ಓದುಗನ ಹೃದಯದ ಬಾಗಿಲು ತಟ್ಟುತ್ತದಾ ನನ್ನ ಕಾದಂಬರಿ ಅಂತ ನನ್ನ ಅಂತರಂಗ ಅನುಮಾನಿಸುತ್ತಿತ್ತು,ಈಗಬೆಸ್ತರ ರಾಣಿ ಚಂಪಕಾ ಕಾದಂಬರಿ ಈ ಅನುಮಾನ ಸುಳ್ಳಾಗಿಸಿದೆ ಇದು ಬರಹಗಾರನಿಗೆ ಸಾಥ೯ಕತೆ ನೀಡಿದಂತಾಗಿದೆ.
ಒಬ್ಬ ಲೇಖಕನಿಗೆ ತನ್ನ ಬರಹ ಓದುಗನ ಹೃದಯದ ಬಾಗಿಲು ತಟ್ಟಿತೆಂದರೆ ಅದಕ್ಕಿ೦ತ ಸಾಥ೯ಕತೆ ಬೇರೆ ಇರಲಿಕ್ಕಿಲ್ಲ.
400 ವರ್ಷದ ಹಿಂದೆ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಾಳಿಗಾಗಿ ಕಟ್ಟಿಸಿದ ಈ ಸ್ಮಾರಕ ಈಗಲೂ ಗಟ್ಟು ಮುಟ್ಟಾಗಿದೆ, 2024ಕ್ಕೆ ಈ ಸ್ಮಾರಕಕ್ಕೆ 400 ನೇ ವಷಾ೯ಚಾರಣೆ ಮತ್ತು ಆನಂದ ಪುರ ಎಂದು ನಾಮಕರಣಕ್ಕೂ ಕೂಡ.
ನನ್ನ ಈ ಕಾದಂಬರಿ ಓದಿ ಸ್ಥಳ ಬೇಟಿ ಅನೇಕರು ಮಾಡುತ್ತಿದ್ದಾರೆ, ಪ್ರತಿನಿತ್ಯ ಹೊಸ ಪ್ರವಾಸಿಗಳು ಹೆಚ್ಚು ಬರುತ್ತಾರೆ ಅಂತ ಸ್ಥಳಿಯರು ಹೇಳುತ್ತಾರೆ.
ನಿನ್ನೆ ಪತ್ರಕತ೯,ಸಾಹಿತಿ ತುಮರಿ ಬಾಗದ ಜನಪರ ಹೋರಾಟಗಾರ, ಉಪನ್ಯಾಸಕರೂ ಆಗಿರುವ ಜಿ.ಟಿ. ಸತ್ಯನಾರಾಯಣ್ ಚಂಪಕ ಸರಸ್ಸು ಸಂದಶಿ೯ಸಿದ್ದಾರೆ.
ನಾನು ಅವರ ಸರಣಿ ವಿಡಿಯೋ ಮಾಲಿಕೆ GT ವಿಥ್ TRUTH ನ ನಿರಂತರ ವೀಕ್ಷಕ ನಿನ್ನೆಯಿಂದ ಇದು ಚಂಪಕಸರಸ್ಸುವಿನ ಸುದ್ದಿಯಿಂದ U TUBE ಮಾಲಿಕೆ ಆಗಿ ಬದಲಾಗಿದೆ ಇವರ ಸರಣಿ ವಿಡಿಯೋ ಹೊಸ ರೂಪಕ್ಕೆ ಯಶಸ್ಸು ಹಾರೈಸುತ್ತೇನೆ.
ನಿಜ 400 ವರ್ಷದಿಂದ ಚಂಪಕಾಳ ಆತ್ಮ ಅಲ್ಲಿ ಅತೃಪ್ತಿಯಿಂದ ಕಾದಿದೆ, ಜಿಟಿಯವರ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮಧ್ಯದಲ್ಲಿ ಪ್ರಖ್ಯಾತ ಪರಿಸರ ಮತ್ತು ಜಲ ತಜ್ಞ ಸಿಸಿ೯ಯ ಕಳವೇ ಶಿವಾನಂದರು ಪೋನ್ ಮಾಡಿ ಶುಭ ಸಮಾಚಾರ ಹೇಳಿದ್ದಾರೆ ತಕ್ಷಣ ಚಂಪಕ ಸರಸ್ಸುವಿಗೆ ಮಾಡಬೇಕಾದ ದುರಸ್ತಿಗೆ ಅವರು ಶ್ರಮ ಹಾಕಲಿದ್ದಾರೆ.
ಇದನ್ನೇ ನಾನು ಹೇಳುವುದು ಬರಹಗಾರನಿಗೆ ಸಾಥ೯ಕ ಎಂಬ ಮನಸ್ಥಿತಿ ಸಿಗುವುದು ಓದುಗರ ಹೃದಯದ ಬಾಗಿಲು ಬರಹದ ವಸ್ತು ತಲುಪಿದಾಗಲೇ ಅಲ್ಲವೇ!?
