ಓದುಗನ ಹೃದಯದ ಬಾಗಿಲು ತಟ್ಟುತ್ತದಾ ನನ್ನ ಕಾದಂಬರಿ ಅಂತ ನನ್ನ ಅಂತರಂಗ ಅನುಮಾನಿಸುತ್ತಿತ್ತು,ಈಗಬೆಸ್ತರ ರಾಣಿ ಚಂಪಕಾ ಕಾದಂಬರಿ ಈ ಅನುಮಾನ ಸುಳ್ಳಾಗಿಸಿದೆ ಇದು ಬರಹಗಾರನಿಗೆ ಸಾಥ೯ಕತೆ ನೀಡಿದಂತಾಗಿದೆ.
#ಜಿ_ಟಿ_ಸತ್ಯನಾರಾಯಣ್_ಚಂಪಕ_ಸರಸ್ಸುನಲ್ಲಿ ಒಬ್ಬ ಲೇಖಕನಿಗೆ ತನ್ನ ಬರಹ ಓದುಗನ ಹೃದಯದ ಬಾಗಿಲು ತಟ್ಟಿತೆಂದರೆ ಅದಕ್ಕಿ೦ತ ಸಾಥ೯ಕತೆ ಬೇರೆ ಇರಲಿಕ್ಕಿಲ್ಲ. ಇದೆಲ್ಲ ಯಾಕೆಂದರೆ 10 ವರ್ಷದ ಹಿಂದೆ ನಾನು ಬರೆದ ಕಾದಂಬರಿ ಪ್ರಕಟ ಆದ ನಂತರ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳು. 400 ವರ್ಷದ ಹಿಂದೆ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಾಳಿಗಾಗಿ ಕಟ್ಟಿಸಿದ ಈ ಸ್ಮಾರಕ ಈಗಲೂ ಗಟ್ಟು ಮುಟ್ಟಾಗಿದೆ, 2024ಕ್ಕೆ ಈ ಸ್ಮಾರಕಕ್ಕೆ 400 ನೇ ವಷಾ೯ಚಾರಣೆ ಮತ್ತು ಆನಂದ ಪುರ ಎಂದು ನಾಮಕರಣಕ್ಕೂ ಕೂಡ. ನನ್ನ ಈ ಕಾದಂಬರಿ ಓದಿ ಸ್ಥಳ ಬೇಟಿ ಅನೇಕರು ಮಾಡುತ್ತಿದ್ದಾರೆ, ಪ್ರತಿನಿತ್ಯ ಹೊಸ ಪ್ರವಾಸಿಗಳು ಹೆಚ್ಚು ಬರುತ್ತಾರೆ ಅಂತ ಸ್ಥಳಿಯರು ಹೇಳುತ್ತಾರೆ. ನಿನ್ನೆ ಪತ್ರಕತ೯,ಸಾಹಿತಿ ತುಮರಿ ಬಾಗದ ಜನಪರ ಹೋರಾಟಗಾರ, ಉಪನ್ಯಾಸಕರೂ ಆಗಿರುವ ಜಿ.ಟಿ. ಸತ್ಯನಾರಾಯಣ್ ಚಂಪಕ ಸರಸ್ಸು ಸಂದಶಿ೯ಸಿದ್ದಾರೆ. ನಾನು ಅವರ ಸರಣಿ ವಿಡಿಯೋ ಮಾಲಿಕೆ GT ವಿಥ್ TRUTH ನ ನಿರಂತರ ವೀಕ್ಷಕ ನಿನ್ನೆಯಿಂದ ಇದು ಚಂಪಕಸರಸ್ಸುವಿನ ಸುದ್ದಿಯಿಂದ U TUBE ಮಾಲಿಕೆ ಆಗಿ ಬದಲಾಗಿದೆ ಇವರ ಸರಣಿ ವಿಡಿಯೋ ಹೊಸ ರೂಪಕ್ಕೆ ಯಶಸ್ಸು ಹಾರೈಸುತ್ತೇನೆ. ನಿಜ 400 ವರ್ಷದಿಂದ ಚಂಪಕಾಳ ಆತ್ಮ ಅಲ್ಲಿ ಅತೃಪ್ತಿಯಿಂದ ಕಾದಿದೆ, ಜಿಟಿಯವರ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮಧ್ಯದಲ್ಲಿ ಪ್ರಖ್ಯಾತ ಪರಿಸರ ಮತ್ತು ಜಲ ತಜ್ಞ ಸಿಸಿ೯...