ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5.
ಈ ಸರಣಿ ಲೇಖನ ಮಾಲೆಗೆ ಅಭೂತಪೂವ೯ ವೀಕ್ಷಣೆ - ಪ್ರತಿಕ್ರಿಯೆಗಳು ಬರುತ್ತಿರುವುದು ನನಗೆ ಮತ್ತೆ ಮತ್ತೆ ಬರೆಯಲು ಹುಮ್ಮಸ್ಸು ತರುತ್ತಿದೆ.
ವಲಸೆ ಎಂಬುದು ನಿರಂತರ ಮತ್ತು ಸರ್ವಕಾಲಿಕ ಸತ್ಯ, ಜಗತ್ತು ಇರುವವರೆಗೂ ವಲಸೆ ನಿಲ್ಲಲು ಸಾಧ್ಯವೇ ಇಲ್ಲ ಏಕೆಂದರೆ ಪ್ರಕೃತಿ ನಿಯಮ ಮತ್ತು ಮಾನವನ ಆಸೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ.
ಕರಾವಳಿ ಭಾಗದ ಜನರು ವಿಶೇಷವಾಗಿ ದಕ್ಷಿಣ ಕನ್ನಡ - ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಜಾತಿ ಧರ್ಮದ ಜನರು ಮಲೆನಾಡು ಮತ್ತು ಘಟ್ಟದ ಮೇಲಿನ ಶಿವಮೊಗ್ಗ - ಚಿಕ್ಕಮಗಳೂರು - ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ನಡೆಸಿದ ವಲಸೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂದು ಪರಿಗಣಿಸ ಬಹುದು.
#ಕರಾವಳಿಗರ ಘಟ್ಟದ ವಲಸೆಯನ್ನು ವಿಶ್ವದ ಮೂರು ಪ್ರಮುಖ ವಲಸೆಗಳಾದ #ಅಮೇರಿಕಾ_ಪಶ್ಚಿಮ ವಲಸೆ, #ಯುರೋಪಿನ_ಹ್ಯೂಗೆ_ನಾಟ್ಸ್ ವಲಸೆ ಮತ್ತು 1840 ರ ದಶಕದ ಕ್ಯಾಲಿಫೋರ್ನಿಯಾದ #ಚಿನ್ನದ_ಗಣಿ_ವಲಸೆ ಜೊತೆ ಸಮೀಕರಿಸಬಹುದೆಂದು #ಅಮೇರಿಕನ್_ಹಿಸ್ಟಾರಿಕಲ್_ಅಸೋಸಿಯೇಷನ್ ಲೇಖನದಲ್ಲಿ ಉಲ್ಲೇಖಿಸಿದೆಯಂತೆ ಆದ್ದರಿಂದ ನಮ್ಮ ಕರ್ನಾಟಕದ ಕರಾವಳಿಯ ಜನರ ಘಟ್ಟದ ವಲಸೆ ಮಹತ್ವದ ವಲಸೆ ವಿಚಾರವಾಗಿದೆ.
ನಾನು ಕೂಡ ಈ ರೀತಿಯೇ ಕರಾವಳಿಯಿಂದ ಘಟ್ಟಕ್ಕೆ ವಲಸೇ ಬಂದ ಕುಟುಂಬಕ್ಕೆ ಸೇರಿದವನು ಆದ್ದರಿಂದ ನನಗೆ ಕರಾವಳಿ ಜನರ ಈ ವಲಸೆ ಬಗ್ಗೆ ಸಹಜ ಕುತೂಹಲ ಯಾವತ್ತಿನಿಂದಲೂ ಇದೆ.
ನನ್ನ ತಂದೆ ಕೃಷ್ಣಪ್ಪರ ತಾಯಿ ಅಬ್ಬಕ್ಕ #ಕಾಪು ಮೂಲದ ತುಳುವರು ನಂತರ ಅವರ ಕುಟುಂಬ ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ #ಬೆಣ್ಣೆಕುದುರಿನಲ್ಲಿ ನೆಲೆಸಿದವರು ನಂತರ ಅವರು 1890 ರ ಸುಮಾರಿಗೆ ಘಟ್ಟ ಹತ್ತಿ ಆನಂದಪುರಂಗೆ ಬಂದವರು.
