Blog number 912. ಆನಂದಪುರಂ ಇತಿಹಾಸ - 76. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಕಾಲದ ಕುಗ್ರಾಮ ಹೆಗ್ಗೋಡಿನಲ್ಲಿ ನೀನಾಸಂ, ಶಿವರಾಂ ಕಾರಂತ ರಂಗಮಂದಿರ, ಅಕ್ಷರ ಪ್ರಕಾಶನ ಸ್ಥಾಪಿಸಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ, ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಕೆ.ವಿ.ಸುಬ್ಬಣ್ಣ ರಂಗಮಂದಿರ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯತ್ ಮುರುಘಾಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಮಿ೯ಸಿದ ನನ್ನ ಸಾರ್ಥಕತೆಯ ಸವಿ ನೆನಪು
ಆನಂದಪುರಂ_ಇತಿಹಾಸ_75. #ಆನಂದಪುರಂನ_ಮುರುಘಾಮಠದ_ಸರ್ಕಾರಿ_ಶಾಲಾವರಣದಲ್ಲಿ_ಕೆ_ವಿ_ಸುಬ್ಬಣ್ಣ_ರಂಗಮಂದಿರ, #ಏಷ್ಯಾದ_ನೊಬೆಲ್_ಪ್ರಶಸ್ತಿ_ಎನ್ನುವ_ಮ್ಯಾಗ್ಸೆಸ್ಸೆ_ಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ #ಕಾಳಿದಾಸ_ಸಮ್ಮಾನ_ಕೇಂದ್ರ_ಸಾಹಿತ್ಯಅಕಾಡೆಮಿ_ಪ್ರಶಸ್ತಿ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ಪಡೆದ_ಸಾಗರ_ತಾಲ್ಲೂಕಿನ_ಹೆಮ್ಮೆ. #ಪದ್ಮಶ್ರೀ_ಪ್ರಶಸ್ತಿ_ಸ್ವೀಕರಿಸದ_ಸಜ್ಜನ_ಕೆ_ವಿ_ಸುಬ್ಬಣ್ಣ. #ನೀನಾಸಂ_ಎಂಬ_ಸಂಸ್ಥೆ_ಸಂಸ್ಥಾಪಕ #ಜುಲೈ_16_ಕೆವಿ_ಸುಬ್ಬಣ್ಣರ_17ನೇ_ಪುಣ್ಯಸ್ಮರಣೆ. ಕುಂಟಗೋಡು ವಿಭೂತಿ ಸುಬ್ಬಣ್ಣ ಅಂದರೆ ಕೆ.ವಿ.ಸುಬ್ಬಣ್ಣ ಸಾಹಿತ್ಯ - ನಾಟಕ - ಪ್ರಕಾಶನ - ಸಮಾಜ ಸೇವೆಯಲ್ಲಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥಾಪಕರು. ಇವರದ್ದೆ ಅಕ್ಷರ ಪ್ರಕಾಶನ ಕನ್ನಡದ ಆಯ್ದ ಪುಸ್ತಕ ಪರಿಚಯ ಮಾಡುವಂತ ಪ್ರತಿಷ್ಟಿತ ಸಂಸ್ಥೆ 1957 ರಲ್ಲಿ ಪ್ರಾರಂಭ ಆಗಿ 500 ಕ್ಕೂ ಹೆಚ್ಚು ಪುಸ್ತಕ ಮುದ್ರಿಸಿದೆ. ಸ್ವತಃ ಸುಬ್ಬಣ್ಣರ 20ಕ್ಕೂ ಹೆಚ್ಚಿನ ಕೃತಿ ಬಿಡುಗಡೆ ಆಗಿದೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಇವರ ಕವಿರಾಜ ಮಾರ್ಗ ಮತ್ತು ಕನ್ನಡ ಭಾಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ (2003ರಲ್ಲಿ ) ಮತ್ತು 2001-2002 ರಲ್ಲಿ ಕಾಳಿದಾಸ ಸಮ್ಮಾನ ಪ್ರಶಸ್ತಿ, 1991ರಲ್ಲಿ ಏಷ್ಯಾದ ನೋಬೆಲ್ ಪ್ರಶಸ್ತಿ ಎಂದ...