ ಅತ್ಯುತ್ತಮ ಕಾಂಬಿನೇಷನ್ ಆಗಿದೆ.
ಈಗ ಕೃತಕವಾಗಿ ಬೆಳೆದು ಮಾರಾಟ ಮಾಡುವ ಅಣಬೆ ಉದ್ಯಮವೂ ಬೆಳೆದಿದೆ ಆದರೆ ಪಶ್ಚಿಮ ಘಟ್ಟದ ಮುಂಗಾರು ಮಳೆ ಅವಲಂಬಿಸಿ ನೈಸರ್ಗಿಕವಾಗಿ ಕಾಡಿನಲ್ಲಿ ಅರಳುವ ಅಣಬೆಗೆ ಇರುವ ರುಚಿ ಮಾತ್ರ ವಿಶಿಷ್ಟ.
ಸಂಪ್ರದಾಯಿಕ ಮೇಲ್ವರ್ಗದ ಬ್ರಾಹ್ಮಣ, ಜೈನ ಮತ್ತು ಲಿಂಗಾಯಿತರ ಕುಟುಂಬಗಳಲ್ಲಿ ಅಣಬೆ ಆಹಾರವಾಗಿ ಸ್ವೀಕರಿಸಲು ಅವಕಾಶ ಇಲ್ಲ ನಿಷೇದ ಇದೆ.
ಬ್ರಾಹ್ಮಣ, ಜೈನ ಮತ್ತು ಲಿಂಗಾಯತ ಸಮುದಾಯಗಳಲ್ಲಿ ಅಣಬೆ ಸೇವನೆಯನ್ನು ನಿಷೇಧಿಸಲು ಅಥವಾ ಸಾಂಪ್ರದಾಯಿಕವಾಗಿ ದೂರವಿಡಲು ಕೆಲವು ಪ್ರಮುಖ ಧಾರ್ಮಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ಹಿಂದೂ ಧರ್ಮದ ಆಹಾರ ಪದ್ಧತಿಯಲ್ಲಿ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಜೈನ ಧರ್ಮದಲ್ಲಿ ಅಣಬೆ ಸೇವನೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಜೈನ ಆಹಾರ ಪದ್ಧತಿಯು ಪ್ರಪಂಚದಲ್ಲೇ ಅತ್ಯಂತ ಸೂಕ್ಷ್ಮ ಹಾಗೂ ಅಹಿಂಸಾತ್ಮಕ ನಿಯಮಗಳನ್ನು ಒಳಗೊಂಡಿದ್ದು, ಅಣಬೆಗಳನ್ನು ನಿಷೇಧಿಸಲು ಧಾರ್ಮಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕವಾಗಿ ಬಲವಾದ ಕಾರಣಗಳಿವೆ.
ಜೈನ ಗ್ರಂಥಗಳ ಪ್ರಕಾರ ಅಣಬೆಯನ್ನು 'ಅನಂತಕಾಯ' (ಒಂದೇ ಶರೀರದಲ್ಲಿ ಅನಂತ ಜೀವಿಗಳು ನೆಲೆಸಿರುವ ಜಾಗ) ಎಂದು ಪರಿಗಣಿಸಲಾಗುತ್ತದೆ.
ಒಂದು ಸಣ್ಣ ಅಣಬೆಯನ್ನು ಕಿತ್ತಾಗ ಅಥವಾ ಬೇಯಿಸಿದಾಗ ಅದರಲ್ಲಡಗಿರುವ ಲಕ್ಷಾಂತರ ಸೂಕ್ಷ್ಮ ಜೀವಿಗಳ ಹಿಂಸೆಯಾಗುತ್ತದೆ.
ತಾಮಸಿಕ ಮತ್ತು 'ಜಮೀಕಂದ್' (ಗೆಡ್ಡೆ-ಗೆಣಸು) ವರ್ಗೀಕರಣ
ಜೈನ ಧರ್ಮದಲ್ಲಿ ಭೂಮಿಯ ಒಳಗಡೆ ಬೆಳೆಯುವ ಗೆಡ್ಡೆ-ಗೆಣಸುಗಳನ್ನು (ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಇತ್ಯಾದಿ) ನಿಷೇಧಿಸಲಾಗಿದೆ ಅಣಬೆಗಳು ಭೂಮಿಯ ಒಳಗೆ ಬೆಳೆಯದಿದ್ದರೂ ಅವುಗಳ ಗುಣಲಕ್ಷಣಗಳು ಜಮೀಕಂದ್‌ಗಿಂತಲೂ ಕಡು ತಾಮಸಿಕವಾಗಿರುತ್ತವೆ.
ಬ್ರಾಹ್ಮಣ ಅಥವಾ ಲಿಂಗಾಯತ ಸಂಪ್ರದಾಯದಲ್ಲಿ ಅಣಬೆಯನ್ನು ಕೇವಲ ತಾಮಸಿಕ ಅಥವಾ ಅಶುದ್ಧ ಎಂದು ದೂರವಿಟ್ಟರೆ ಜೈನ ಧರ್ಮದಲ್ಲಿ ಇದನ್ನು ಕಟ್ಟುನಿಟ್ಟಾದ 'ಹಿಂಸೆ' (ಜೀವಹತ್ಯೆ) ಎಂದು ಪರಿಗಣಿಸಲಾಗುತ್ತದೆ.
ಆಹಾರ ನಿಯಮಗಳನ್ನು ನಿರ್ದೇಶಿಸುವ ಮನುಸ್ಮೃತಿ ಮತ್ತು ಇತರ ಧರ್ಮಶಾಸ್ತ್ರಗಳಲ್ಲಿ ಕೆಲವು ನಿರ್ದಿಷ್ಟ ಪದಾರ್ಥಗಳನ್ನು ತಿನ್ನಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಪ್ರಾಚೀನ ಕಾಲದ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿ
ಹಳೆಯ ಕಾಲದಲ್ಲಿ ಕಾಡುಗಳಲ್ಲಿ ಸಿಗುವ ವಿಷಕಾರಿ ಅಣಬೆಗಳು ಮತ್ತು ತಿನ್ನಬಹುದಾದ ಅಣಬೆಗಳ ನಡುವೆ ವ್ಯತ್ಯಾಸ ಗುರುತಿಸುವುದು ಕಷ್ಟವಾಗಿತ್ತು ತಪ್ಪು ಅಣಬೆ ತಿಂದರೆ ಪ್ರಾಣಕ್ಕೆ ಅಪಾಯವಿರುತ್ತಿತ್ತು ಹಾಗಾಗಿ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಇಡೀ ಅಣಬೆ ವರ್ಗವನ್ನೇ ಆಹಾರ ಪಟ್ಟಿಯಿಂದ ಹೊರಗಿಡುವ ನಿಯಮವನ್ನು ಅಂದಿನ ಹಿರಿಯರು ತಂದಿರಬಹುದು ಎಂಬ ವೈಜ್ಞಾನಿಕ ತರ್ಕವೂ ಇದೆ.
ಪ್ರಸ್ತುತ ದಿನಗಳಲ್ಲಿ ವೈಜ್ಞಾನಿಕವಾಗಿ ಬೆಳೆಸುವ ಅಣಬೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದರೂ ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಇಂದಿಗೂ ಬ್ರಾಹ್ಮಣ - ಜೈನ ಮತ್ತು ಲಿಂಗಾಯಿತ ಸಮುದಾಯಗಳ ಹಿರಿಯರು ಹಾಗೂ ಆಚರಣೆಗಾರರು ಇದನ್ನು ಬಳಸುವುದಿಲ್ಲ.
#mushrooms #malenadu #westernghats #mansoon
Comments
Post a Comment