Skip to main content

4032. ಇಡ್ಲಿ ದೋಸಾ ಬ್ಯಾಟರ್ ಉದ್ಯಮದ ಯಶಸ್ಸಿನ ಕಥೆ.

ದಿಡೀರ್_ಇಡ್ಲಿ_ದೋಸೆ_ಹಿಟ್ಟು_ಎಷ್ಟು_ಸಲೀಸು?...

#Idli_Dosa_Batter

ನಿಮಗೆ ನಿಮ್ಮ ಮನೆಯಲ್ಲಿ ತಯಾರಿಸಿದ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ಅಥವ ಈ ರೆಡಿಮೇಡ್ ಇಡ್ಲಿ- ದೋಸೆ ಬ್ಯಾಟರ್ ಇಷ್ಟನಾ? ತಿಳಿಸಿ ...

 ಬೆಂಗಳೂರಿಗೆ ಬಂದು ನೋಡಿ ....ಮಹಾನಗರಗಳಲ್ಲಿ ಇಡ್ಲಿ- ದೋಸೆ ಎಲ್ಲಾ ಇಲ್ಲಿ ಕಷ್ಟವಿಲ್ಲ ಈಗ.

  ನಾವು ಮನೆಗಳಲ್ಲಿ ಇಡ್ಲಿ ದೋಸೆ ಮಾಡಲು ಹಿಂದಿನ ದಿನವೇ ಕೆಲವು ಗಂಟೆ ಕಾಲ ಅಕ್ಕಿ - ಉದ್ದಿನ ಬೇಳೆ ನೆನೆಸಿ ನಂತರ ರುಬ್ಬಿ ಅದು ಹುದುಗಿ ಬರಲು ಮುಚ್ಚಿ ಇಟ್ಟು ಮರು ದಿನ ಇಡ್ಲಿ- ದೋಸೆ ಮಾಡಬೇಕು ಇದು ಹೆಚ್ಚು ಶ್ರಮ ಮತ್ತು ಹೆಚ್ಚು ಸಮಯ ಕೇಳುವ ಕೆಲಸ.

   ಆದರೆ ಈಗ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಸಿದ್ಧ ಸಂಸ್ಥೆಗಳು ಆರೋಗ್ಯಕರವಾಗಿ ತಮ್ಮ ಆಹಾರ ಉದ್ಯಮದಲ್ಲಿ ಇಡ್ಲಿ- ದೋಸೆ ಹಿಟ್ಟು  ತಯಾರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದೆ.

  ಇದರಿಂದ ಮಹಾನಗರಗಳಲ್ಲಿ ಬೇಕೆಂದಾಗಲೆಲ್ಲ ಈ ದಿಡೀರ್ ಇಡ್ಲಿ/ದೋಸೆ ಹಿಟ್ಟು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತದೆ ತಕ್ಷಣ ದೋಸೆ / ಇಡ್ಲಿ ತಯಾರಿಸಿ ತಿನ್ನ ಬಹುದು.

   ನಿತ್ಯ ಬೆಳಿಗ್ಗೆ ಹಾಲು ತರಕಾರಿ ಮಾರಾಟ ಮಾಡುವ ಬೀದಿ ವ್ಯಾಪಾರಸ್ಥರೂ ಈ ದಿಡೀರ್ ಇಡ್ಲಿ /ದೋಸೆ ಹಿಟ್ಟು ಮಾರಾಟ ಮಾಡುತ್ತಾರೆ ಇದರಿಂದ ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ತಮ್ಮ ಮನೆಯಲ್ಲಿ ಇಡ್ಲಿ/ದೋಸೆ ತಯಾರಿ ಈಗ ಸುಲಭವಾಗಿದೆ.

  ಇಡ್ಲಿ ಮತ್ತು ದೋಸೆ ಹಿಟ್ಟನ್ನು ಇಂಗ್ಲೀಷ್ ನಲ್ಲಿ #Batter ಎನ್ನುತ್ತಾರೆ.

