ಕಾಳುಮೆಣಸಿನ_ರಾಣಿ_ಚೆನ್ನಭೈರಾದೇವಿ
ನಿಶಿದಿ_ಸ್ಮಾರಕ_ಶಾಸನ_ಮಾಹಿತಿ
ಇತಿಹಾಸ_ಆಸಕ್ತರಿಗೆ_ಮತ್ತು_ಸಂಶೋದಕರಿಗೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಳ್ಳಿಯಲ್ಲಿ ಸಾಳ್ವ ವಂಶದ ಜೈನರಾಣಿ ಚೆನ್ನ ಬೈರಾದೇವಿ ಸಮಾದಿ ಇದೆ.
ಈ ಸ್ಥಳದ ಬಗ್ಗೆ ನಿಮಗೆ ಮಾಹಿತಿ ಇದಿಯಾ?....
ರಾಣಿ ಚೆನ್ನ ಬೈರಾದೇವಿ ಸಮಾದಿ ಸ್ಥಳದ ನಿಶಿದಿ ಶಾಸನ ಹೇಗಿತ್ತು ಗೊತ್ತಾ...
#ಡಿಜಿಟಲ್_ಮಾಧ್ಯಮ ಎಂಬ ಖ್ಯಾತ ಕನ್ನಡದ ಯು ಟ್ಯೂಬ್ ಚಾನಲ್ ನಲ್ಲಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ದಾರಾವಾಹಿ ಆಗಿ ಬಂದ ನಂತರ ರಾಣಿ ಚೆನ್ನ ಬೈರಾದೇವಿ ಇತಿಹಾಸದ ಬಗ್ಗೆ ಜನಮಾನಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು ಕೋಟ್ಯಾಂತರ ವೀಕ್ಷಣೆ ಆಯಿತು.
ಡಿಜಿಟಲ್ ಮಾಧ್ಯಮದ ಶ್ರೀಮತಿ #ನಂದಿನಿ ಆಕರ್ಷ ದಂಪತಿಗಳು ಗೇರುಸೊಪ್ಪೆ ಕಾಳುಮೆಣಸಿನ ರಾಣಿ, #ಕೆಳದಿ ಸಂಸ್ಥಾನ, #ಕುವೆಂಪು, #ನೀನಾಸಂ, ಶಿವಮೊಗ್ಗದ #ಸಿಂಹದಾಮ ಮತ್ತು ಸಕ್ಕರೆಬೈಲಿನ #ಆನೆಕ್ಯಾಂಪ್ ಎಪಿಸೋಡು ಅತ್ಯಂತ ಆಕರ್ಷವಾಗಿ ನಿರ್ಮಿಸಿದ್ದಾರೆ ಈ ಎಪಿಸೋಡುಗಳ ಚಿತ್ರಿಕರಣ ಮತ್ತು ಎಡಿಟಿಂಗ್ ಮಾಡುವಾಗ ಅವರಿಗೆ ನಾನು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಮೂಲಕ ಅತಿಥೇಯರಾಗಿದ್ದು ನಮಗೆ ಹೆಮ್ಮೆಗೆ ಕಾರಣ ಆಯಿತು, ನಮ್ಮ ಜಿಲ್ಲೆಯ ಇತಿಹಾಸದ ಕಥೆ ಡಿಜಲೀಕರಣದ ಕೆಲಸಕ್ಕೆ ಇದು ನನ್ನ ಸಣ್ಣ ಸಹಾಯ ಕೂಡ.
ಇದರ ಜೊತೆ ನಮ್ಮ ತಾಲ್ಲೂಕಿನ ಖ್ಯಾತ ಸಾಹಿತಿ #ಗಜಾನನಶರ್ಮರು ಬರೆದ ಕಾಳುಮೆಣಸಿನ ರಾಣಿ ಬೃಹತ್ ಕಾದಂಬರಿ ಮತ್ತು ಖ್ಯಾತ ಪಿಕ್ಷನ್ ಕಾದಂಬರಿಕಾರ #ಗಣೇಶಯ್ಯ ಬರೆದ ಬೆಳ್ಳಿ ಕಾಳು ಕಾದಂಬರಿಗಳು ಕೂಡ ಓದುಗರನ್ನ ಬಡಿದೆಬ್ಬಿಸಿತು.
