4156.ಕಲಬೆರಕೆ_ಪ್ರಪಂಚಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.
ಕಲಬೆರಕೆ_ಪ್ರಪಂಚ
ಹಳ್ಳಿಗಳಲ್ಲಿ_ಯುವಕರು_ಹಾರ್ಟ್_ಅಟ್ಯಾಕ್_ಕಿಡ್ನಿ_ಪೈಲೂರ್_ಗೆ_ಕಾರಣವಾಗಿರುವ
ಡ್ರಗ್_ಮಿಶ್ರಿತ_ಗಾಂಜ_ಕಳಪೆ_ಮಧ್ಯ_ಕಳಪೆ_ಚಹಾಪುಡಿ.
ನಿಮ್ಮ ಸುತ್ತ ಮುತ್ತಲಿನಲ್ಲಿ ಇಂತಹ ದುರಂತಗಳು ನಡೆದಿರಬಹುದು ಇದಕ್ಕೆಲ್ಲ ಕಾರಣ ಏನು ಎಂದು ಯೋಚಿಸಿದ್ದೀರಾ? ....
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯೇ ಇರದ ಯುವಕರು ದಿಡೀರ್ ಹಾರ್ಟ್ ಅಟ್ಯಾಕ್ ನಿಂದ ಮರಣ ಹೊಂದುವುದು, ಮಧ್ಯಪಾನ ಮಾಡದವರಿಗೂ ಕಿಡ್ನಿ ಪೈಲ್ಯೂರ್ ಆಗಿ ಡಯಾಲಿಸಿಸ್ ಮಾಡುವುದು ಹೆಚ್ಚಾಗುತ್ತಿದೆ.
ಇದಕ್ಕೆಲ್ಲ ಕಾರಣ ಮಾದಕ ದ್ರವ್ಯ ಮಿಶ್ರ ಮಾಡಿದ ಗಾಂಜಾ, ಕಳಪೆ ಚಹಾ ಪುಡಿಯಿಂದ ತಯಾರಿಸುವ ಟೀಯಿಂದ ಮತ್ತು ನಕಲಿ ಕಳಪೆ ಮಧ್ಯಗಳು ಕಾರಣ ಆಗುತ್ತಿದೆ.
ಇಂತಹ ವ್ಯಸನಗಳಿoದ ತಕ್ಷಣ ಹೊರ ಬರದಿದ್ದರೆ ಅಪಾಯ ಕೂಡ ಹೆಚ್ಚು, ಮೊದಲೆಲ್ಲ ಹಳ್ಳಿಗಳಲ್ಲಿ ನೈಜಗಾಂಜಾ ಸೇವಿಸಿದವರು ಭಯಪಡುವ ಕಲ್ಪನಾ ಲೋಕಕ್ಕೆ ಹೋಗುತ್ತಿದ್ದರು ಆದರೆ ಈಗ ಅದೇ ಗಾಂಜಾಕ್ಕೆ ಏನೇನೆಲ್ಲಾ ಕಲಬೆರಕೆ ಮಾಡುತ್ತಾರೆ ನೋಡಿ...ಅದರಿಂದ ಹೃದಯವೇ ಅಲ್ಲೋಲ ಕಲ್ಲೋಲವಾಗಿ ಜೀವವೇ ಕಳೆದು ಕೊಳ್ಳುತ್ತಾರೆ.
ಕಲಬೆರಕೆ ಗಾಂಜಾ ಸೇವನೆಯಿಂದ ಹೃದಯ ಸ್ತಂಭನ (Cardiac Arrest) ಮತ್ತು ಹೃದಯಾಘಾತ (Heart Attack) ಸಂಭವಿಸುವ ಸಾಧ್ಯತೆ ಅತ್ಯಂತ ಹೆಚ್ಚು.
ಸಾಮಾನ್ಯ ಗಾಂಜಾವೇ ಹೃದಯದ ಬಡಿತವನ್ನು (Heart Rate) ತೀವ್ರವಾಗಿ ಹೆಚ್ಚಿಸುತ್ತದೆ ಇನ್ನು ಅದರಲ್ಲಿ ಅಪಾಯಕಾರಿ ರಾಸಾಯನಿಕಗಳು ಬೆರೆತಾಗ ಹೃದಯದ ಮೇಲಾಗುವ ಹಾನಿ ದುಪ್ಪಟ್ಟಾಗುತ್ತದೆ.
ಅನಿಯಮಿತ ಹೃದಯ ಬಡಿತ (Arrhythmia): ಗಾಂಜಾದಲ್ಲಿ ಬೆರೆಸಲಾಗುವ ಸಿಂಥೆಟಿಕ್ ಕೆಮಿಕಲ್ಸ್ (Synthetic Cannabinoids) ಹೃದಯದ ವಿದ್ಯುತ್ ತರಂಗಗಳ ಸಮತೋಲನವನ್ನು ತಪ್ಪಿಸುತ್ತವೆ.