ಜಿ ಟಿ ವಿಥ್ truth.... ಯು ಟ್ಯೂಬ್ ಚಾನೆಲ್ ಆಗಿ ಸೇರ್ಪಡೆ ಆಗುತ್ತಿದೆ...
ಪ್ರೇಮದ ಕರೆಗೆ ಒಗುಟ್ಟು ಕೊಳದ ಆಳಕಿಳಿದು.....
ಆ ಮಹಾರಾಣಿ ಅಲ್ಲೇ ಇದ್ದಾಳ...? ಇಲ್ಲ ಅನ್ನುವುದಾದರೂ ಹೇಗೆ. ಆ ನೀಲಿ ಕೊಳ ಆಳದಲ್ಲಿ ಇತಿಹಾಸದ....ಕ್ಷಮಿಸಿ ಚರಿತ್ರೆಯ ಅಮರ ಪ್ರೇಮದ ಸ್ಮಾರಕವಾಗಿರುವ ಚಂಪಕ ಮಹಾರಾಣಿಯ ಸಮಾಧಿ ಸ್ಥಳದ ಕೊಳ ತನ್ನ ಕಥೆಯನ್ನ ತಾನೇ ಹೇಳುತ್ತಾ ಇದೆ. ಕೇಳುವ ಕಿವಿ ಇದ್ದರೆ...ನೋಡುವ ನೋಟದಲ್ಲಿ ಪೂರ್ವಗ್ರಹ ಮತ್ತು ನಂಜು ಇಲ್ಲದೆ ಇದ್ದರೆ ಅರುಣ್ ಪ್ರಸಾದ್ ಬರೆದಿರುವ ಕೆಳದಿ ಅರಸ ರಾಜ ವೆಂಕಟಪ್ಪನಾಯಕ ಮತ್ತು ಚಂಪಕ ಸರಸು ಪ್ರೇಮ ಸಾಮ್ರಾಜ್ಯ ಕೊಳದ ತಿಳಿ ನೀರಿನ ಹಾಗೆ ಪರಿಶುದ್ಧವಾಗಿ ಆವರಿಸಿ ಆಪ್ತಗೊಳಿಸುತ್ತದೆ. ಇಂದು ಬಹಳ ಆಕಸ್ಮಿಕವಾಗಿ ಆನಂದಪುರ ಭೇಟಿ ನೀಡಿದಾಗ ಚಂಪಕ ಮಹಾರಾಣಿಯನ್ನ ನೋಡಬೇಕು ಅನ್ನಿಸಿತು. ಏಕಾಂಗಿಯಾಗಿ ಹೊರಟೆ.
ಅರುಣ್ ಪ್ರಸಾದ್ ಕರೆ ಮಾಡಿದೆ ಅವರು ತಡವಾಗಿ ಸ್ವೀಕರಿಸುವ ಹೊತ್ತಿಗೆ ನಾನು ಕೊಳ ತಲುಪಿ ಆಗಿತ್ತು. ತಲುಪಲು ಕಡೆ ವಿಳಾಸ ಕೇಳಿದರೂ ಸಮರ್ಪಕವಾಗಿ ಮಾರ್ಗಸೂಚಿ ಸಿಗದೇ ಇದ್ದುದು ಸ್ಥಳೀಯರಿಗೆ ನೆಲದ ಇತಿಹಾಸ ಬಗ್ಗೆ ಇರುವ ಅವಜ್ಞೆ ಭಾಗವಾಗಿ ನನಗೆ ಕಾಣಿಸಿತು. ಕೊಳದ ಮುಂಭಾಗದಲ್ಲಿ ಹೋಗಿ ನಿಂತರೆ ಕೊಳ ಎರಡೆರಡು ಕಥೆ ಹೇಳಿತು.
