ಶಿವಮೊಗ್ಗ_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.
1992ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರಿನಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.
ಹಾಗಾಗಿ #ಬೆಳ್ಳೂರು ಎಂಬ ಆ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ ಊರು.
ನನ್ನ ಮಾಲಿಕತ್ವದ #ಪ್ರಶಾಂತ್_ಗ್ರಾಮಾಂತರ_ಸಾರಿಗೆ_ಬಸ್ ರಿಪ್ಪನಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು - ರಿಪ್ಪನ್ ಪೇಟೆ ಆನಂದಪುರಂ- ಸಾಗರ ಮಾಗ೯ದಲ್ಲಿ ಸಂಚಾರಿಸುತ್ತಿತ್ತು.
#ಶೆಟ್ಟಿಹಳ್ಳಿ ಅಭಯಾರಣ್ಯದ ಮಧ್ಯೆ ಶರಾವತಿ ಮುಳುಗಡೆ ಸಂತ್ರಸ್ಥರ ಊರು ಈ ಬೆಳ್ಳೂರು.
ಈ ಹಳ್ಳಿಗೆ ಬಸ್ ಸೌಕರ್ಯ ನೀಡಿದ ನನ್ನ ಉದ್ಯಮದ ಅನುಭವ.
ಇದು ಸಾಧ್ಯವಾಗಿದ್ದು ಆಗಿನ ಉತ್ಸಾಹಿ ಜಿಲ್ಲಾಧಿಕಾರಿ ವಿಜಯಕುಮಾರರ ಗ್ರಾಮಾಂತರ ಸಾರಿಗೆ ಯೋಜನೆ.
ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಸಾರಿಗೆ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಉದ್ಘಾಟಿಸಿದವರು ಆಗಿನ ಮುಖ್ಯಮಂತ್ರಿ ವೀರೆಂದ್ರಪಾಟೀಲರು.
ಆಗಿನ ಸಾರಿಗೆ ಮಂತ್ರಿ ಜಾರ್ಜ್ ಮತ್ತು ಕೃಷಿ ಮಂತ್ರಿ ಬಂಗಾರಪ್ಪರ ಉಪಸ್ಥಿತಿಯ ಉದ್ಘಾಟನೆ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ನಾನು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದೆ.
ಅವತ್ತು ನಮ್ಮ ಸಂಘದಲ್ಲಿ 140 ಗ್ರಾಮಾಂತರ ಸಾರಿಗೆ ಬಸ್ಸುಗಳು ಸಂಚರಿಸುತ್ತಿದ್ದವು.
ಸುಮಾರು 35 ವರ್ಷದ ಹಿಂದೆ ನನಗೆ 26 ರ ಪ್ರಾಯ, ಹೊಸದು ಮತ್ತು ಹೊಸತನದ ಬಗ್ಗೆ ತೆರೆದುಕೊಳ್ಳುವ ಬಿಸಿ ರಕ್ತದ ಹುಮ್ಮಸ್ಸು ನನ್ನದು.
ಆಗ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರು ತಮಿಳುನಾಡು ಮೂಲದ ಐ.ಎ.ಎಸ್ ಅಧಿಕಾರಿ #ವಿಜಯಕುಮಾರ್ ತುಂಬಾ ಜನಪರ ಕಾಳಜಿಯ ಜಿಲ್ಲಾಧಿಕಾರಿಗಳು ಅವರು.
ಶಿವಮೊಗ್ಗ ಜಿಲ್ಲೆಗೆ ಬಂದಾಗ ಇಲ್ಲಿನ ಅನೇಕ ಕುಗ್ರಾಮಗಳಿಗೆ ಆ ಕಾಲದಲ್ಲಿ ರಸ್ತೆ ಇದ್ದರೂ ಬಸ್ ಸೌಕರ್ಯ ಇರಲಿಲ್ಲ.
ಈ ಭಾಗದ ವಿದ್ಯಾರ್ಥಿಗಳಿಗಂತೂ ಇದರಿಂದ ತುಂಬಾ ತೊಂದರೆ ಆಗುತ್ತಿತ್ತು, ಆ ಕಾಲದಲ್ಲಿ ವಿದ್ಯಾಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಾಕಾಗುವಷ್ಟು ಇರಲಿಲ್ಲ, ದ್ವಿಚಕ್ರ ವಾಹನ ಈಗಿನಂತೆ ಎಲ್ಲರೂ ಹೊಂದಿರಲಿಲ್ಲ.
