#ಕಳೆದ_ಒಂದು_ವಾರದಿಂದ_ಉತ್ತರಕನ್ನಡ_ಜಿಲ್ಲೆಯ_ಜನ_ಬಾಳೆಕಾಯಿ_ಮೌಲ್ಯವರ್ಧನೆಯಲ್ಲಿ_
#ದೊಡ್ಡ_ಕ್ರಾಂತಿ_ಮಾಡಿ_ತೋರಿಸುತ್ತಿದ್ದಾರೆ_ಆದರೆ_ಆಹಾರೋದ್ಯಮದ_ಕೆಲ_ಆರೋಗ್ಯಕರ_ನಿಯಮ_ಪಾಲಿಸುತ್ತಿಲ್ಲ
ಗೃಹ ಕೈಗಾರಿಕೆ ಆಗಿ ಆಹಾರ ತಯಾರಿಯಲ್ಲಿ ಮನುಷ್ಯನ ಕೈ ಬೆರಳುಗಳ ನೇರ ಬಳಕೆ ಆಗದಂತೆ ಪುಡ್ ಗ್ರೇಡ್ ಗ್ಲೋಸ್, ತಲೆಗೆ ಕ್ಯಾಪ್ ಮತ್ತು ಮಾಸ್ಕ ಬಳಸಲು ಪ್ರಯತ್ನಿಸಿ.
ಒಂದು ಕಾಲದಲ್ಲಿ ಮತ್ಸೋದ್ಯಮದಲ್ಲಿ ಸಂಸ್ಕರಿಸಿದ ಮೀನು ರಪ್ತುವಿನಲ್ಲಿ ಕರ್ನಾಟಕ ಕರಾವಳಿ ತುಂಬಾ ಮುಂದಿತ್ತು ಆದರೆ ಯುರೋಪು ದೇಶಗಳ ಮಾನದಂಡ ನಿರ್ಲಕ್ಷಿಸಿ ದೊಡ್ಡ ಮಟ್ಟದ ರಪ್ತು ಕಳೆದುಕೊಂಡಿತು ಈಗ ಅತ್ಯಂತ ಸಣ್ಣ ದೇಶ ಸೀಶೆಲ್ ಇದೆಲ್ಲ ಅಳವಡಿಸಿಕೊಂಡು ಮೀನು ಉತ್ಪನ್ನ ರಫ್ತಿನಲ್ಲಿ ಮುಂದಿದೆ ಅಲ್ಲಿ ಕೆಲಸ ಮಾಡುವವರು ನಮ್ಮ ಕರಾವಳಿಯ ಕಾರ್ಮಿಕರೆ.
ಈ ಬಗ್ಗೆ ಧನಾತ್ಮಕವಾಗಿ ಚಿಂತಿಸಬೇಕಾಗಿದೆ ಏಕೆಂದರೆ ನಮ್ಮ ಅನೇಕ ಸಂಪ್ರದಾಯಿಕ ಆಹಾರೋತ್ಪನ್ನದ ಮಾರುಕಟ್ಟೆಯಲ್ಲಿ ನಾವು ಸಣ್ಣ ತಪ್ಪಿನಿಂದ ಅವಕಾಶ ಕಳೆದುಕೊಳ್ಳುತ್ತಿದ್ದೇವೆ.
Comments
Post a Comment