ಮೊದಲ ಕಥೆ... ದುಃಖಾಂತ್ಯ ಕಂಡ ಪ್ರೇಮ ಭಾಗದ್ದು. ಅರುಣ್ ಪ್ರಸಾದ್ ಕಾದಂಬರಿ ಓದಿ ಹೋಗಿದ್ದ ನಾನು ಚಂಪಕ ಮಹಾರಾಣಿ ಬಗ್ಗೆಯೇ ಆಲೋಚನೆ ಕೇಂದ್ರೀಕರಿಸಿಕೊಂಡು ಹೋಗಿದ್ದೆ. ಒಂದರ್ಥದಲ್ಲಿ ಶೂದ್ರ ಮಹಾರಾಣಿಯ ಹುಡುಕಿ ಹೋಗಿದ್ದೆ. ಆದರೆ ಅಲ್ಲಿ ಹೋಗಿ ನಿಂತಾಗ ನಿಜಕ್ಕೂ ದರ್ಶನ ನೀಡಿದ್ದು ನಮ್ಮ ಕೆಳದಿಯ ಅರಸ ರಾಜ ವೆಂಕಟಪ್ಪನಾಯಕ ಆಂತರ್ಯದಲ್ಲಿ ಚಂಪಕ ಮಹಾರಾಣಿ ಬಗ್ಗೆ ಹೊಂದಿದ್ದ ಅಪಾರ ಪ್ರೇಮವನ್ನ. ಇಡೀ ಕೊಳದ ವಾಸ್ತುಶಿಲ್ಪ, 400 ವರ್ಷವಾದರೂ ಅದು ಮುಕ್ಕಾಗದೆ ಉಳಿದಿರುವ ರೀತಿ, ಕೇವಲ ಸಣ್ಣದೊಂದು ಕೊಳ ಕಟ್ಟಿಸದೇ ಕಾಲ ಕಾಲಕ್ಕೂ ತಾನು ಪ್ರೇಮಕ್ಕೆ ಒಲಿದ ಅನಂದಪುರದ ಮಣ್ಣಿನಲ್ಲೇ ಶಾಶ್ವತವಾಗಿ ಉಳಿಸುವ ಪ್ರೇಮಸ್ಮಾರಕ ಕಟ್ಟಿದ ರಾಜ ವೆಂಕಟಪ್ಪನಾಯಕನ ಎದೆಯ ಪ್ರೇಮವೇ ನೀರಾಗಿ ಕೊಳ ಆವರಿಸಿದೆ. ಯುದ್ಧದಲ್ಲಿ ವೀರಮರಣ ಹೊಂದಿದ ಮಹಾರಾಣಿ ಸ್ಮಾರಕ ಮಾಡುವುದಕ್ಕೂ ತಾನು ಒಲಿದ ಆದರೆ ಸಮಾಜದ ನಿಕೃಷ್ಟ ಕಣ್ಣಿಗೆ ಜೀವತೆತ್ತ ಮಹಾರಾಣಿಗೆ ಆಕೆಯ ಕಾಲ ನಂತರವೂ ಸ್ಮಾರಕ ಸ್ವತಃ ರಾಜ ವಿಷಮ ಹೊತ್ತಿನಲ್ಲೂ ಕಟ್ಟಿಸುವುದಕೂ ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ವೆಂಕಟಪ್ಪ ನಾಯಕನೂ ಚಂಪಕ ರಾಣಿ ಜತೆ ಜತೆಗೆ ದರ್ಶನ ನೀಡಿ ತಮ್ಮ ಕಥೆ ಹೇಳಿದರು.
ಎರಡನೇ ಕಥೆ ಹೇಳಿದ್ದು...
ಕುರುಚಲು ಗಿಡ.. ಲಂಟಾನು ಪೊದೆ.. ಕಡಿದಾದ ರಸ್ತೆ...ಯಥಾ ಪ್ರಕಾರ ಹೆಂಡದ ಬಾಟಾಲ್, ರಾಶಿ ಗುಟ್ಕಾ ಪ್ಯಾಕೆಟ್, ಶಿವಲಿಂಗ ಗೋಪುರ ಮೇಲೂ ಆಧುನಿಕ ಯುಗಪುರುಷರ ಲವ್ ಸಿಂಬಲ್, ಹೆಸರು, ಪಾಳು ಬಿದ್ದ ದೇಗುಲ.....