ಖಾಸಾಗಿ ಬಸ್ ಕಂಪನಿಗಳಾದ #ಗಜಾನನ #ಹನುಮಾನ್ #ಕೃಷ್ಣ ಮತ್ತು #ವಿಜಯ_ಮೋಟಾರ್ಸ್ ಗಳ ಮಾನೊಪಲ್ಲಿಯಲ್ಲಿ ಮತ್ತು ಪೈಪೋಟಿಯಲ್ಲಿ ಅವರೂ ತಮ್ಮಬಸ್ ಬಿಡುವುದಿಲ್ಲ, ಬೇರೆಯವರಿಗೆ ಬಸ್ ಪರ್ಮಿಟ್ ಪಡೆದು ಬಸ್ ಓಡಿಸಲು ಬಿಡುವುದಿಲ್ಲ ಎಂಬ ಶಫಥ ಅವರದ್ದು.
ಕೆ .ಎಸ್.ಆರ್. ಟಿ .ಸಿ . ಬಸ್ ಬಿಡಲು ಆಗ ಸಾರಿಗೆ ಇಲಾಖೆ ಈಗಿನ ರೀತಿ ಸಶಕ್ತ ಆಗಿರದ ಕಾಲವದು.
ಆಗ ಶಿವಮೊಗ್ಗ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಆಥಾರಿಟಿ ಛೇರ್ಮನ್ ಆಗಿದ್ದ ಜಿಲ್ಲಾದಿಕಾರಿ ವಿಜಯಕುಮಾರ್ ಒಂದು ಯೋಜನೆ ಜಾರಿ ಮಾಡಿದರು.
ಬಸ್ ಸೌಕರ್ಯ ಅವಶ್ಯವಾಗಿ ಬೇಕಾದ ಮಾರ್ಗಗಳನ್ನ ಗುರುತಿಸಿ ಆ ಲೈನ್ ಗೆ ಬಸ್ ಬಿಡಲು ಖಾಸಾಗಿ ಯುವ ಉದ್ಯಮಿಗಳಿಗೆ ಆಹ್ವಾನಿಸಿ ಪ್ರತಿ ತಾಲ್ಲೂಕಿನಲ್ಲಿ ಜನಸಂಪರ್ಕ ಸಭೆ ಕರೆಯುತ್ತಿದ್ದರು.
ಇದರಿಂದ ಅಸಾಧ್ಯವಾದ ಬಸ್ ಪಮಿ೯ಟ್ ಸರಳವಾಗಿ ಅನೇಕ ಸ್ವಯಂ ಉದ್ಯಮಿಗಳಿಗೆ ದೊರೆಯಿತು ಮತ್ತು ಹೊಸ ಅವಕಾಶ ಉಂಟಾಯಿತು
ಅನೇಕರಿಗೆ ಉದ್ಯೋಗವೂ ಸಿಕ್ಕಿತು.
ಹೊಸನಗರ ತಾಲ್ಲೂಕ್ ಕೇಂದ್ರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಾನು ಬೆಳ್ಳೂರಿನಿಂದ - ರಿಪ್ಪನ್ ಪೇಟೆ - ಆನಂದಪುರಂ - ಸಾಗರ ಮತ್ತು ತಿರುಗಿ ಇದೇ ಮಾರ್ಗದಲ್ಲಿ ಬೆಳ್ಳೂರು ಸೇರಿ ಹಾಲ್ಟ್ ಮಾಡುವ ಬಸ್ ಮಾರ್ಗದಲ್ಲಿ ಬಸ್ ಸೌಕಯ೯ ನೀಡಲು ಅರ್ಜಿ ಸಲ್ಲಿಸಿ ಪರ್ಮಿಟ್ ಪಡೆದಿದ್ದೆ.
ಕೇರಳದ ಕಾಸರಗೋಡಿನಿಂದ ಹಳೇ ಬಸ್ ಒಂದನ್ನು ಖರೀದಿಸಿ ತಂದಿದ್ದು ಅದರದ್ದೇ ಒ0ದು ಕಥೆ.
