ಅರಣ್ಯ ಹಕ್ಕು ಕಾಯದೆಯಲ್ಲಿ ಜಮೀನು ಮಂಜೂರಿಗಾಗಿ ಅಜಿ೯ಸಲ್ಲಿಸಿರುವವರಲ್ಲಿ ನಿಜವಾದ ಅರಣ್ಯವಾಸಿಗಳು, ಆದಿವಾಸಿಗಳು ಫಲಾನುಭವಿ ಆಗುವುದು ಅನುಮಾನ.
ಲಕ್ಷಾoತರ ರೂಪಾಯಿ ಮೌಲ್ಯದ ಜಮೀನನ್ನ ವಶ ಪಡಿಸಿಕೊಳ್ಳುವ ಮಾಫಿಯ ಅರಣ್ಯ ಹಕ್ಕುದುರುಪಯೋಗ ಮಾಡುವ ಎಲ್ಲಾ ಲಕ್ಷಣವಿದೆ.ರಾಜಕಾರಣಿಗಳು ಅವರ ಕುಲ ಬಾ೦ಧವರು, ಅನುಯಾಯಿಗಳಿಗೆ ಈ ಯೋಜನೆಯನ್ನ ಧಾರೆ ಎರೆಯಲು ಮು೦ದಾಗಿದ್ದಾರೆ.
ದುರಂತವೆಂದರೆ ಈ ಯೋಜನೆ ತಲುಪಬೇಕಾದ ಅರಣ್ಯವಾಸಿಗಳಾದ ಕುಣುಬಿ, ಮರಾಠಿ ಇತ್ಯಾದಿಗಳಿಗೆ, ಪರಿಶಿಷ್ಟ ಜಾತಿ ಬುಡ ಕಟ್ಟುಗಳಿಗೆ ಈ ಯೋಜನೆ ತಲುಪಿಸುವ ಕೆಲಸ ಆಗಿಲ್ಲ.
ಯಾರಿಗಾಗಿ ಕೇ೦ದ್ರ ಸಕಾ೯ರ ಈ ಯೋಜನೆ ಜಾರಿ ತಂದಿದೆ ಅದು ಅವರಿಗೆ ತಲುಪದಿರುವುದು ಮಾತ್ರ ದುರಂತ .
Comments
Post a Comment