ಇದರಿಂದ ಹೃದಯ ಅತಿಯಾದ ವೇಗವಾಗಿ ಅಥವಾ ಅಸಹಜವಾಗಿ ಬಡಿಯಲು ಶುರುವಾಗಿ ಏಕಾಏಕಿ ನಿಂತುಹೋಗಬಹುದು (Cardiac Arrest).
ರಕ್ತನಾಳಗಳ ಸಂಕೋಚನ ಉಂಟಾಗಲು ಅದಕ್ಕೆ ಬೆರೆಸುವ
ಇಲಿ ಪಾಷಾಣ, ಕೀಟನಾಶಕಗಳು ಮತ್ತು ಇತರ ಸಿಂಥೆಟಿಕ್ ರಾಸಾಯನಿಕಗಳು ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕೊರೊನರಿ ರಕ್ತನಾಳಗಳನ್ನು ದಿಢೀರನೆ ಕಿರಿದಾಗಿಸುತ್ತವೆ, ಇದರಿಂದ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಸಿಗದೆ ಸ್ತಂಭನ ಉಂಟಾಗುತ್ತದೆ.
ರಕ್ತದೊತ್ತಡದಲ್ಲಿ ತೀವ್ರ ಏರಿಳಿತಕ್ಕೆ ಕಾರಣ ಆಗುವ ರಾಸಾಯನಿಕಯುಕ್ತ ಗಾಂಜಾ ಇದನ್ನು ಸೇದಿದ ತಕ್ಷಣ ರಕ್ತದೊತ್ತಡ (BP) ಗಗನಕ್ಕೇರಬಹುದು ಅಥವಾ ದಿಢೀರನೆ ಕುಸಿದು ಹೋಗಬಹುದು ಇದು ಹೃದಯ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಹೇರುತ್ತದೆ.
ಧೂಮಪಾನದ ಜೊತೆಗೆ ಬೆರೆತಿರುವ ವಿಷಕಾರಿ ಅನಿಲಗಳು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡಿ, ಹೃದಯದ ಕಾರ್ಯಕ್ಷಮತೆಯನ್ನು ಕ್ಷಣಾರ್ಧದಲ್ಲಿ ಕುಗ್ಗಿಸುತ್ತವೆ.
ಯಾವುದೇ ಹಿಂದಿನ ಹೃದ್ರೋಗದ ಇತಿಹಾಸವಿಲ್ಲದ ಆರೋಗ್ಯವಂತ ಯುವಕರಲ್ಲೂ ಸಹ ಈ ರೀತಿಯ ಕಲಬೆರಕೆ ಮಾದಕ ದ್ರವ್ಯ ಸೇವನೆಯ ನಂತರ ಮೊದಲ ಬಾರಿಯಲ್ಲೇ ಹೃದಯ ಸ್ತಂಭನ ಉಂಟಾಗಿ ಪ್ರಾಣ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ.
ಕಾನೂನುಬಾಹಿರವಾಗಿ ಮಾರಾಟವಾಗುವ ಗಾಂಜಾದಲ್ಲಿ (Ganja/Marijuana) ಹೆಚ್ಚು ಲಾಭ ಗಳಿಸಲು, ತೂಕ ಹೆಚ್ಚಿಸಲು ಮತ್ತು ಸೇವಿಸುವವರಲ್ಲಿ ತೀವ್ರ ವ್ಯಸನ (addiction) ಉಂಟುಮಾಡಲು ಹಲವು ಅಪಾಯಕಾರಿ ರಾಸಾಯನಿಕಗಳು ಹಾಗೂ ಇತರ ಮಾದಕ ದ್ರವ್ಯಗಳನ್ನು ಬೆರೆಸಲಾಗುತ್ತದೆ.
ಸಾಮಾನ್ಯವಾಗಿ ಗಾಂಜಾದ ಜೊತೆ ಮಿಶ್ರಣ ಮಾಡುವ ಮುಖ್ಯ ಪದಾರ್ಥಗಳು ಸಿಂಥೆಟಿಕ್ ಕ್ಯಾನಬಿನಾಯ್ಡ್ಸ (Synthetic Cannabinoids / K2 / Spice),ನೈಸರ್ಗಿಕ ಗಾಂಜಾದ ಪರಿಣಾಮವನ್ನು ಕೃತಕವಾಗಿ ತೀವ್ರಗೊಳಿಸಲು ಸಿಂಪಡಿಸುವ ಲ್ಯಾಬ್-ನಿರ್ಮಿತ ಅಪಾಯಕಾರಿ ರಾಸಾಯನಿಕಗಳು.