2013ರಲ್ಲಿ ರಾಣಿ ಚೆನ್ನ ಬೈರಾದೇವಿ ಸಿನಿಮಾ ಚಿತ್ರಿಕರಣ ಪ್ರಾರಂಭವಾಗಿ ಕಾರಣಾಂತರದಿಂದ ನಿಂತು ಹೋಯಿತು ಈಗ ಖ್ಯಾತ ನಿರ್ದೇಶಕ #ರಾಜೇಂದ್ರ_ಸಿಂಗ್_ಬಾಬು ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಎಂಬ ಸಿನಿಮಾ ತಯಾರಿ ನಡೆಸಿದ್ದಾರೆ.
ಇದೆಲ್ಲ ಬೆಳವಣಿಗೆಗಳು ಅನೇಕ ಸ್ಥಳೀಯ ಇತಿಹಾಸ ಆಸಕ್ತರಿಗೆ ಚೆನ್ನ ಬೈರಾದೇವಿ ಸಮಾದಿ ಸ್ಥಳ ಹುಡುಕುವ ಆಸಕ್ತಿಗೆ ಕಾರಣವಾಗಿದೆ ಮತ್ತು ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿನ ಕೆಲವು ವೀರಕಲ್ಲುಗಳನ್ನ ಇದು ಚೆನ್ನ ಬೈರಾದೇವಿ ಸಮಾಧಿಯ ಶಾಸನಗಳಾ? .. ಎಂದು ಕೇಳುತ್ತಿದ್ದಾರೆ, ಅವರ ಇತಿಹಾಸ ಆಸಕ್ತಿ ಪ್ರಶಂಸನೀಯ ಅವರಿಗೆ ಅಭಿನಂದಿಸುತ್ತೇನೆ.
226 ವರ್ಷಗಳ ಹಿಂದೆ ಬ್ರಿಟಿಷ್ ಇತಿಹಾಸ ತಜ್ಞ ಭಾರತದ ಮೊದಲ ಸರ್ವೆಯರ್ ಜನರಲ್ #ಕರ್ನಲ್_ಕಾಲಿನ್_ಮೆಕೆಂಜೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿರುವ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಸಮಾಧಿ ಮತ್ತು ಅಲ್ಲಿದ್ದ ನಿಶದಿ ಶಾಸನ ದಾಖಲಿಸಿದ್ದಾರೆ ಮತ್ತು ಅದರ ರೇಖಾ ಚಿತ್ರ ಬರೆಸಿದ್ದಾರೆ ಈಗ ಅದು ಬ್ರಿಟನ್ ದೇಶದ ಬ್ರಿಟೀಷ್ ಮ್ಯೂಸಿಯಂನಲ್ಲಿದೆ.
ಆ ರೇಖಾ ಚಿತ್ರ ಮತ್ತು ಮೆಕೆಂಜೆ ದಾಖಲಿಸಿದ ಮಾಹಿತಿ ಈ ಲೇಖನದ ಜೊತೆ ಪ್ರಕಟಿಸಲಾಗಿದೆ ಸ್ಥಳೀಯ ಆಸಕ್ತ ಯುವ ಸಂಶೋಧಕರು ಅಲ್ಲೆಲ್ಲ ಸಂಶೋದನೆ ಮಾಡಿದರೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ನಿಶಿದಿ ಶಾಸನ ಸಿಗುವ ಸಾಧ್ಯತೆ ಇದೆ.
ಈ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡಬೇಕು ಮತ್ತು ಪುರಾತತ್ವ ಇಲಾಖೆ ಈ ಸ್ಥಳ ಸಂರಕ್ಷಿಸಬೇಕು.
ಇವತ್ತಿಗೆ 226 ವರ್ಷದ ಹಿಂದೆ ಕರ್ನಲ್ ಕಾಲಿನ್ ಮೆಕೆಂಜೆ ಮತ್ತು ಅವರ ಪ್ರಮುಖ ಸಹಾಯಕ ರೇಖಾಚಿತ್ರಕಾರರಾದ #ಕಾವಲಿ_ವೆಂಕಟ_ಬೋರಯ್ಯ ಅವರು ಆವಿನಹಳ್ಳಿಯ ರಾಣಿ ಚೆನ್ನಭೈರಾದೇವಿ ನಿಶಿದ್ಧಿ (ಸಮಾಧಿ) ಶಾಸನವನ್ನು ವೀಕ್ಷಿಸಿ ದಾಖಲಿಸಿದ ನಿಖರವಾದ ದಿನಾಂಕ ಸೆಪ್ಟೆಂಬರ್ 1801 (September 1801).
ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಮೆಕೆಂಜೆ ಕಲೆಕ್ಷನ್‌ನ (Mackenzie Collection) ಅಧಿಕೃತ ದಾಖಲೆಗಳ ಪ್ರಕಾರ ಮೈಸೂರು ಸರ್ವೆಯ (Mysore Survey) ಭಾಗವಾಗಿ ಉತ್ತರ ಕನ್ನಡ ಮತ್ತು ಮಲೆನಾಡು ಭಾಗದಲ್ಲಿ ಸಂಚರಿಸುತ್ತಿದ್ದಾಗ 1801ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಶಾಸನದ ಪ್ರತಿ ಹಾಗೂ ರೇಖಾಚಿತ್ರವನ್ನು ಸಿದ್ಧಪಡಿಸಲಾಯಿತು.
ಮೆಕೆಂಜೆಯವರ ಹಸ್ತಪ್ರತಿಗಳ ವಿವರಣೆಯ ಪ್ರಕಾರ ಆವಿನಹಳ್ಳಿಯ ನಿಶಿದ್ಧಿ ಕಲ್ಲಿನ ರೇಖಾಚಿತ್ರವು ಜೈನ ಸ್ಮಾರಕ ಕಲೆಗೆ ಅನುಗುಣವಾಗಿ ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ.
ರಾಣಿ ಚೆನ್ನಭೈರಾದೇವಿಯವರು ತಮ್ಮ ಜೈನ ಗುರುಗಳ ಮುಂದೆ ವಿನಯದಿಂದ ಕುಳಿತು, ಜಪಮಾಲೆ ಹಿಡಿದು ಸಲ್ಲೇಖನ ವ್ರತದ ಉಪದೇಶ ಪಡೆಯುತ್ತಿರುವ ರೇಖಾಚಿತ್ರ ಇಲ್ಲಿದೆ.
ರಾಣಿಯ ಆತ್ಮವನ್ನು ದೇವದೂತರು ಅಥವಾ ಗಂಧರ್ವರು ಪಲ್ಲಕ್ಕಿ ಅಥವಾ ವಿಮಾನದಲ್ಲಿ ಕೂರಿಸಿ ಮೇಲಕ್ಕೆ ಕರೆದೊಯ್ಯುತ್ತಿರುವ ದೃಶ್ಯವಿದೆ.
ಪಕ್ಕದಲ್ಲಿ ಚಾಮರ ಬೀಸುವ ಆಕೃತಿಗಳನ್ನು ಮೆಕೆಂಜೆ ತಂಡದ ಕಲಾವಿದರು ವಿವರವಾಗಿ ಬಿಡಿಸಿದ್ದಾರೆ.
ಕಲ್ಲಿನ ತುತ್ತತುದಿಯಲ್ಲಿ ಜೈನ ತೀರ್ಥಂಕರರು ಹೆಚ್ಚಾಗಿ ಪಾರ್ಶ್ವನಾಥ ಸ್ವಾಮಿ ಪ್ರಭಾವಳಿಯೊಂದಿಗೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದಾರೆ. ಇದು ರಾಣಿಯ ಆತ್ಮಕ್ಕೆ ಸಿದ್ಧಶಿಲೆ ಅಥವಾ ಮೋಕ್ಷ ದೊರೆತಿದ್ದರ ಸಂಕೇತವಾಗಿದೆ.
ಕಾಲದ ಹೊಡೆತಕ್ಕೆ ಸಿಲುಕಿ ಆವಿನಹಳ್ಳಿಯ ಸಾಳ್ವ ಮೂಲದ ರಾಣಿ ಚೆನ್ನ ಬೈರಾದೇವಿ ನಿಶದಿ ಸ್ಮಾರಕವು ಸವೆದುಹೋಗಿರ ಬಹುದು ಅಥವ ಅಲ್ಲೇಲ್ಲೋ ಮಣ್ಣಾಗಿರಬಹುದು ಅದರ ಸಂಪೂರ್ಣ ರೂಪ ಮತ್ತು ಇತಿಹಾಸವನ್ನು ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ಮೆಕೆಂಜೆಯವರ ಈ ರೇಖಾಚಿತ್ರದ ದಾಖಲಾತಿಯು ಅತ್ಯಂತ ಪ್ರಮುಖ ಆಧಾರವಾಗಿದೆ.
#gerusoppe #chennabyradevi #salvadinesty
#avinahalli #NishiDi #jainism #gajananasharma
#ganeshaia #rajendrasingbabu #cinema
Comments
Post a Comment