Skip to main content

Posts

Showing posts with the label Wonderful memories of DevanoorMahadeva and my telephone conversation but till today we didn't met personally

Blog number 1048. ದೇವನೂರು ಮಹಾದೇವರ ಜೊತೆ ಸದಾ ಸ್ಮರಿಸುವಂತಾ ಪೋನ್ ಸಂಬಾಷಣೆ ಇನ್ನೂ ಕುಸುಮ ಬಾಲೆ ಮುಕ್ತ ಬೇಟಿಗೆ ಕಾಲ ಕೂಡಿ ಬಂದಿಲ್ಲ

ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ. ನೀವು ದಸರಾ ಎದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಸಂದಭ೯ ಹಾಗಿತ್ತು ನಿರಾಕರಿಸಿದೆ, ಈ ಸಾರಿಯ ಕುವೆಂಪು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು........................... ಮೈಸೂರಿಗೆ ಬನ್ನಿ ಅಂತ ಆಮಂತ್ರಿಸಿದರು.ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿದೆ, ಮುಖತಃ ಅವರನ್ನ ಬೇಟಿ ಮಾಡಲು ಉತ್ಸುಕನಾಗಿದ್ದೇನೆ.