ಇನ್ಸ್ಟೆಂಟ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಳಸುವುದರಿಂದ ಅಕ್ಕಿ, ಉದ್ದಿನ ಬೇಳೆ ನೆನೆಸಿ, ರುಬ್ಬಿ, ಹುದುಗುವಿಕೆ  ಬರುವವರೆಗೆ ಗಂಟೆಗಟ್ಟಲೆ ಕಾಯುವ ಕೆಲಸ ತಪ್ಪುತ್ತದೆ.

   ನೀವು ಅಂಗಡಿಯಿಂದ ತರಲು ಬಯಸುತ್ತೀರಾ ಅಥವಾ ಮನೆಯಲ್ಲೇ ಸುಲಭವಾಗಿ ಮಾಡಲು ಇಷ್ಟಪಡುತ್ತೀರಾ ಎಂಬುದರ ಆಧಾರದ ಮೇಲೆ ಅತ್ಯುತ್ತಮ ಆಯ್ಕೆಗಳು ಲಭ್ಯವಿದೆ.

​ ರೆಡಿಮೇಡ್ ಇಡ್ಲಿ ಮತ್ತು ದೋಸೆ ಫ್ರೆಶ್ ಹಿಟ್ಟು
​ಯಾವುದೇ ಶ್ರಮವಿಲ್ಲದೆ ಸಾಂಪ್ರದಾಯಿಕ ರುಚಿ ಬೇಕಿದ್ದರೆ ನೀವು ಮಾರುಕಟ್ಟೆಯಲ್ಲಿ ಸಿಗುವ ಫ್ರೆಶ್ ಹಿಟ್ಟನ್ನು ಖರೀದಿಸಬಹುದು.

 ಇವು ದಿನಸಿ ಅಂಗಡಿಗಳಲ್ಲಿ ಅಥವಾ ಆನ್‌ಲೈನ್ ಡೆಲಿವರಿ ಆ್ಯಪ್‌ಗಳಾದ #Blinkit, #BigBasket, #Zepto ನಲ್ಲಿ ಸುಲಭವಾಗಿ ಸಿಗುತ್ತವೆ.

  ಮಾರುಕಟ್ಟೆಯಲ್ಲಿ ಸಿಗುವ ಫ್ರೆಶ್ ಹಿಟ್ಟು ಉದಾಹರಣೆಗೆ #iD, #Country_Delight ಇತ್ಯಾದಿ
​ಇವು ಖಂಡಿತವಾಗಿಯೂ ಆರೋಗ್ಯಕರ
​ಕಾರಣ ಇವುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲೇ ಅಕ್ಕಿ ಮತ್ತು ಉದ್ದಿನಬೇಳೆ ಬಳಸಿ ರುಬ್ಬಿ, ನೈಸರ್ಗಿಕವಾಗಿ ಹುದುಗಿಸಿ /Fermented ಪ್ಯಾಕ್ ಮಾಡಲಾಗುತ್ತದೆ.

   ಇದರಲ್ಲಿ ಯಾವುದೇ ಪ್ರಿಸರ್ವೇಟಿವ್ಸ್ ಅಥವಾ ಸೋಡಾ ಇರುವುದಿಲ್ಲ.

  ​ಆರೋಗ್ಯದ ಲಾಭ ಇದರಲ್ಲಿ ಏನೆಂದರೆ ನೈಸರ್ಗಿಕ ಹುದುಗುವಿಕೆಯಿಂದಾಗಿ ಇದರಲ್ಲಿ ವಿಟಮಿನ್ ಬಿ ಮತ್ತು ಕರುಳಿಗೆ ಒಳ್ಳೆಯದನ್ನು ಮಾಡುವ ಪ್ರೊಬಯೋಟಿಕ್ಸ್ ಹೆಚ್ಚಿರುತ್ತವೆ.

 ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಕೂಡ.

  ಇಂತಹ ಇಡ್ಲಿ / ದೋಸೆ ಹಿಟ್ಟು ತಯಾರಿಸುವ ಒಂದು ಸಂಸ್ಥೆ ಮೌಲ್ಯ ಮೂರು ಸಾವಿರ ಕೋಟಿ  ಗೊತ್ತಾ?...

