#ಕುಚಲಕ್ಕಿ_ಬೆಲ್ಲದ_ಪೌಷ್ಟಿಕಾಂಶದ_ಸಿಹಿಉಂಡೆ.
ಕುಚಲಕ್ಕಿ ಬಾರತದ ಕರಾವಳಿ ಪ್ರದೇಶದ ಜನರ ನಿತ್ಯ ಊಟದ ಅನ್ನವಾಗಿದೆ, ಒಳನಾಡು ಪ್ರದೇಶದ ಜನ ಕುಚಲಕ್ಕಿ ಎಂದರೆ ಮೂಗು ಮುರುಯುತ್ತಾರೆ.
ಹೆಚ್ಚು ಪಾಲೀಶ್ ಮಾಡಿದ ಬೆಣತಕ್ಕಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವೈಜ್ಞಾನಿಕ ಸಂಶೋದನೆ ಇದ್ದರೂ ಅದರ ಬಳಕೆ ಹೆಚ್ಚು.
ಆದುನಿಕ ಗೃಹಣಿಯರು ಕುಚಲಕ್ಕಿ ಪೌಷ್ಟಿಕಾಂಶಕ್ಕಿಂತ ಅದರಿಂದ ಅನ್ನ ಮಾಡುವ ಕಷ್ಟ ನಷ್ಟದ ದೊಡ್ಡ ಪಟ್ಟಿ ನೀಡುತ್ತಾರೆ ಅದರಲ್ಲಿ ಅನ್ನ ಆಗಲು ಹೆಚ್ಚು ಸಮಯ ಬೇಕು, ಅಡಿಗೆ ಅನಿಲ ವೆಚ್ಚ ಜಾಸ್ತಿ ಇತ್ಯಾದಿ.
ಏನೇ ಆಗಲಿ ಕುಚಲಕ್ಕಿ ಹುರಿದು ರವೆ ಮಾಡಿ ನಮ್ಮ ಮಲೆನಾಡಿನ ಆಲೇಮನೆ ಬೆಲ್ಲದ ಪಾಕದಲ್ಲಿ ಬೇಕಾದರೆ ಶೇಂಗಾ ಬೀಜ, ಗೇರು ಬೀಜ, ಹುರಿಗಡಲೆ ಸೇರಿಸಿ ಮಿಶ್ರಮಾಡಿ ನಂತರ ಹದದಲ್ಲಿ ಉಂಡೆ ಮಾಡುವುದು ಇದರ ಸವಿ ಗೊತ್ತಿದ್ದವರಿಗೆ ಗೊತ್ತು.
Comments
Post a Comment