Blog number 1658. ಗೋವಿನಲ್ಲಿ ಸಿಗುವ ಪ್ರಾಣಿಜನ್ಯ ಅಪರೂಪದ ಆಯುರ್ವೇದ ಗೋರೊಚನದ ಇವತ್ತಿನ ಬೆಲೆ ಕಿಲೋಗೆ 20 ಲಕ್ಷ ರೂಪಾಯಿ!?
#ಗೋರೊಚನ
#ಇದು_ಪ್ರಾಣಿಜನ್ಯ_ಆಯುರ್ವೇದ
#ಶುದ್ದ_ಗೋರೋಚನದ_ಬೆಲೆ_ಗ್ರಾಮಿಗೆ_ಎರೆಡು_ಸಾವಿರ
#ಆನೆ_ಗೋವು_ಮತ್ತು_ಹಿಮಾಲಯದ_ಓಕ್_ನಲ್ಲಿ_ಲಭ್ಯ
#ಔಷದಿಯಾಗಿ_ಸುವಾಸನ_ದ್ರವ್ಯದಲ್ಲಿ_ತಂತ್ರವಿದ್ಯೆಯ_ವಶೀಕರಣದಲ್ಲಿ_ಅದೃಷ್ಟ_ಎಂಬ_ನಂಬಿಕೆಯಲ್ಲಿ_ಬಳಕೆ
#ಮಲೆನಾಡು_ಗಿಡ್ಡ_ತಳಿಯ_ಜಾನುವಾರಲ್ಲಿ_ಹೆಚ್ಚು.
#ಆದುನಿಕ_ವೈದ್ಯಕೀಯ_ಶಸ್ತ್ರಚಿಕಿತ್ಸಾ_ವಿಧಾನ_ಬಳಕೆಯ_ಸಾವಿರಾರು_ವರ್ಷದ_ಹಿಂದೆಯೇ
#ಭಾರತೀಯರಿಗೆ_ಇದೆಲ್ಲದರ_ಅರಿವು_ಬಳಕೆ_ಗೊತ್ತಿರುವುದು_ಸೋಜಿಗ_ವಿಷಯ.
ಮೊದಲ ದರ್ಜೆಯ ಗೋರೊಚನ ಆನೆಯ ಮೆದುಳಿನಿಂದ ಪಡೆಯುತ್ತಿದ್ದರೆಂದು ಪುರಾತನ ಕಾಲದಿಂದಲೂ ನಂಬಿಕೆ ಇದೆ ಇದನ್ನು ಬಿಟ್ಟರೆ ಗೋವಿನ ಪಿತ್ತ ಕೋಶದಿಂದ ಪಡೆಯುವುದು ಸದ್ಯದ ಬಳಕೆಯ ಮಾರ್ಗವಾಗಿದೆ.
ಹಿಮಾಲಯ ತಪ್ಪಲಲ್ಲಿ, ನೇಪಾಳದಲ್ಲಿ ಓಕ್ ಪ್ರಾಣಿಯಲ್ಲಿ ಮತ್ತು ಗೋವುಗಳಲ್ಲಿ ಸಿಗುತ್ತದೆ ಆದರೂ ಎಲ್ಲಾ ಗೋವುಗಳಲ್ಲಿ ಇದು ಸಿಗುವುದಿಲ್ಲ.
ಪಶ್ಚಿಮ ಘಟ್ಟಗಳ ಮಲೆನಾಡು ಗಿಡ್ಡ ತಳಿಯಲ್ಲಿ ಗೋರೋಚನ ಹೆಚ್ಚು ಸಿಗುತ್ತದೆ ಎಂಬ ನಂಬಿಕೆ ಸತ್ತ ಗೋವಿನ ಚರ್ಮ ಸುಲಿಯುವವರಲ್ಲಿ ಮತ್ತು ಅದನ್ನು ಖರೀದಿಸುವರಲ್ಲಿ ಇತ್ತು.
ಗೋವಿನ ಪಿತ್ತ ಕೋಶದ ಮೇಲೆ ದೊಡ್ಡ ಗಾತ್ರದ ಅಡಿಕೆಯಂತ ಗಂಟುಗಳು ಅಥವ ಕಲ್ಲುಗಳೆ ಗೋರೋಚನ.