  ಬೆಂಗಳೂರಿನಲ್ಲಿ ಇಡ್ಲಿ ದೋಸೆ ಬ್ಯಾಟರ್ ತಯಾರಿಸುವ ಸಂಸ್ಥೆಗಳಲ್ಲಿ #iD_ಫ್ರೆಶ್_ಫುಡ್ ಕಂಪನಿಯ ವಾರ್ಷಿಕ ಆದಾಯ  ಮತ್ತು ಆರ್ಥಿಕ ಪ್ರಗತಿಯ ವಿವರಗಳು ನೋಡಿ ...

  ಈ ಸಂಸ್ಥೆಯ ​ವಾರ್ಷಿಕ ವಹಿವಾಟು ಮತ್ತು ಆದಾಯ 
​FY 2024-25ರ ಇತ್ತೀಚಿನ ವರದಿ ಕಂಪನಿಯು ವಾರ್ಷಿಕವಾಗಿ ₹681 ಕೋಟಿ ಕಾರ್ಯಾಚರಣೆಯ ಆದಾಯವನ್ನು ಗಳಿಸಿದೆ.

   ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 22 ರಷ್ಟು ಬೆಳವಣಿಗೆಯಾಗಿದೆ.

​ಪ್ರಸ್ತುತ ಗುರಿ FY 2025-26 ಈ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪನಿಯು ₹875 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ.

​ ಮುಂದಿನ 1-2 ವರ್ಷಗಳಲ್ಲಿ ₹1,000 ಕೋಟಿ ಮೈಲಿಗಲ್ಲು ದಾಟಲು ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ₹2,500 ಕೋಟಿ ಆದಾಯ ತಲುಪಲು ಕಂಪನಿ ಯೋಜಿಸಿದೆ.

 ​ಇಡ್ಲಿ-ದೋಸೆ ಹಿಟ್ಟಿನ ಪ್ರಾಬಲ್ಯ: ಕಂಪನಿಯ ಒಟ್ಟು ಆದಾಯದಲ್ಲಿ ಸಿಂಹಪಾಲು ಅವರ ಪ್ರಮುಖ ಉತ್ಪನ್ನವಾದ ಇಡ್ಲಿ ಮತ್ತು ದೋಸೆ ಹಿಟ್ಟು (Idli/Dosa Batter) ಹಾಗೂ ಮಲಬಾರ್ ಪರೋಟಾಗಳಿಂದಲೇ ಬರುತ್ತದೆ.

  ​ ಈ ಸಂಸ್ಥೆಯ ಒಂದು ರೋಚಕ ಸತ್ಯ ಕಥೆ ಇಲ್ಲದೆ ಓದಿ...
 2005 ರಲ್ಲಿ ಕೇವಲ ₹25,000 ಆರಂಭಿಕ ಬಂಡವಾಳ ಮತ್ತು 2 ಗ್ರೈಂಡರ್‌ಗಳೊಂದಿಗೆ ಬೆಂಗಳೂರಿನ ತಿಪ್ಪಸಂದ್ರದಲ್ಲಿ ಶುರುವಾದ ಈ ಕಂಪನಿಯ ಮೌಲ್ಯ  ಇಂದು ಸುಮಾರು ₹3,000 ಕೋಟಿಗೂ ಅಧಿಕ.

  ಈ ಕಂಪನಿ ಇಂದು ಪ್ರೇಮ್‌ಜಿ ಇನ್ವೆಸ್ಟ್ (#Premji_Invest) ನಂತಹ ಪ್ರಮುಖ ಹೂಡಿಕೆದಾರರ ಬೆಂಬಲದೊಂದಿಗೆ ಭಾರತ ಮತ್ತು ಗಲ್ಫ್ (GCC) ದೇಶಗಳ 100 ಕ್ಕೂ ಹೆಚ್ಚು ನಗರಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉತ್ಪನ್ನಗಳನ್ನು ತಲುಪಿಸುತ್ತಿದೆ.

   iD ಫ್ರೆಶ್ ಫುಡ್ ಕಂಪನಿಯ ಮಾಲೀಕರು ಮತ್ತು ಸಂಸ್ಥಾಪಕರ (Founders & Owners) ವಿವರಗಳು ಇಲ್ಲಿವೆ ನೋಡಿ...