ಮೊದಲ ದಿನ ಬೆಳ್ಳೂರು ಗ್ರಾಮಸ್ಥರು ನಾನು ಪಡೆದ ಪರ್ಮಿಟ್ ನ #ಪ್ರಶಾಂತ್ ಎಂಬ ಬಸ್ ನ್ನು ಅವರ ಊರಿಗೆ ತಲುಪಿಸಲು ತುಂಬಾ ಶ್ರಮ ಪಟ್ಟರು ಅವತ್ತಿನ ಆ ಊರಿನವರ ಕಾಳಜಿ ಮತ್ತು ಆಸಕ್ತಿಗೆ ನಾನು ಇವತ್ತೂ ಚಿರರುಣಿ.
ಅವತ್ತು ಅವರ ಊರಿಗೆ ನನ್ನ ಬಸ್ಸು ತಲುಪಲು ರಸ್ತೆ ಸರಿಪಡಿಸಿ, ರಸ್ತೆ ಸಂಚಾರಕ್ಕೆ ಅಡ್ಡವಾಗಿದ್ದ ಬಿದಿರು ಮೆಳೆ, ಮರದ ರೆಂಬೆ ಎಲ್ಲಾ ಶ್ರಮದಾನದಿಂದ ತೆರವು ಮಾಡಿಕೊಟ್ಟಿದ್ದು ಮರೆಯಲಾಗುವುದಿಲ್ಲ.
ಬೆಳ್ಳೂರು ಅಭಯಾರಣ್ಯದ ಮಧ್ಯದ ಶರಾವತಿ ಮುಳುಗಡೆಯ ರೈತರು ವಾಸಿಸುತ್ತಿರುವ ಹಳ್ಳಿ 35 ವರ್ಷದ ಹಿಂದೆ ಅವತ್ತು ಕುಗ್ರಾಮ ಆಗಿತ್ತು ಈಗ ದೊಡ್ಡ ಊರಾಗಿದೆ.
ನಂತರ ಜಿಲ್ಲಾದಿಕಾರಗಳಾದ ವಿಜಯಕುಮಾರ್ ಆಸಕ್ತಿ ಮತ್ತು ಅಪೇಕ್ಷೆ ಮೇರೆಗೆ ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ನೇಮಿಸಿದರು.
ಆಗಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು, ಸಾರಿಗೆ ಮಂತ್ರಿ #ಜಾರ್ಜ್ ಮತ್ತು ಕೃಷಿ ಮಂತ್ರಿ #ಬಂಗಾರಪ್ಪರನ್ನ ಕರೆಸಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಗ್ರಾಮಾಂತರ ಸಾರಿಗೆಯ ನೂರಾರು ಬಸ್ಸುಗಳನ್ನು ಮುಖ್ಯಮಂತ್ರಿ #ವಿರೇ೦ದ್ರ_ಪಾಟೀಲರು ಹಸಿರು ಭಾವುಟ ತೋರಿಸಿ ಉದ್ಘಾಟನೆ ಮಾಡಿದ ಐತಿಹಾಸಿಕ ಸಭೆಯಲ್ಲಿ ಪ್ರಸ್ತಾವಿಕ ಭಾಷಣಕ್ಕೆ ನನಗೆ ಅವಕಾಶ ಕಲ್ಪಿಸಿದ್ದು ನನಗೆ ನನ್ನ ಜೀವಮಾನದ ಸವಿ ನೆನಪು.
ನನ್ನ ಬಸ್ಸು ನಂತರ #ನಾಗತಿಹಳ್ಳಿಚಂದ್ರಶೇಖರರ ಮೊದಲ ಚಲನಚಿತ್ರ #ಉಂಡೂಹೋದ_ಕೊಂಡೂಹೋದ ಸಿನಿಮಾದಲ್ಲಿ ನಾಯಕ ನಟ #ಅನಂತನಾಗ್ ಹಳ್ಳಿಗೆ ಬರುವ #ರಾಜಧಾನಿ_ಎಕ್ಸ್_ಪ್ರೆಸ್ ಆಗಿ ಚಿತ್ರಿಕರಣಕ್ಕೆ ಉಪಯೋಗಿಸಿದ ದಾಖಲೆಯೂ ಆಯಿತು.
ಇಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.
ಹಾಗಾಗಿ #ಬೆಳ್ಳೂರು ಎಂಬ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ ಊರು.
#shivamogga #hosanagara #Ripponpete
#bellur #kalase #bus #transport #Bangarappa
#veerendrapatel #NehruStadium #ananthanag
#nagathihallichandrashekar #filmindustry
Comments
Post a Comment