ತಾವರೇ ಕೆರೆ ಈಗ ಗೌರಿಕೆರೆ
ಚಾಲುಕ್ಯರ ಜಯಕೇಶಿ ಕಾಲದಲ್ಲಿ ನಿಮಿ೯ಸಿದ ಕೆರೆ ಎಂಬ ಪ್ರತೀತಿ ಇದೆ, ಇದನ್ನು ಕೆಳದಿ ಅರಸರ ಆಳ್ವಿಕೆ ಕಾಲದಲ್ಲಿ ಅಭಿವೃದ್ದಿ ಪಡಿಸಿ ಹೆಚ್ಚು ಕೃಷಿಗೆ ಅವಕಾಶ ಮಾಡಲಾಯಿತೆನ್ನುತ್ತಾರೆ.
ಎರೆಡು ಸಮುದ್ರ ಸೇರುವ ಈ ಕೆರೆ ನೀರು
ಈ ಕೆರೆಯ ವಿಶೇಷ ಎರೆಡು ತೂಬುಗಳಿದೆ ಇಲ್ಲಿಂದ ಫಲವತ್ತಾದ ಗುಂಡಿಬೈಲು ಎಂಬ ಬತ್ತದ ಕಣಜದ ಗದ್ದೆಗಳಿಗೆ ನೀರುಣಿಸಿ ಅಲ್ಲಿಂದ ಕಾಲುವೆ ಮೂಲಕ ಅಂಬ್ಲಿಗೋಳ ಜಲಾಶಯ ಹಾದು ತುಂಗಭದ್ರ ಸೇರಿ ಅಲ್ಲಿಂದ ಕೃಷ್ಣ ಗೋದಾವರಿ ಮೂಲಕ ಬಂಗಾಳಕೊಲ್ಲಿ ಸಮುದ್ರ ಸೇರಿದರೆ ಈ ಕೆರೆಯು ತುಂಬಿದಾಗ ಕೋಡಿಯಿ೦ದ ಹರಿಯುವ ನೀರು ಶರಾವತಿ ನದಿ ಸೇರಿ ಜೋಗ ಜಲಪಾತವಾಗಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.
ಯಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ
ಊರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ಪ್ರತಿಷ್ಟಾಪನಾ ನೇತೃತ್ವ ವಹಿಸಿ ಹಾಲಿ ದೇವಾಲಯದ ಟ್ರಸ್ಟ್ ನ ಗೌರವಾಧ್ಯಕ್ಷ ರಾದ ಬೆಂಗಳೂರಿನ ವಿಜಯನಗರ ವಾಸಿ ಜೋತಿಷಿ ಡಾ.ಎನ್.ಎಸ್.ವಿಶ್ವ ಪತಿ ಶಾಸ್ತ್ರಿ ಅವರಿಗೆ ಈ ಕೆರೆಯಲ್ಲಿ ದೇವರ ತೆಪ್ಪೊತ್ಸವ ಮಾಡಬೇಕಂಬ ಸಂಕಲ್ಪ 2006 ರಿ೦ದ ಇತ್ತು ಅದನ್ನ ಈಡೇರಿಸಲು ಈ ಕೆರೆ ತುಂಬಿದ್ದ ಜೊೊಂಡು ತೆಪ್ಪ ಸ್ವಚ್ಚ ಮಾಡಲು ನಿದ೯ರಿಸಿ ಶಿವಮೊಗ್ಗದ ಆ. ನಾ. ವಿಜೇಂದ್ರ ಸಹಾಯ ಕೋರಿದ್ದರಿ೦ದ ಅವರ ಗೆಳೆಯರ ತಂಡ ಶಿಿಮೊಗ್ಗ ರೋಟರಿ ವಿಜಯ ಕುಮಾರ್, ಡಯಾ ಅರೇಕಾ ಅರುಣ್ ದೀಕ್ಷಿತ್, ಉದ್ಯಮಿ ಶಿವರಾಜ್ ಮತ್ತು ಮಿತ್ರರು ಸ್ಥಳಿಯರ ಜೊತೆ ಸೇರಿ ಸ್ವಚ್ಚ ಮಾಡಿ ತೆಪ್ಪೊತ್ಸವಕ್ಕೆ ಅವಕಾಶ ಮಾಡಿದ್ದರು.
Comments
Post a Comment