ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.
#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.
ನಾಡಿನ ಪ್ರಖ್ಯಾತ ಶ್ರೀಮತಿ #ನಂದಿನಿ ಮತ್ತು #ಆಕರ್ಷ ಅವರ #ಡಿಜಿಟಲ್_ಮಾಧ್ಯಮದಲ್ಲಿ ಪ್ರಸಾರವಾದ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಎಪಿಸೋಡುಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟವರು ಲೋಕರಾಜ್ ಜೈನ್.
#ರಾಜೇಂದ್ರ_ಸಿಂಗ್_ಬಾಬು ಅವರ ನಿರ್ದೇಶನದಲ್ಲಿ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿಯ ಸಿನಿಮಾ ನಿರ್ಮಾಣದ ಚಿತ್ರಿಕರಣ ಪೂರ್ವದ ಕೆಲಸಗಳು ನಡೆಯುತ್ತಿದೆ.
ದರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ವಿರೇಂದ್ರಹೆಗ್ಗಡೆ ಅರ್ಪಿಸುವ #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ ಸಿನಿಮಾದ ಚಿತ್ರಕಥೆ ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ನಾಗರಾಜ ಹಂಪನಾ ಮತ್ತು ಸಾಗರದ ಲೋಕರಾಜ್ ಜೈನ್ ಜಂಟಿಯಾಗಿ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾತದ #ಹೆನ್ನೆ ಊರಿನ ಲೋಕರಾಜ್ ಜೈನ್
ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಇತಿಹಾಸ ಸಂಶೋದಕರು.
ಇವರು ರಾಣಿ ಚೆನ್ನ ಬೈರಾದೇವಿ ವಂಶಸ್ಥರೂ ಹೌದು, ಗೇರುಸೊಪ್ಪೆಯ ಸಾಳ್ವ ವಂಶದ ಇತಿಹಾಸದ ಸಂಶೋಧನೆ ಕೆಲಸದಲ್ಲಿ ಅನೇಕ ದಶಕದಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತೊಡಗಿಕೊಂಡವರು.
ನನ್ನ ಇವರ ಪರಿಚಯ ಆಗಿದ್ದು ತುಮರಿ ಸಮೀಪದ #ಹಾಳಸಸಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ #ಚಂದ್ರಕುಮಾರರಿಂದ.
ಇವರ ಬಗ್ಗೆ ಪೇಸ್ ಬುಕ್ ನಲ್ಲಿ ಪರಿಚಯ ಲೇಖನ ಆಗ ಬರೆದಿದ್ದೆ ನಂತರ ಶಿವಮೊಗ್ಗ ಜಿಲ್ಲೆಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಕೆಲಸಕ್ಕಾಗಿ ಕನ್ನಡದ ಖ್ಯಾತ ಯೂ ಟ್ಯಾಬ್ ಚಾನಲ್ #ಡಿಜಿಟಲ್_ಮಾಧ್ಯಮದ ಶ್ರೀಮತಿ ನಂದಿನಿ ಮತ್ತು ಆಕರ್ಷ ನನ್ನ ಅತಿಥಿ ಆಗಿ ಬಂದಾಗ ಅವರಿಗೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಇತಿಹಾಸ ಹೇಳುವ ಮಾರ್ಗದರ್ಶಿ ಆಗಿ ಲೋಕರಾಜ್ ಜೈನರನ್ನ ಪರಿಚಯಿಸಿದ್ದೆ.
ನಾಚಿಕೆ ಸ್ವಭಾವದ, ಪ್ರಚಾರ ಪ್ರಿಯರಲ್ಲದ ಲೋಕರಾಜ್ ಪ್ರಾರಂಭದಲ್ಲಿ ಒಪ್ಪಲಿಲ್ಲ ನನ್ನ ಒತ್ತಾಯಕ್ಕೆ ಒಪ್ಪಿದರು ನಂತರ ಈ ಎಲ್ಲಾ ಎಪಿಸೋಡುಗಳು ಲೋಕ ವಿಖ್ಯಾತಿಯಾಗಿ ಪ್ರತಿ ಎಪಿಸೋಡು ಕೋಟಿಗಿಂತ ಹೆಚ್ಚು ವೀಕ್ಷಣೆ ಆಗಿತ್ತು.