ಒಂದು ಅದ್ಬುತ ಸ್ಮಾರಕವಾಗಬೇಕಾದ, ಸಾವಿರಾರು ಜನರಿಗೆ ಪ್ರವಾಸಿ ತಾಣ ಆಗಿ ಚರಿತ್ರೆ ಹುಡುಕಾಟಕೆ ಸ್ಫೂರ್ತಿ ಆಗಬೇಕಾದ, ನಮ್ಮ ಕೆಳದಿಯ ನಾಯಕನ ಅಂತರಂಗದ ಪ್ರೇಮ ಚಿಲುಮೆಯೇ ಆಗಿರುವ ಚಂಪಕ ಸರಸು ಕೊಳ ಅಳುತ್ತಿದೆ... ಕಣ್ಣೀರಾಗಿದೆ. ಅವನ್ಯಾವನೋ ಇತಿಹಾಸಕಾರ ಬರೆದದ್ದೇ ಅಂತಿಮ ಎಂದು 15 ಮಾರ್ಕ್ಸ್ ಪ್ರಶ್ನೆಗೆ ಉತ್ತರ ಬರೆಯಲು ಸೀಮಿತವಾಗಿ ಪದವಿ ಮುಗಿಸಿದರೆ, ಯುನಿವರ್ಸಿಟಿಗಳು ಅಲ್ಲಿಗೆ ಸೀಮಿತವಾದರೆ, ಸರ್ಕಾರ ನಡೆಸುವ ಯಾವುದೇ ಪಕ್ಷದ ಮಂದಿಗೆ ಇದು ಓಟು ತರುವ ವ್ಯವಹಾರ ಅಲ್ಲ ಅನ್ನಿಸಿದರೆ ಕೊಳದಲ್ಲಿ ಈ ಹಿಂದೆ ಹೂಳು ತುಂಬಿದಂತೆ ಪುನಃ ತುಂಬಿ ನಾಮವಾಶೇಷ ಆದರೆ ಆಶ್ಚರ್ಯ ಇಲ್ಲ... ಆಗ ಕೊಳದ ಒಳಗೆ ಮಾತ್ರ ಹೂಳು ತುಂಬಿರುವುದಿಲ್ಲ. ನಮ್ಮ ಮೆದುಳಿನ ಒಳಗೂ ಕೂಡ. ಕೊಳದ ಎದುರು ನಿಂತು ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿದಾಗ ಕ್ರಿಯಾಶೀಲ ಮತ್ತು ರಚನಾತ್ಮಕವಾಗಿ ಗಂಗಮತಸ್ಥ ಸಮುದಾಯದ ಸಂಘಟನೆ ಮಾಡುತ್ತಾ ಇರುವ ಡಾ. ವಿ ಶಂಕರ್ ರವರ ಫೌಂಡೇಶನ್ ಕೂಡ ನೆನಪಿಗೆ ಬಂತು. ಅರುಣ್ ಪ್ರಸಾದ್ ಜತೆಯಲ್ಲಿ ನಿಂತು ಎಲ್ಲರ ಸಹಕಾರ ಪಡೆದು ತಮ್ಮ ಪಾರಂಪರಿಕವಾಗಿರುವ ಸ್ಮಾರಕ ಉಳಿಸಿ ಜಾತಿ ಕಾರಣದಿಂದ ಪ್ರಾಣತೆತ್ತ ಚರಿತ್ರೆಗೆ ನ್ಯಾಯ ನೀಡುವ ಯೋಜನೆ ಮಾಡಬಹುದಿತ್ತು ಎಂದು ನನಗೆ ಇಂದು ಅನ್ನಿಸಿತು. ಅದರೊಳಗೆ ಜಿಡುಕು ಎನಿವೇಯೋ ಗೊತ್ತಿಲ್ಲ... ಸ್ಮಾರಕ ಉಳಿದು ಬೆಳೆದು ಬೆಳಗಲಿ ಎಂಬ ಆಶಯ ಮಾತ್ರ ನನ್ನದು.
ಮಾನ್ಯ ಶಾಶಕರು ಸೇರಿ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ಸರಿಯಾದ ರೀತಿಯಲ್ಲಿ ತಂದರೆ ಬಹಳ ಬೇಗ ಅದು ನೆರವೇರುತ್ತದೆ... ಆ ಕಾಲ ಸನ್ನಿಹಿತವಾಗಲಿ.
ಈ ನಡುವೆ ಭರವಸೆ ಮತ್ತು ಖುಷಿಯೆಂದರೆ ಇತಿಹಾಸ ಆಧಾರಿತ ಕಾದಂಬರಿಯೊಂದು ಆವರಿಸಿ ಕೊಳದ ಬುಡಕ್ಕೆ ಕರೆದೊಯ್ದು ನಿನ್ನೆ ಮತ್ತು ನಾಳೆಗಳ ಬಗ್ಗೆ ಇಂದು ಮಾತಾಡುವಂತೆ ಮಾಡಿರುವುದು. ಈ ನಡುವೆ ಜಿ.ಟಿ ವಿಥ್ truth ಇನ್ನು ಮುಂದೆ ಯು ಟ್ಯೂಬ್ ಚಾನೆಲ್ ಆಗಿ ಬದಲಾಗಲಿದೆ. ಒಂದು ಬಹುಮುಖ ನಡಿಗೆಗೆ ಸಿದ್ದ ಆಗಿ ಹೆಜ್ಜೆ ಕಿತ್ತು ಮುಂದಕ್ಕೆ ಇಟ್ಟಿರುವೆ. ನಿಮ್ಮ ಪ್ರೀತಿ ನಂಬಿಕೊಂಡು.
ಚಂಪಕ ಸರಸು ಕಾದಂಬರಿಗಾಗಿ...
Thank u ಅರುಣ್ ಪ್ರಸಾದ್ ಸರ್.
ಜಿ. ಟಿ ಸತ್ಯನಾರಾಯಣ ಕರೂರು.
Comments
Post a Comment