ನನ್ನ ತಾಯಿ ಸರಸಮ್ಮ ಮತ್ತು ಅವರ ಅಕ್ಕ ನನ್ನ ದೊಡ್ಡಮ್ಮ ಅವರ ಕುಟುಂಬಗಳು ಕೂಡ ಕುಂದಾಪುರದ ಬಸ್ರೂರಿನ ಹಿರಿಕೆರೆ ಎಂಬ ಊರಿನಿಂದ ಘಟ್ಟಕ್ಕೆ ಬಿದನೂರು ನಗರದ ದೇವಗಂಗೆಗೆ
ವಲಸೆ ಬಂದವರದ್ದೇ ಆಗಿದೆ.
ನಮ್ಮ ತಾಯಿಯ ಅಣ್ಣ ಅಂದರೆ ನನ್ನ ಮಾವ ಗಣಪ ನಾಯಕರು ಕೂಡ ಸೇರೆಗಾರರ ಜೊತೆ ಕರಾವಳಿಯಿಂದ ಘಟ್ಟಕ್ಕೆ ಬಂದು ಹಂಗಾಮಿನ ಕೆಲಸ ಮುಗಿಸಿ ವಾಪಾಸು ತೆರಳುತ್ತಿದ್ದವರ ಗುಂಪಿನಲ್ಲಿದ್ದವರು.
ನಾವೆಲ್ಲ ಈಗ ನೂರಾ ಮುವ್ವತ್ತಾರು ವರ್ಷಗಳ ಕಾಲಾವದಿಯಲ್ಲಿ ಘಟ್ಟ ವಾಸಿಗಳೇ ಆಗಿಬಿಟ್ಟಿದ್ದೇವೆ,ತಂದೆ ಕುಟುಂಬದ ಮೂಲ ಭಾಷೆ ತುಳು ಮತ್ತು ತಾಯಿ ಮೂಲದ ಕುಂದಾಪುರ ಕನ್ನಡ ಎರಡನ್ನೂ ನಾವೆಲ್ಲ ಮರೆತೇ ಬಿಟ್ಟವರಾಗಿದ್ದೇವೆ.
ಘಟ್ಟದ ಆನಂದಪುರಂನಲ್ಲಿ ನಮ್ಮ ಅಜ್ಜಿಯ ಮೂಲ ಮನೆ ಹುಲ್ಲಿನ ಮನೆ ಮತ್ತು ಮಣ್ಣಿನ ಗೋಡೆಯದ್ದಾಗಿತ್ತು ಅದರ ಜಗಲಿ ವಿಶಾಲವಾಗಿದ್ದರಿಂದ ಅಲ್ಲಿ ಕರಾವಳಿಯಿಂದ ಸಾಗರ ತಾಲೂಕಿನ ಕಡೆ ಬರುವ ಸೇರೆಗಾರರ ತಂಡಕ್ಕೆ ಆ ಜಗುಲಿ ಆಶ್ರಯ ನೀಡುತ್ತಿತ್ತು.
ನನ್ನ ಅಜ್ಜಿ #ಕಲ್ಲುಡ್ಕ_ವರ್ತೆ ದೈವ ಪಾತ್ರಿ ಆಗಿದ್ದು ಮತ್ತು ಕಲ್ಲುಡ್ಕ ದೇವರನ್ನ ಘಟ್ಟಕ್ಕೆ ತಂದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಭಯ- ಭಕ್ತಿ ಮತ್ತು ಗೌರವ ನನ್ನಜ್ಜಿ ಮೇಲೆ ಕರಾವಳಿಯ ಭಾಗದ ಜನರಲ್ಲಿತ್ತು.