​ಕಂಪನಿಯನ್ನು ಕೇವಲ ಒಬ್ಬರೇ ಸ್ಥಾಪಿಸಿಲ್ಲ ಇದನ್ನು #ಪಿ_ಸಿ_ಮುಸ್ತಫಾ  ಮತ್ತು ಅವರ ನಾಲ್ಕು ಜನ ಸೋದರಸಂಬಂಧಿಗಳು ಸೇರಿ 2005 ರಲ್ಲಿ ಬೆಂಗಳೂರಿನ ಒಂದು ಸಣ್ಣ ಅಡುಗೆಮನೆಯಲ್ಲಿ ಆರಂಭಿಸಿದರು.  

​ ಕೇರಳದ #ವಯನಾಡ್‌ನ ಬಡ ಕುಟುಂಬದಿಂದ ಬಂದ ಇವರು NIT ಯಲ್ಲಿ ಇಂಜಿನಿಯರಿಂಗ್ ಮುಗಿಸಿ, ದುಬೈನಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಬಂದು, IIM ಬೆಂಗಳೂರಿನಲ್ಲಿ MBA ಓದುತ್ತಾ ಈ ಕಂಪನಿಯನ್ನು ಪ್ರಾರಂಭಿಸಿದರು.

   ಇವರನ್ನು ಭಾರತದ "ಬ್ರೇಕ್‌ಫಾಸ್ಟ್ ಕಿಂಗ್" ಎಂದೂ ಕರೆಯಲಾಗುತ್ತದೆ.  
  
   ​ಅಬ್ದುಲ್ ನಜೀರ್ ಸಹ-ಸಂಸ್ಥಾಪಕರು ಮತ್ತು ನಿರ್ದೇಶಕರು,​ಶಂಸುದ್ದೀನ್ ಟಿ.ಕೆ.​ಜಾಫರ್,​ನೌಶಾದ್ ಟಿ.ಎ.
​​ಮೊದಲ 8 ವರ್ಷಗಳ ಕಾಲ ಸಂಪೂರ್ಣವಾಗಿ ಸಂಸ್ಥಾಪಕರ ಕುಟುಂಬದ ಬಳಿಯೇ ಇದ್ದ ಈ ಕಂಪನಿಯ ಒಡೆತನ, ವ್ಯವಹಾರ ವಿಸ್ತರಣೆಗಾಗಿ ಹೂಡಿಕೆ ಪಡೆದ ನಂತರ ಬದಲಾಗಿದೆ. 

  ಸದ್ಯ ಕಂಪನಿಯಲ್ಲಿ ದೊಡ್ಡ ಪಾಲು ಹೊಂದಿರುವ ಪ್ರಮುಖರು:
​ಸಂಸ್ಥಾಪಕರು  ಪಿ.ಸಿ. ಮುಸ್ತಫಾ ಮತ್ತು ಅವರ ಸೋದರಸಂಬಂಧಿಗಳು ಇಂದಿಗೂ ಕಂಪನಿಯ ಪ್ರಮುಖ ಷೇರುಗಳನ್ನು ಹೊಂದಿದ್ದು, ಸಂಪೂರ್ಣ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

​ನ್ಯೂಕ್ವೆಸ್ಟ್ ಕ್ಯಾಪಿಟಲ್ / TPG (#NewQuest_Capital) ಇದು ಕಂಪನಿಯ ಶೇ. 30 ರಿಂದ 40 ರಷ್ಟು ದೊಡ್ಡ ಪಾಲನ್ನು ಖರೀದಿಸಿದೆ.  

  ​ಪ್ರೇಮ್‌ಜಿ ಇನ್ವೆಸ್ಟ್ (Premji Invest) ಅಜೀಂ ಪ್ರೇಮ್‌ಜಿ ಅವರ ಈ ಹೂಡಿಕೆ ಸಂಸ್ಥೆಯು ಕಂಪನಿಯಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದು ಗಣನೀಯ ಪಾಲು ಹೊಂದಿದೆ.

#idli #dosa #batter #bangalore #iDFreshFood 
#pcmusthafa #ajimpremjee #CountryDelight 
#blinkit #bigbasket #zepto

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...