ಅಫೀಮು / ಹೆರಾಯಿನ್ ಮತ್ತು ಬ್ರೌನ್ ಶುಗರ್ (Opioids / Brown Sugar) ಗಳನ್ನೂ ಮಿಶ್ರ ಮಾಡುತ್ತಾರೆ,ತೀವ್ರವಾದ ಅಮಲು ಮತ್ತು ವ್ಯಸನವನ್ನು ಉಂಟುಮಾಡಲು ಕಡಿಮೆ ಗುಣಮಟ್ಟದ ಅಫೀಮಿನ ಅಂಶ ಅಥವಾ ಬ್ರೌನ್ ಶುಗರ್ ದ್ರಾವಣವನ್ನು ಸಿಂಪಡಿಸುತ್ತಾರೆ.
ತಂಬಾಕು ಮತ್ತು ನಿಕೋಟಿನ್ ಸಾರವನ್ನು ಗಾಂಜಾದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಧೂಮಪಾನದ ತೀವ್ರತೆ ಹೆಚ್ಚಿಸಲು ಬೆರೆಸಲಾಗುತ್ತದೆ.
ಇಲಿ ಪಾಷಾಣ (Rat Poison / Strychnine) ಗಳನ್ನು ಗಾಂಜಾ ಹೆಚ್ಚು ಹೊತ್ತು ಹಸಿಯಾಗಿ ಕಾಣಲು ಮತ್ತು ಅದರ ಬಣ್ಣ-ವಾಸನೆ ಬದಲಾಯಿಸಲು ಬಳಸುತ್ತಾರೆ ಇದರ ಜೊತೆ ಕೆಲವೊಮ್ಮೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಾರೆ.
ಶೂ ಪಾಲಿಶ್, ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳು ಗಾಂಜಾದಲ್ಲಿ ಸೇರಿಸುತ್ತಾರೆ, ಹಳೆಯ ಅಥವಾ ಹಾಳಾದ ಗಾಂಜಾಕ್ಕೆ ಬಲವಾದ ವಾಸನೆ, ಕಪ್ಪು ಬಣ್ಣ ಮತ್ತು ತೀಕ್ಷ್ಣತೆ ತರಲು ಇವುಗಳನ್ನು ಲೇಪಿಸುತ್ತಾರೆ.
ಫಾರ್ಮಾಸ್ಯುಟಿಕಲ್ ಮಾತ್ರೆಗಳ ಪುಡಿ (Sedatives / Sleeping pills) ಗಳೂ ಮಿಶ್ರ ಮಾಡುತ್ತಾರೆ,ಅಲ್ಪ್ರಾಜೋಲಮ್ (Alprazolam), ಡಯಾಜೆಪಾಮ್ ನಂತಹ ನಿದ್ರೆ ಮಾತ್ರೆಗಳ ಪುಡಿಯನ್ನು ಬೆರೆಸಿ ತೂಕ ಮತ್ತು ಮಂಪರು ಹೆಚ್ಚಿಸುತ್ತಾರೆ.
ಈ ರೀತಿಯ ಕಲಬೆರಕೆ ಗಾಂಜಾ ಸೇವನೆಯು ಶ್ವಾಸಕೋಶದ ಹಾನಿ, ತೀವ್ರ ಮಾನಸಿಕ ಅಸ್ವಸ್ಥತೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಜೀವಕ್ಕೆ ತಕ್ಷಣದ ಅಪಾಯವನ್ನುಂಟುಮಾಡುತ್ತದೆ.
ನಿಮ್ಮ ಸುತ್ತ ಮುತ್ತದಲ್ಲಿ ಗಾಂಜಾ ವ್ಯಸನಿಗಳಿದ್ದರೆ ಅವರಿಗೆ ತಿಳಿ ಹೇಳಿ ಇದು ನೈಸರ್ಗಿಕ ಗಾಂಜಾ ಆಗಿಲ್ಲ ಇದು ಸಂಪೂರ್ಣ ಮಾದಕ ವಸ್ತುವಾದ ಡ್ರಗ್ಸ್ ಆಗಿದೆ ಇದರಿಂದ ಜೀವಹಾನಿ ಸಾಧ್ಯತೆ ಹೆಚ್ಚು ಎಂದು ಅವರಿಗೆ #ಆಪ್ತ_ಸಮಾಲೋಚನೆ ನಡೆಸಿ ಅವರ ಪೋಷಕರಿಗೂ ಮನನ ಮಾಡಿ.
ಈ ಪೋಸ್ಟ್ ಹೆಚ್ಚು ಜನರಿಗೆ ಶೇರ್ ಮಾಡಿ #ಜನಜಾಗೃತಿ ಮಾಡಲು ವಿನಂತಿ.
#HeartAttack #cardiacarrest #DrugSmuggling
#sedative #adultration #adiction #YouthVoice
Comments
Post a Comment