ಇದು ಭಾರತೀಯ ಪುರಾತನ ಕಾಲದಿಂದಲೂ ಬಳಕೆಯ ಆಯುರ್ವೇದ ಔಷದಿ ಆಗಿದೆ ಮನೋವೈದ್ಯಕೀಯ ಅಸ್ವಸ್ಥತೆಗೆ ಮತ್ತು ವಿಷಕ್ಕೆ ಪ್ರತಿ ವಿಷವಾಗಿ ಬಳಸುತ್ತಿದ್ದರು.
ಇದನ್ನು ಪರಿಮಳ ದ್ರವ್ಯ ತಯಾರಿಕೆಗೆ ಮತ್ತು ತಂತ್ರ ವಿದ್ಯೆಯಲ್ಲಿ ವಶೀಕರಣಕ್ಕೆ ಬಳಸುತ್ತಿದ್ದರಂತೆ.
ಇದು ಎಲ್ಲಾ ಗೋವುಗಳಲ್ಲೂ ಸಿಗುವುದಿಲ್ಲ ಎಂಬುದು ಮತ್ತು ಈ ಪ್ರಾಣಿಜನ್ಯ ಆಯುರ್ವೇದ ಅಪರೂಪ ಎಂಬ ಕಾರಣದಿಂದ ಇದಕ್ಕೆ ಹೆಚ್ಚು ಬೆಲೆ ಇದೆ.
ಗೋರೊಚನ ಇರುವ ಗೋವುಗಳು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತದೆ, ಅದು ಶ್ರೇಷ್ಠ ಎಂಬ ಭಾವನೆ ಇದೆ ಆದರೆ ಆಧುನಿಕ ವೈದ್ಯಶಾಸ್ತ್ರದಲ್ಲಿ ಯಾವ ಗೋವಿನ ಪಿತ್ತಕೋಶದಲ್ಲಿ ಲಿವರ್ ಸೊರ್ಯಾಸಿಸ್ ಆಗಿರುತ್ತದೆ ಅಲ್ಲಿ ಅದನ್ನು ಗುಣಪಡಿಸಲು ಪ್ರತಿ ಔಷದವಾಗಿ ಗೋರೋಚನದ ಗಡ್ಡೆಗಳು ಉತ್ಪತಿ ಆಗುತ್ತದೆ ಎನ್ನುತ್ತಾರೆ.
ಶಸ್ತ್ರಚಿಕಿತ್ಸಾ ವಿಧಾನ ಬಳಕೆಗೂ ಮೊದಲೇ ಸಾವಿರಾರು ವರ್ಷಗಳಿಂದ ಭಾರತೀಯರಿಗೆ ಈ ಗೋವಿನ ಪಿತ್ತಕೋಶದ ಗೋರೋಚನದ ಬಳಕೆ ಗೊತ್ತಿರುವುದು ಸೋಜಿಗ ವಿಷಯವೇ ಆಗಿದೆ.
ಇದನ್ನು ಇಂಗ್ಲೀಷ್ ಭಾಷೆಯಲ್ಲಿ Cowstone/ Axegall ಅಂತ ಕರೆಯುತ್ತಾರೆ ಭಾರತೀಯ ಹಿಂದೂ ಪೂಜಾ ಪದ್ದತಿಯಲ್ಲಿ ಗೋರೊಚನ ಬಳಕೆ ಇದೆ ಹಿಂದೂ ಪುರೋಹಿತರಿಗೆ ಇದರ ಮಾಹಿತಿ ಇದೆ ಮತ್ತು ಭಾರತೀಯ ಆಯುರ್ವೇದದ ವೈದ್ಯರಿಗೆ ಇದರ ಬಳಕೆ ಗೊತ್ತಿದೆ.
ಗೋರೊಚನ ಮನೆಯಲ್ಲಿದ್ದರೆ ಅದೃಷ್ಟ ಎಂಬ ಭಾವನೆ ಇದೆ, ಶುದ್ಧ ಗೋರೊಚನದ ಇವತ್ತಿನ ಬೆಲೆ ಗ್ರಾಮಿಗೆ ಎರೆಡು ಸಾವಿರ ಅಂದರೆ ಒಂದು ಕಿಲೋ ಗೋರೊಚನದ ಇವತ್ತಿನ ಬೆಲೆ 20 ಲಕ್ಷ !?.
Comments
Post a Comment