#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಂದರವಾಗಿಸಿಕೊಂಡ_ಇನ್ನೋಂದು_ದಂಪತಿಗಳ_ಪರಿಚಯ. #ನಿಸರಾಣಿ_ನಾರಾಯಣಮೂರ್ತಿ_ದಂಪತಿಗಳು. #ನಾವೆಲ್ಲ_ಪರಸ್ಪರ_ಗೆಳೆಯಾರಾಗಲು_ವೇದಿಕೆ_facebook. #ವೃದ್ದಾಪ್ಯದೆಡೆಗೆ_ಸಾಗುವ_ನಮಗೂ_ಇವರ_ಜೀವನ_ಶೈಲಿ_ಮಾರ್ಗದರ್ಶಕವಾಗಿದೆ. ಮಲೆನಾಡು ವೃದ್ದಾಶ್ರಮ ಆಗುತ್ತಿರುವುದು ಸುಳ್ಳಲ್ಲ ಪ್ರತಿ ಕುಟುಂಬದ ಯುವ ಸದಸ್ಯರು ಉದ್ಯೋಗಕ್ಕಾಗಿ ನಗರಗಳಿಗೆ ಹಾಗೂ ವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ. ವೃದ್ಧ ತಂದೆ ತಾಯಿ ಇಬ್ಬರನ್ನೂ ಮಕ್ಕಳು ತಮ್ಮ ಜೊತೆ ನೆಲೆಸಲು ಕರೆದರೂ ತಾವು ಹುಟ್ಟಿ ಬೆಳೆದ ಮನೆ-ಕೃಷಿ ಭೂಮಿ - ಜಾನುವಾರು-ನಾಯಿ - ಬೆಕ್ಕು ಮತ್ತು ಒಡಹುಟ್ಟಿದವರನ್ನು ಗೆಳೆಯರನ್ನು ತೊರೆದು ಹೋಗಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಹಳ್ಳಿಯಲ್ಲೇ ಉಳಿದಿದ್ದಾರೆ. ಹಾಗಂತ ಅವರೆಲ್ಲರೂ ನಿರಾಶರಾಗಿದ್ದಾರೆ ಅಥವ ಹತಾಶರಾಗಿದ್ದಾರೆ ಅಂತ ಭಾವಿಸ ಬೇಕಾಗಿಲ್ಲದಂತೆ ಅವರು ಅವರ ಜೀವನ ಶೈಲಿ ಬದಲಿಸಿಕೊಂಡು ವೃದ್ದಾಪ್ಯದಲ್ಲೂ ಸಂತೋಷವಾಗಿದ್ದಾರೆ. ಮಕ್ಕಳು ತಮ್ಮ ದುಡಿಮೆಯಿಂದ ಶ್ರೀಮಂತರಾಗಿದ್ದಾರೆ, ಅವರು ಹಳ್ಳಿ ಬಿಟ್ಟು ಬರದ ತಂದೆ ತಾಯಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ, ಇಂಟರ್ನೆಟ್ ಸಂಪರ್ಕ, ಸಿಸಿ ಕ್ಯಾಮೆರಾ, ತಂದೆ ತಾಯಿ ಓಡಾಡಲು ಹೊಸ ಕಾರು, ಅವರ ರಕ್ಷಣೆಗಾಗಿ ಉತ್ತಮ ತಳಿ ನಾಯಿ, ಆಳು ಕಾಳು ವ್ಯವಸ್ಥೆ ಮಾಡಿ ಅಪ್ಪ ಅಮ್ಮನಿಗೆ ಬಂದುಗ...