ಇವರ ಈ ಕಾರ್ಯಕ್ರಮದ ವೀಕ್ಷಕ ವಿವರಣೆ ನೋಡಿದ ಚಿತ್ರ ನಟ #ದೊಡ್ಡಣ್ಣ ನನಗೆ ಫೋನ್ ಮಾಡಿ ಇವರನ್ನ ಹೊಗಳಿದ್ದರು ಮತ್ತು ಲೋಕರಾಜ್ ಜೈನರ ಫೋನ್ ನಂಬರ್ ಪಡೆದು ಅವರಿಗೆ ತಮ್ಮ ಅಭಿನಂದನೆ ತಿಳಿಸಿದ್ದರು.
ಅಷ್ಟು ಚೆನ್ನಾಗಿ 400 ವರ್ಷಗಳ ಹಿಂದೆ ಆಡಳಿತ ನಡೆಸಿದ ರಾಣಿ ಚೆನ್ನ ಬೈರಾದೇವಿ ಇತಿಹಾಸವನ್ನ ಗೇರುಸೊಪ್ಪೆಯ ವಂಶಸ್ಥರ ಕೋಟೆ, ಕೊತ್ತಳ, ಅವರು ನಿರ್ಮಿಸಿದ ಬಸದಿ - ದೇವಸ್ಥಾನ, ಕಾಳು ಮೆಣಸಿನ ಸಂಸ್ಕರಣದ ಬಾವಿಗಳು, ಕುಚಲಕ್ಕಿಕಣಗಳು, ಶರಾವತಿ ನದಿಯ ದಂಡೆಯಲ್ಲಿ ಆ ಕಾಲದಲ್ಲಿ ದೊಣಿಗೆ ಕಾಳು ಮೆಣಸಿನ ಚೀಲಗಳನ್ನ ತುಂಬಲು ನಿರ್ಮಿಸಿದ ಕಟ್ಟೆಗಳು, ಅವರ ಸಂಸ್ಥಾನದಲ್ಲಿ ಎತ್ತಿನ ಮೇಲೆ ಸಾಮಗ್ರಿ ಸಾಗಾಟ ಮಾಡುತ್ತಿದ್ದ ಹೇರು ಮಾರ್ಗಗಳಲ್ಲಿ ಮತ್ತು ನಿಧಿ ಚೋರರು ಬುಡ ಮೇಲು ಮಾಡಿದ ಅವಶೇಷದ ಸ್ಥಳಗಳಿರುವ ಅತ್ಯಂತ ದುರ್ಗಮ ದಟ್ಟ ಅರಣ್ಯ ಪ್ರದೇಶಗಳಿಗೆ ಡಿಜಿಟಲ್ ಮಾಧ್ಯಮದ ಚಾನಲ್ ನವರನ್ನ ಕರೆದೊಯ್ದು ರಾಣಿ ಚೆನ್ನ ಬೈರಾದೇವಿ ಕಥೆ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದವರು ಈ ಲೋಕರಾಜ್ ಜೈನ್.
ಈಗ ಇವರಿಗೆ ಸಿನಿಮಾ ಜಗತ್ತಿಗೆ ಚೆನ್ನ ಬೈರಾದೇವಿ ಚಿತ್ರಕಥೆ ಬರೆಯುವ ಅವಕಾಶ ನಾಡೋಜ ನಾಗರಾಜ ಹಂಪನಾರ ಜೊತೆ ಸಿಕ್ಕಿರುವುದು ವಿಶೇಷ ಮತ್ತು ನಮಗೆಲ್ಲ ಹೆಮ್ಮೆಯ ವಿಷಯ ಕೂಡ.
ಈ ಸಿನಿಮಾ ಯಶಸ್ವಿ ಆಗಲಿ ನಮ್ಮ ಸಾಗರ ತಾಲೂಕಿನ ಇತಿಹಾಸ ಸಂಶೋಧಕ ಲೋಕರಾಜ ಜೈನರಿಗೆ ಖ್ಯಾತಿ ಮತ್ತು ಕೀರ್ತಿಗಳು ದೊರೆಯಲಿ ಎಂದು ಹಾರೈಸುತ್ತೇನೆ.
#darmasthala #veerendraheggade
#lokarajjain #gerusoppe #rajendrasingbabu #kannadacinema #chennabyradevi #digitalmadyama #nandini
Comments
Post a Comment