Skip to main content

Posts

Showing posts with the label Part 3 Holebagilu bridge

BN 3428. ಭಾಗ 3 ನನ್ನ ಪಾದಯಾತ್ರೆ

#ಭಾಗ_ 3 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.     ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನಸರದ ಕಲಾವಿದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂದಾಗ ಸಭಿಕರೆಲ್ಲರೂ ಮೌನ, ಯಾರು ಯಾರು ನೋಡಿದ್ದೀರಿ? ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು ಸಿಗಂದೂರು ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾ...