Skip to main content

ಕೆಳದಿ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಜನರಲ್ಲಿ ಶಿವಮೊಗ್ಗದ ಬಿದನೂರು ನಗರವಾಸಿ ನಿವೃತ್ತ ಕೆಪಿಸಿ ವ್ಯವಸ್ಥಾಪಕರಾಗಿದ್ದ " ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ಸಂಶೋದನಾ ಕೃತಿ ಬರೆದಿರುವ ಅಂಬ್ರಯ್ಯ ಮಠ ನನ್ನ ಕಾದಂಬರಿ ಓದಿ ವಿಮಶಿ೯ಸಿದ್ದಾರೆ

#ಅ೦ಬ್ರಯ್ಯಮಠ_ಬಿದನೂರುನಗರವಾಸಿ_ಅವರು_ನನ್ನ_ಕಾದಂಬರಿ_ಓದಿ_ಪ್ರತಿಕ್ರಿಯಿಸಿದ್ದು_ನನಗೆ_ಸಂತೋಷ_ತಂದಿದೆ

ಕಾರಣ ಇವರು ಅನೇಕ ಪ್ರಸ್ತಕ ಬರೆದವರು (20ಕ್ಕೂ ಹೆಚ್ಚು ಪುಸ್ತಕ ಪ್ರಕಟ ಆಗಿದೆ) ಇವರು ಬರೆದ ''ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ವಿಶೇಷವಾದದ್ದು ಇದರಲ್ಲಿ ಚಂಪಕಾಳ ಬಗ್ಗೆ ಬರೆದಿದ್ದಾರೆ, ಇತಿಹಾಸದಲ್ಲಿ ಬರುವ ಚಂಪಕಾಳ ಮ್ಲೇಚ್ಚಾ ಜಾತಿ ಎಂಬ ಬಗ್ಗೆ ವೈದಿಕ ಶಾಸ್ತ್ರದ ಅಥ೯ ಹಳೆಗನ್ನಡದ ಅಥ೯ದ ಬಗ್ಗೆ ಅನೇಕ ವಿದ್ವಾಂಸರಲ್ಲಿ ವಿಚಾರ ವಿನಿಮಯ ಮಾಡಿದ ಬಗ್ಗೆ ಪೋನಿನಲ್ಲಿ ತಿಳಿಸಿದರು.
  ಕನಾ೯ಟಕ ಪವರ್ ಕಾರ್ಪೊರೇಷನ್ ನಲ್ಲಿ ವೃತ್ತಿ ಮಾಡಿ ವ್ಯವಸ್ಥಾಪಕರಾಗಿ ನಿವೃತ್ತರಾಗಿ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ನೆಲೆಸಿದ್ದಾರೆ, ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರು.
  ಕೆಳದಿ ಅರಸೊತ್ತಿಗೆಯ ಇತಿಹಾಸದ ಬಗ್ಗೆ ಅದಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಕೆಲವರಲ್ಲಿ ಅಂಬ್ರಯ್ಯ ಮಠ ಮುಂಚೂಣಿಯಲ್ಲಿದ್ದಾರೆ, ದೇಶ ವಿದೇಶ ಯಾತ್ರೆ ಮಾಡಿರುವ ಇವರು ನನ್ನ ಕಾದಂಬರಿ ಬಗ್ಗೆ ಏನು ಬರೆದಿದ್ದಾರೆ ನೋಡಿ.

#ಬೆಸ್ತರರಾಣಿ_ಚಂಪಕಾ” ಕಾದಂಬರಿ ಕುರಿತು  ಒಂದು ಪ್ರತಿಕ್ರಿಯೆ
 ಶ್ರೀ ಕೆ.ಅರುಣ್ ಪ್ರಸಾದ್ ಅವರು ಬರೆದ “ಬೆಸ್ತರರಾಣಿ ಚಂಪಕಾ” ಸಂಪೂರ್ಣವಾಗಿ  ಓದಿದೆ. ಓದಿದೆ ಎನ್ನುವುದಕ್ಕಿಂತ  ಕೃತಿ ಓದಿಸಿಕೊಂಡುಹೋಯಿತು ಎನ್ನುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಓದಿದ ಮೇಲೆ ಆ ಕುರಿತಂತೆ ಬರೆಯದೇ ಹೋದರೆ ಅಪಚಾರವಾದೀತು ಎಂಬ ಕಾರಣಕ್ಕಾಗಿ ನಾಲ್ಕು ವಾಕ್ಯ ಬರೆಯಬೇಕೆಂದು ಕುಳಿತೆ.
 ಒಟ್ಟು 58 ಅಧ್ಯಾಯಗಳಲ್ಲಿ ಚಂಪಕಾ ಎಂಬ ಬೆಸ್ತರ ಕನ್ಯೆಯ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಲೇಖಕರು ಸಫಲವಾಗಿದ್ದಾರೆ.
 ನಿಜ. ಲೇಖಕರು ಹೇಳಿದಂತೆ ಕೆಳದಿ ಸಾಮ್ರಾಜ್ಯದ ಇತಿಹಾಸದಲ್ಲಿ ಎಲ್ಲಿಯೂ ಕಂಡು ಬರದ ಅಮಾಯಕಿ ಚಂಪಕಾನ ಕುರಿತು ಪ್ರಸ್ತಾಪಿಸಿ, ಒಂದು ಕಿರು ಕಾದಂಬರಿಯನ್ನು ಬರೆದು ಆಕೆಯ ಹೆಸರನ್ನು ಚಿರಸ್ಥಾಯಿಯಾಗಿಸಿದ ಅವರ ಕೆಲಸ ಅತ್ಯಂತ ಸ್ತುತ್ಯಾರ್ಹವಾದುದು.
 ಚಂಪಕಾನ ಕತೆಯನ್ನು ಹೇಳಹೇಳುತ್ತಲೇ ಕೆಳದಿಯರಸರ ಕುರಿತಂತೆ ಸಾಕಷ್ಟು ವಿವರಗಳನ್ನೂ ಕಾದಂಬರಿ ಪ್ರಸ್ತಾಪಿಸುತ್ತದೆ. ಕೋಟೆಗಾರರ ಬಗ್ಗೆ, ಪೋರ್ಚುಗೀಸರ ಬಗ್ಗೆ, ಅರಬ್ಬರ ಸಮುದ್ರಯಾನದ ಬಗ್ಗೆ, ರಾಣಿ ಅಬ್ಬಕ್ಕಳ ಬಗ್ಗೆ, ಗಂಗಾಮತಸ್ತರ ಬಗ್ಗೆ, ಗಂಗಾಮಠದ ಬಗ್ಗೆ, ಬಸವಣ್ಣನವರು ಹಾಗೂ ಅವರ ಕಾಲದಲ್ಲಿ ಆಗಿ ಹೋದ ಅಂಬಿಗರ ಚೌಡಯ್ಯನ ಬಗ್ಗೆ, ಕೊಲ್ಲೂರು ಮೂಕಾಂಬಿಕೆಯ ಬಗ್ಗೆ, ಕೊಡಚಾದ್ರಿಯ ಬಗೆಗೆ, ಬಾರಾ ಪಂಥ ಯೋಗಿಗಳ ಬಗ್ಗೆ, ಆನಂದಪುರ ಹಾಗೂ ಅಲ್ಲಿಯ ಕೋಟೆಯ ಬಗ್ಗೆ, ಸಂದರ್ಭಕ್ಕನಸುರಿಸಿ ಮಹಾಭಾರತದ ವ್ಯಕ್ತಿತ್ವಗಳ ಬಗ್ಗೆ, ಬಿದನೂರಿನ ಬಗೆಗೆ, ಇಕ್ಕೇರಿಯ ಬಗೆಗೆ, ಶೃಂಗೇರಿ ಕ್ಷೇತ್ರದ ಬಗೆಗೆ ಹೀಗೆ ಕಾದಂಬರಿಯುದ್ದಕ್ಕೂ ಹಲವಾರು ವಿಷಯಗಳು ತೆರೆದುಕೊಳ್ಳುತ್ತವೆ. ಕುತೂಹಲದ ಕಣ್ಣನ್ನು ತೆರೆಸುತ್ತವೆ. ಕಾದಂಬರಿ ತನ್ನ ಚೌಕಟ್ಟನ್ನು ಮೀರಿ ಬೆಳೆಯುತ್ತ, ಓದಿಸಿಕೊಳ್ಳುತ್ತ ಮುಂದೆ ಸಾಗುತ್ತದೆ.
 ಚಂಪಕಾ ಎಂಬ ರಂಗೋಲಿ ಕಲೆಯಲ್ಲಿ ನಿಷ್ಠಾತಳಾದ ಕನ್ಯೆ ವೆಂಕಟಪ್ಪನಾಯಕನ ಮನವನ್ನು ಮುದಗೊಳಿಸುತ್ತಾಳೆ, ಅವ್ಯಕ್ತವಾಗಿ ಆಕರ್ಶಿಸುತ್ತಾಳೆ. ಎಡೆಬಿಡದೆ ಕಾಡುತ್ತಾಳೆ. ಪ್ರೇಮಕಾವ್ಯಕ್ಕೊಂದು ಮುನ್ನುಡಿ ಬರೆಯುತ್ತಾಳೆ. ಹಾಗಂತ ಅವಳೆಂದೂ ವೆಂಕಟಪ್ಪನಾಯಕನ ಎದುರು ಕಾಣಿಸಿಕೊಂಡವಳಲ್ಲ. ಪ್ರೇಮ ನಿವೇದನೆಯನ್ನು ಮಾಡಿಕೊಂಡವಳೂ ಅಲ್ಲ.  ರಾಜಾ ವೆಂಕಟಪ್ಪನಾಯಕನೊಂದಿಗೆ ತನ್ನ ವಿವಾಹ ಆಗಲಿದೆ ಎಂದು ಕನಸು ಕಂಡವಳಲ್ಲ. ಮಹಾರಾಣಿ ಆಗುತ್ತೇನೆಂದು ಅವಳೆಂದೂ ಕನವರಿಸಿದವಳಲ್ಲ. ಅಪೇಕ್ಷೆ ಪಟ್ಟವಳೂ ಅಲ್ಲ. ಬದಲು ‘ಪ್ರಜೆಗಳ ಭಯ, ಭಕ್ತಿ ಹಾಗೂ ಗೌರವದ ದ್ಯೋತಕವಾಗಿ ಹೆಚ್ಚು ಶ್ರಮವಹಿಸಿ ರಂಗೋಲಿ ಸೃಷ್ಟಿಸುತ್ತಿದ್ದಳಷ್ಟೇ’ ಅದರ ನಿಮಿತ್ತವಾಗಿಯೇ ವಿಧಿ ತಾನೇತಾನಾಗಿ ಅವಳನ್ನು ಅರಸನ ಸಮೀಪಕ್ಕೆ ಕರೆದೊಯ್ಯತ್ತದೆ ನೀಲಮ್ಮನ ಸಹಾಯದೊಂದಿಗೆ. ಕೊನೆಗೊಮ್ಮೆ  ಇಕ್ಕೇರಿಯ ತನ್ನ ಪರಿವಾರವನ್ನು ಅಜ್ಞಾತದಲ್ಲಿಟ್ಟು ಆನಂದಪುರದ ಕೋಟೆಯರಮನೆಯಲ್ಲಿ ಚಂಪಕಾಳೊಂದಿಗೆ ಮದುವೆಯೆಂಬ ಶಾಸ್ತ್ರವನ್ನು ಮುಗಿಸುತ್ತಾನೆ ವೆಂಕಟಪ್ಪನಾಯಕ. ಕೆಲವೇ ದಿನಗಳಲ್ಲಿ ರಾಜ್ಯದ ಪ್ರಜೆಗಳ ಕೆಟ್ಟನಾಲಿಗೆಗಳಿಗೆ ಆಹಾರವಾಗುತ್ತಾನೆ. ಅದೆಲ್ಲಕ್ಕಿಂತ ಮಿಗಿಲಾಗಿ ನಿರ್ದೋಶಿ ಚಂಪಕಾಳನ್ನೇ ದೋಶಿಯನ್ನಾಗಿಸುವ ಸಮಾಜ ಹಾಗೂ ಇಕ್ಕೇರಿಯ ಅರಮನೆಯಂಗಳ; ಚಂಪಕಾಳ ದುರಂತ ಮರಣಕ್ಕೆ ಕಾರಣವಾಗುತ್ತದೆ. ಚಂಪಕಾಳ ಮರಣ ವೆಂಕಟಪ್ಪನಾಯಕನಿಗೆ ವೇದನೆಯನ್ನುಂಟು ಮಾಡಿತು. ಚೆಲುವೆ ಚಂಪಕಾಳ ಸಾತ್ವಿಕ ನಿಷ್ಠೆಗೆ ಮನಸೋತಿದ್ದ ಆತ ಆಕೆಯ ಸ್ಮರಣೆ ಇತಿಹಾಸವಾಗಲಿ ಎಂಬ ಕಾರಣಕ್ಕೆ ‘ಚಂಪಕ ಸರಸು’ವಿನ ನಿರ್ಮಾತೃವಾಗುತ್ತಾನೆ. ನಂತರದ ದಿನಮಾನಗಳಲ್ಲಿ ‘ಪತಿಯಾದ ರಾಜಾ ವೆಂಕಟಪ್ಪನಾಯಕನಿಗಾಗಿ ಅವರ ಮೇಲಿನ ಕಳಂಕ ನಿವಾರಣೆಗಾಗಿ ಆತ್ಮಾಹುತಿ ಮಾಡಿಕೊಂಡು ಸಂತಳಾದಳು’ ಚಂಪಕಾ ಎಂದು ಪ್ರಜೆಗಳು ಕೊಂಡಾಡಿದರು. ದುರಂತದ ನಂತರ ಪಶ್ಚಾತ್ತಾಪಕ್ಕೆ ಒಳಗಾಗುವ ಸಮಾಜವನ್ನು ನೋಡುವಾಗÀ ‘ಇದೆಂಥ ಸಮಾಜ’ ಎನ್ನಿಸುತ್ತದೆ ಅಲ್ಲವೇ?
 ಒಂದು ಕೃತಿ ಹುಟ್ಟಬೇಕಾದರೆ ಅದರ ಹಿಂದೊಂದು ತಪನೆ ಬೇಕು, ಕುದಿ ಬೇಕು. ಇದಿಲ್ಲದೆ ಹುಟ್ಟುವ ಕೃತಿ ಬಹು ದಿನ ಉಳಿಯಲಾರದು. ಮಾತ್ರವಲ್ಲ ಓದುಗನ ಅಂತಃಕರಣಕ್ಕೆ ಮುಟ್ಟಲಾರದು. ತಟ್ಟಲಾರದು ಎಂಬುದು ನನ್ನ ವೈಯಕ್ತಿ ಅಭಿಪ್ರಾಯ. ಅಂಥದ್ದೇ ಕುದಿ ಸಾತ್ವಿಕ ಮನಸ್ಸಿನ ಕೆ.ಅರುಣ್‍ಪ್ರಸಾದ ಅವರ ಹೃದಯದಲ್ಲಿ ಹುಟ್ಟಿಕೊಂಡಿದೆ. ಚಡಪಡಿಕೆ ಶುರುವಾಗಿದೆ.  ಚಂಪಕಾ ಒಬ್ಬ ‘ವೇಶ್ಯ ಕನ್ಯೆ’ ಎಂಬ ಕೆಲವು ಪತ್ರಿಕೆಗಳ ಸುದ್ದಿಯನ್ನು ಓದಿ ಅವರ ಮನಸ್ಸು ಕುದ್ದುಹೋಗಿದೆ. ಪ್ರತಿಭಟನೆಗೆ ಮುಂದಾಗಿದೆ. ಅದರಲ್ಲೂ ಚಂಪಕಾ ಎನ್ನುವ ಕನ್ಯೆ ಆಗಿ ಹೋದುದೂ ಅವರು ನಡೆದಾಡುವ ಪ್ರದೇಶದಲ್ಲಿ! ತಮ್ಮೂರ ಮನೆಯ ಹುಡುಗಿ ಅವಳು!! ಅವಳಿಗೆ ಇಂಥ ಕಳಂಕ ಬಂದುದೇಕೆ? ಇದರಲ್ಲಿ ಚಾರಿತ್ರಿಕ ಸತ್ಯ ಎಷ್ಟಿದೆ? ಸುಳ್ಳಿನ ಕಂತೆ ಎಷ್ಟಿದೆ? ಎನ್ನುವ ಕುರಿತು ಇವರನ್ನು ಶೋಧನೆಗೆ ಹಚ್ಚಿದೆ. ಕ್ಷೇತ್ರ ಅಧ್ಯಯನಕ್ಕೆ  ನಾಂದಿ ಹಾಡಿದೆ. ಅದೆಲ್ಲದರ ಪರಿಣಾಮವೇÀ  ಈ ಕೃತಿಯ ಜನನ. ಹೀಗಾಗಿ ಈ ಕೃತಿ ಆನಂದಪುರದ ಇತಿಹಾಸಕ್ಕೆ ಒಂದು ಕಿರೀಟಪ್ರಾಯವಾಗಿದ್ದು ಮುಂದಿನ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಕಾರಣದಿಂದ ಶ್ರೀ ಕೆ.ಅರುಣ್ ಪ್ರಸಾದ ಅಭಿನಂದನಾರ್ಹರು.
 ಶ್ರೀ.ಕೆ.ಅರುಣ್ ಪ್ರಸಾದ, ಆನಂದಪುರದ ಕುರಿತಂತೆ ಇನ್ನೂ ಹೆಚ್ಚಿನ ಶೋಧನೆ ಮಾಡುವಂತಾಗಲಿ, ಹೆಚ್ಚು ಹೆಚ್ಚು ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡುವಂತಾಗಲಿ ಎಂದು ಹಾರೈಸುತ್ತ; ಈ ಕೃತಿಯನ್ನು ಓದುವ ಪ್ರತಿಯೊಬ್ಬರೂ  ಒಮ್ಮೆ ಆನಂದಪುರದ ಚಂಪಕ ಸರಸ್ಸನ್ನು ನೋಡುವಂತಾಗಲಿ, ಇದರ ರಕ್ಷಣೆಗೆ ಸರ್ಕಾರ ಹಾಗೂ ಸಾರ್ವಜನಿಕರು ಮುಂದಾಗಲಿ ಎಂದು ವಿನಂತಿಸಿಕೊಳ್ಳುತ್ತೇನೆ.

ದಿನಾಂಕ: 04.10.2020 ಅಂಬ್ರಯ್ಯ ಮಠ, ಬಿದನೂರುನಗರ
9480402712

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...