Skip to main content

4027. ಜೇನಿ ಮಂಜುನಾಥ ಭಟ್ಟರು

ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ...

#ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ.

  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ.

  ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ.

   ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ.
 
  ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ.

   #ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು.

   ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ದಲ್ಲಾಳಿಗಳಿಗೆ ವ್ಯಾಪಾರಸ್ಥರಿಗೆ ಅವರು ಮಾರಾಟ ಮಾಡುವುದಿಲ್ಲ.

  ಇಷ್ಟು ಕಡಿಮೆ ಬೆಲೆಗೆ ಅಡಿಕೆ ಸಸಿ ಮಾರಾಟ ಮಾಡುವ ಇವರಿಗೆ ಹೀಗೇಕೆ ಅಂದರೆ ಅವರು ಹೇಳುವುದು "ನಾನು ನಷ್ಟ ಮಾಡಿಕೊಂಡು ಅಡಿಕೆ ಸಸಿ ಮಾರುತ್ತಿಲ್ಲ ಇದರಲ್ಲಿ ನನ್ನ ಶ್ರಮಕ್ಕೆ ತಕ್ಕ ಲಾಭ ಇದ್ದೇ ಇದೆ ಆದರೆ ಅಡಿಕೆ ಸಸಿಗೆ ಬೇಡಿಕೆ ಇದೆ ಅಂತ ದುರಾಸೆಯಿಂದ ಐದಾರು ಪಟ್ಟು ಬೆಲೆ ಹೆಚ್ಚು ಮಾಡುವುದು ಸರಿಯಲ್ಲ" ಎನ್ನುತ್ತಾರೆ.

   ನರ್ಸರಿಯಿಂದ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಇವರೂ ಸುಖಿ ಇವರ ಕೆಲಸಗಾರರ ಕುಟುಂಬಗಳು ಸುಖವಾಗಿದ್ದಾರೆ, ಇವರಲ್ಲಿನ ಖಾಯಂ ಪ್ರಾಮಾಣಿಕ ಕೆಲಸಗಾರರ ಮಕ್ಕಳು ಉನ್ನತ ವ್ಯಾಸಂಗ ಮಾಡಲು  ಅವರಿಗೆ ಭಟ್ಟರ ಸಹಾಯ ಮಾಡುತ್ತಾರೆ.

 ಭಟ್ಟರೇ ತಮ್ಮ ಸ್ವಂತ ದುಡಿಮೆಯ ಲಾಭದಲ್ಲಿ ಕೆಲಸದವರಿಗೆ ಹತ್ತಾರು ಲಕ್ಷದ  ಮೌಲ್ಡ್ ಮನೆ ಕಟ್ಟಿ ಕೊಟ್ಟಿದ್ದಾರೆ.

  ಇನ್ನೊಂದು ವಿಶೇಷ ಏನೆಂದರೆ ಊರಿನ ಎಲ್ಲರ ತೋಟಗಳಲ್ಲಿ ಉಪಟಳ ನೀಡುವ ಮಂಗಗಳು ಇವರ ತೋಟದಲ್ಲಿ ಮಾತ್ರ ತೊಂದರೆ ಕೊಡುವುದಿಲ್ಲ ಯಾಕೆ ಅಂತ ನೀವು ಅವರಲ್ಲಿಗೆ ಹೋದಾಗ ವಿಚಾರಿಸಿ.

    ಮಂಜುನಾಥ ಭಟ್ಟರ ಮನೆಯಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಇದೆ ಮತ್ತು ಅವರೆಲ್ಲರ ಒಟ್ಟಿಗೇ ಕುಳಿತು ಊಟ ಮಾಡುತ್ತಾರೆ.

   ಮಂಜುಶ್ರೀ ನರ್ಸರಿಯ ಜೇನಿ ಮಂಜುನಾಥ ಭಟ್ಟರ ಸಂಪರ್ಕ ಮಾಹಿತಿ ಲಿಂಕ್ #ಕಾಮೆಂಟ್_ಬಾಕ್ಸ್ ನಲ್ಲಿದೆ ನೋಡಿ.

#jeni #kodur #𝐌𝐚𝐧𝐣𝐮𝐬𝐡𝐫𝐞𝐞 #nursery #hosanagara
#shivamogga #arecaplant #arecapalm #arecanut

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...