ಆಗೆಲ್ಲ ನನ್ನ ಬಾಲ್ಯದಲ್ಲಿ ನನ್ನಜ್ಜಿ, ತಂದೆ, ತಾಯಿ, ಮಾವ ಮತ್ತು ಸಂಬಂದಿಕರ ಮಾತುಗಳಲ್ಲಿ ಘಟ್ಟದ ಯಾತ್ರೆ ಕಷ್ಟದ ಕಥೆಯ ಉಲ್ಲೇಖಗಳನ್ನು ನಾನು ಆಸಕ್ತಿಯಿಂದ ಕೇಳುತ್ತಿದ್ದೆ.
ಬಾಲ್ಯದಲ್ಲಿ ನನ್ನ ಸೋದರ ಮಾವನಿಗೆ ಕಥೆ ಹೇಳಲು ದಂಬಾಲು ಬಿದ್ದಾಗೆಲ್ಲ ಅವರು ಹೇಳುತ್ತಿದ್ದ ಸೇರೆಗಾರನನ್ನ ನುಂಗಿದ ಹೆಬ್ಬಾವು ಕಥೆ ಆ ವಯಸ್ಸಲ್ಲಿ ಸತ್ಯವೆಂದೇ ಭಾವಿಸಿದ್ದೆ, ನನ್ನ ಕಥಾ ಸಂಕಲನ #ಬಿಲಾಲಿಬಿಲ್ಲಿ_ಅಭ್ಯಂಜನದಲ್ಲಿ ಅದನ್ನು ನಾನು #ಮಾವ ಹೇಳಿದ ಕಥೆ ಆಗಿ ಬರೆದು ಪ್ರಕಟಿಸಿದ್ದೇನೆ.
ಈ ರೀತಿ ಘಟ್ಟದ ವಲಸೆ ಕಥೆಗಳು ಟಿಪ್ಪಣಿಗಳನ್ನು ಅನೇಕ ವರ್ಷಗಳಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದೆ ಆದರೆ ಅದನ್ನ ಕ್ರಮವಾಗಿ ಬರೆಯುವ ಕಾಲ ಬಂದಿರಲಿಲ್ಲ.
ಇತ್ತೀಚಿಗೆ ನನ್ನ ಅಜ್ಜಿ ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರು ತೀರ್ಥಹಳ್ಳಿಯ #ಸೊಪ್ಪುಗುಡ್ಡೆ_ರಾಮಣ್ಣಪಾತ್ರಿಗಳ ಮನೆಗೆ 75 ವರ್ಷದ ಹಿಂದೆ ನನ್ನ ಅಜ್ಜಿ ತನ್ನ ಅಕ್ಕನ ಮಗಳು ಅಳಿಯನ ಮನೆಗೆ ನೀಡಿದ್ದರು.
ಅಲ್ಲಿನ ದೇವಸ್ಥಾನ ಪುನರ್ನಿರ್ಮಾಣ ಮತ್ತು ಪ್ರತಿಷ್ಟಾಪನೆ ಆದ ಬಗ್ಗೆ ನಾನು ಬರೆದ ಲೇಖನ ಓದಿದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಅವರು ಘಟ್ಟಕ್ಕೆ ಕರಾವಳಿ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ನನಗೆ ಈ ಲೇಖನ ಸರಣಿ ಬರೆಯಲು ಕಾರಣವಾಯಿತು.
ಈಗ ಈ ಎಲ್ಲಾ ಲೇಖನ ಪುಸ್ತಕ ಮಾಡಿ ಅದನ್ನು ಪ್ರಕಟಿಸುತ್ತೇನೆ ಎಂದು ಬೆಹರೇನ್ ನಲ್ಲಿ ನೆಲೆಸಿರುವ ಕರಾವಳಿ ಕುಂದಾಪುರದ ದೀಪು ಶೆಟ್ಟರು ವಿನಂತಿಸಿದ್ದಾರೆ.
#coastal #kundapura #westernghats #migration #arecafarming #cofeeestate #kodagu #hassan #chikkamagalore #shovamogga
Comments
Post a Comment