ನಾವಿಬ್ಬರು ಸಹೋದರರು ನಮ್ಮಿಬ್ಬರ ವಯಸ್ಸು ಅಣ್ಣನದ್ದು 65, ನನ್ನದು 55 ಇಲ್ಲಿಯವರೆಗೆ ನಮ್ಮಿಬ್ಬರ ಜೀವನ ಸಾಮರಸ್ಯದಿಂದ ನಡೆದಿದೆ
ಹೆಚ್ಚಿನ ಕುಟುಂಬದಲ್ಲಿ ಸಹೋದರರು ಮದುವೆ ಆಗುತ್ತಲೇ ಆಸ್ತಿ ಪಾಲು ಮಾಡಿಕೊಂಡು ಅಥವ ಪಿತ್ರಾಜಿ೯ತ ಆಸ್ತಿ ಮಾರಿಕೊಂಡು ಹಣ ಹಂಚಿಕೊಂಡು ಪ್ರತ್ಯೇಕರಾಗಿ ಬಿಡುತ್ತಾರೆ.
ಪರಸ್ಪರ ಹೊಡೆದಾಟ ದ್ವೇಷದಲ್ಲಿ ಒಂದೇ ತಾಯಿ ಮಕ್ಕಳಲ್ಲ ಎನ್ನುವಂತೆ ವತಿ೯ಸುತ್ತಾರೆ.
ನನ್ನೆಲ್ಲ ದಶಾವತಾರಗಳನ್ನ ಹತ್ತು ಹಲವು ವ್ಯವಹಾರಗಳನ್ನ ನನ್ನಣ್ಣ ಪ್ರಶ್ನಿಸದೇ ಸಹಕರಿಸಿದ್ದ, ನಮ್ಮ ತಂದೆ ದೇಹಾಂತ್ಯದ ನಂತರ ಬ್ಯಾಂಕಿನ ಸಾಲ ಸೋಲಗಳಿಗೂ ಕಣ್ಣು ಮುಚ್ಚಿ ಸಹಿ ಹಾಕಿದ್ದ, ನಂತರ ಉದ್ದಿಮೆಯಲ್ಲಿ ನಷ್ಟವಾಗಿ ಸಾಲ ತೀರಿಸಲಾಗದೇ ಆಸ್ತಿ ಹರಾಜಿಗೆ ಬಂದರೂ "ನಿನ್ನಿ೦ದ ನಾನು ಆಸ್ತಿ ಕಳೆದುಕೊಂಡೆ " ಅಂತ ಒಂದು ದಿನವೂ ಅನ್ನಲಿಲ್ಲ.
ದೇವರ ದಯೆಯಿಂದ ಎಲ್ಲಾ ಸಾಲಗಳನ್ನು ತೀರಿಸಿ ಆಸ್ತಿ ಉಳಿಸಿಕೊಂಡೆವು 2015 ರ ತನಕ ಒಂದೇ ಮನೆಯಲ್ಲಿ ವಾಸವಾಗಿದ್ದೆವು ನಂತರ ಒಂದೇ ತರದ ಎರೆಡು ಮನೆ ನಿಮಿ೯ಸಿ ಅಕ್ಕ ಪಕ್ಕದಲ್ಲಿ ಇದ್ದೇವೆ.
ಈಗಲೂ ಲೆಖ್ಖ ಪತ್ರ ನಾನೇ ನೋಡುತ್ತೇನೆ ಆದರೆ ಬ್ಯಾಂಕ್ ಅಕೌಂಟ್ ಮತ್ತು ಚೆಕ್ ಗೆ ನನ್ನ ಅಣ್ಣನೆ ಸಹಿ ಮಾಡಬೇಕು, ಊರಲ್ಲಿ ಅನೇಕ ನನ್ನ ತಂದೆಯ ಮಿತ್ರರು ನಮ್ಮಿಬ್ಬರ ಸಹೋದರ ಸೌಹಾರ್ದತೆಗೆ ಶಹಬ್ಬಾಷ್ ಅನ್ನುತ್ತಾರೆ.
ಇದೆಲ್ಲ ಏಕೆ ನೆನಪಾಯಿತೆಂದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉದ್ಯೋಗ ಮಾಡುವವರು ಪಾಲುದಾರಿಕೆಯಲ್ಲಿ ವ್ಯವಹಾರ ಮತ್ತು ಕೃಷಿ ನಡೆಸಿ ಆದಾಯದಲ್ಲಿ ಪಾಲು ಹಂಚಿ ಕೊಂಡರೆ ಒಟ್ಟು ಆಸ್ತಿಯೂ ಉಳಿಯುತ್ತದೆ ಮತ್ತು ಆಸ್ತಿ ಮೌಲ್ಯವೂ ಕಾಲ ಕಾಲಕ್ಕೆ ಹೆಚ್ಚು ಆಗುತ್ತದೆ ಅದರ ಮೇಲೆ ಸಾಲ ಸೌಲಭ್ಯವೂ ಸಿಗುತ್ತದೆ.
ಆದರೆ ಹೆಚ್ಚಿನ ಸಹೋದರರು ಅವರವರ ಬಂದುಗಳ ಅಥವ ಗೆಳೆಯರು ನೀಡುವ ಆಯೋಗ್ಯ ಸಲಹೆಗೆ ಆಸ್ತಿ ಹಿಸ್ಸೆ ಪಂಚಾಯಿತಿಗೆ ಮುಂದಾಗಿ ದೂರಾಲೋಚನೆ ಜಾಗದಲ್ಲಿ ದುರಾಲೋಚನೆ ಮಾಡುತ್ತಾರೆ.
ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿಮಿ೯ಸಿದ್ದೇವೆ,ಊರಿಗಾಗಿ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ನಿರ್ಮಿಸಿ ಪ್ರತಿಷ್ಟಾಪಿಸಿ ಸಮಪಿ೯ಸಿದ್ದೇವೆ, ನಮ್ಮ ಇಬ್ಬರ ಹೆಸರಲ್ಲಿ ಪ್ರತ್ಯೇಕ ಖಾತೆಯಲ್ಲಿ ರಬ್ಬರ್ ಪ್ಲಾಂಟೀಶನ್ ಇದೆ ಅದರ ನಿವ೯ಹಣೆ ಒಟ್ಟಿಗೆ ಮಾಡುತ್ತೇವೆ.
ಲಾಡ್ಜ್ ಮತ್ತು ರೆಸ್ಟೋರೆಂಟ್ ಗಳು ಪಾಲುದಾರಿಕೆಯಲ್ಲಿ ಒಟ್ಟಾಗಿ ಎಲ್ಲರೂ ಶ್ರಮಿಸುತ್ತೇವೆ.
Comments
Post a Comment