Skip to main content

Posts

Showing posts with the label K.Ramappa studied his primary education in Anandapuram school where state education minister Mr BADRINARAYAN IYENGAR Studied

ಭಾಗ_21, ಇಬ್ಬರು ಮುಖ್ಯಮಂತ್ರಿಗಳಾದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗ್ಗಡೆಯವರ ಆಪ್ತ ಮತ್ತು ವಿಶೇಷಾದಿಕಾರಿ ಆಗಿದ್ದ ತಾಳಗುಪ್ಪ ಕೆ.ರಾಮಪ್ಪ ವಿದ್ಯಾ ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ಓದಿದ ಆನಂದಪುರಂ ಪ್ರಾಥಮಿಕ ಶಾಲೆಯಲ್ಲೇ ಓದಿದವರು.

#ಭಾಗ_21. #ತಾಳಗುಪ್ಪ_ರಾಮಪ್ಪ #ಆನಂದಪುರಂನಲ್ಲಿ_ಪ್ರಾಥಮಿಕ_ಮತ್ತು_ಮಾಧ್ಯಮಿಕ_ಶಿಕ್ಷಣ. #ಮುಖ್ಯಮಂತ್ರಿ_ಗುಂಡೂರಾವ್_ಮತ್ತು_ರಾಮಕೃಷ್ಣಹೆಗಡೆಗೆ_ಆಪ್ತ_ಮತ್ತು_ವಿಶೇಷ_ಕರ್ತವ್ಯಾದಿಕಾರಿ.   ಬದರಿನಾರಾರಾಯಣ್ ಆಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಆಪ್ತರಾಗಿದ್ದ ಆನಂದಪುರಂ ಆರ್ಟಿಸನ್ ಟ್ರೈನಿಂಗ್ ಸೆಂಟರ್ ನಲ್ಲಿ (ATI ಆಗ ಚಾಪೆ ತರಬೇತಿ) ತರಬೇತುದಾರರಾಗಿದ್ದ ಪುಟ್ಟಪ್ಪ ತಾಳಗುಪ್ಪ ಮೂಲದವರು.   ಆಗ ಈ ತರಬೇತಿ ಕೇಂದ್ರ ಬೆಲ್ಲದ ಶೇಷಪ್ಪನವರ ಕಟ್ಟಡದಲ್ಲಿ ಇತ್ತು (ನಂತರ ಯಾಹ್ಯಾ ಸಾಹೇಬರು ಈ ಜಾಗ ಖರೀದಿಸಿ ದಿನಸಿ ಅಂಗಡಿ ಮಾಡುತ್ತಾರೆ) ತರಬೇತಿದಾರರಾದ ಪುಟ್ಟಪ್ಪ ಮತ್ತು ಚೌಡಮ್ಮ ದಂಪತಿಗಳಿಗೆ ಹಾಲಪ್ಪ, ಗಣಪತಿ, ರಾಮಪ್ಪ ಮತ್ತು ಮಂಜಪ್ಪ ಎಂಬ ನಾಲ್ಕು ಪುತ್ರರು.    ದೊಡ್ಡ ಮಗ ಹಾಲಪ್ಪ ಶಿಕ್ಷಕರು, ಗಣಪತಿ ಜೋಗದಲ್ಲಿ ದಿನಸಿ ವ್ಯಾಪಾರ, ರಾಮಪ್ಪನವರು ವಿಧಾನ ಸೌದದ ಸಚಿವಾಲಯದಲ್ಲಿ ಮತ್ತು ಮಂಜಪ್ಪ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.   ಕೆ.ರಾಮಪ್ಪರ ಮನೆತನದ ಹೆಸರು ಕರಡಿ ಮನೆತನ, ಇವರು ತಂದೆ ಆನಂದಪುರಂನಲ್ಲಿ ಉದ್ಯೋಗದಲ್ಲಿ ಇದ್ದಿದ್ದರಿಂದ ರಾಮಪ್ಪನವರ ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮಿಕ ಶಿಕ್ಷಣ ಆನಂದಪುರಂ ನಲ್ಲೇ ನಡೆಯುತ್ತದೆ, ರಂಗನಾಥ ಭಟ್ಟರು ಇವರ ಶಾಲಾ ಸಹಪಾಠಿಗಳು.   ಇವರು ವ್ಯಾಸಂಗ ಮಾಡಿದ ಶಾಲೆ ವಿದ್ಯಾ ಮಂತ್ರಿ ಬದರಿನಾರಾಯಣ್ ಆಯ್ಯಂಗಾರರು ಪ್ರಾಥಮ...