Skip to main content

Posts

Showing posts with the label Who will be beneficiaries?

Blog number 1637. ಅರಣ್ಯ ಹಕ್ಕು ಕಾಯಿದೆ ಯಾರಿಗಾಗಿ ದಿನಾಂಕ 2- ಜುಲೈ -2016 ರ ಲೇಖನ

ಅರಣ್ಯ ಹಕ್ಕು ಕಾಯದೆಯಲ್ಲಿ ಜಮೀನು ಮಂಜೂರಿಗಾಗಿ ಅಜಿ೯ಸಲ್ಲಿಸಿರುವವರಲ್ಲಿ ನಿಜವಾದ ಅರಣ್ಯವಾಸಿಗಳು, ಆದಿವಾಸಿಗಳು ಫಲಾನುಭವಿ ಆಗುವುದು ಅನುಮಾನ. ಲಕ್ಷಾoತರ ರೂಪಾಯಿ ಮೌಲ್ಯದ ಜಮೀನನ್ನ ವಶ ಪಡಿಸಿಕೊಳ್ಳುವ ಮಾಫಿಯ ಅರಣ್ಯ ಹಕ್ಕುದುರುಪಯೋಗ ಮಾಡುವ ಎಲ್ಲಾ ಲಕ್ಷಣವಿದೆ.ರಾಜಕಾರಣಿಗಳು ಅವರ ಕುಲ ಬಾ೦ಧವರು, ಅನುಯಾಯಿಗಳಿಗೆ ಈ ಯೋಜನೆಯನ್ನ ಧಾರೆ ಎರೆಯಲು ಮು೦ದಾಗಿದ್ದಾರೆ. ದುರಂತವೆಂದರೆ ಈ ಯೋಜನೆ ತಲುಪಬೇಕಾದ ಅರಣ್ಯವಾಸಿಗಳಾದ ಕುಣುಬಿ, ಮರಾಠಿ ಇತ್ಯಾದಿಗಳಿಗೆ, ಪರಿಶಿಷ್ಟ ಜಾತಿ ಬುಡ ಕಟ್ಟುಗಳಿಗೆ ಈ ಯೋಜನೆ ತಲುಪಿಸುವ ಕೆಲಸ ಆಗಿಲ್ಲ. ಯಾರಿಗಾಗಿ ಕೇ೦ದ್ರ ಸಕಾ೯ರ ಈ ಯೋಜನೆ ಜಾರಿ ತಂದಿದೆ ಅದು ಅವರಿಗೆ ತಲುಪದಿರುವುದು ಮಾತ್ರ ದುರಂತ .