ಕೆಳದಿ ಇತಿಹಾಸದ ಜೀವಂತ ಜ್ಞಾನ ಭಂಡಾರ ಡಾ.ಕೆಳದಿ ಗು೦ಡಾ ಜೋಯಿಸರು ನಾನು ಬರೆದು ಪ್ರಕಟಿಸಿರುವ ಕೆಳದಿ ರಾಜಾ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾಳ ದುರಂತ ಪ್ರೇಮ ಕಥೆ ಆದರಿಸಿ ಬರೆದ ಬೆಸ್ತರ ರಾಣಿ ಚಂಪಕಾ ಓದಿ ವಿಮಷೆ೯ ಮಾಡಿ ಸೊಗಸಾಗಿ ನಿರೂಪಿಸಿದ್ದೀರಿ ಎಂದು ಅಭಿನಂದಿಸಿದ್ದಾರೆ.
ನನ್ನ ಕಾದಂಬರಿ #ಕೆಳದಿ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾ ಕೆಳದಿ ರಾಜಾ ವೆಂಕಟಪ್ಪ ನಾಯಕರ ಮತ್ತು ಚಂಪಕಾ ರಾಣಿಯ ದುರಂತ ಪ್ರೇಮ ಕಥೆಯನ್ನ (ಅವರ ಪತ್ನಿ ಅನಾರೋಗ್ಯ ಮತ್ತು ಇವರ ವೃದ್ದಾಪ್ಯದಲ್ಲೂ) ಬಿಡುವು ಮಾಡಿಕೊಂಡು ಓದಿ ವಿಮಷೆ೯ ಸ್ವಹಸ್ತದಲ್ಲಿ ಬರೆದ ಪತ್ರವನ್ನು ಕಳಿಸಿದ್ದಾರೆ.
"ಕೆಳದಿ ಇತಿಹಾಸದ ಅಭಿಮಾನಿಯಾಗಿ ಕುತೂಹಲಾಸಕ್ತಿಯಿಂದ ಅವಲೋಕಿಸಿದೆನು, ಸೊಗಸಾಗಿ ನಿರೂಪಿಸಿದ್ದೀರಿ ಅಭಿನಂದನೆಗಳು" ಅಂತ ನನ್ನ ಚೊಚ್ಚಲ ಕಾದಂಬರಿಯನ್ನು ದೃಡೀಕರಿಸಿದ್ದಾರೆ, ಇದು ನನ್ನ ಕಾದಂಬರಿಗೆ ಸಿಕ್ಕಿದ ಅತಿ ದೊಡ್ಡ ಪ್ರಶಸ್ತಿ ಅಂತ ಬಾವಿಸುತ್ತೇನೆ ಮತ್ತು ಅವರು ಓದಿ ವಿಮಷಿ೯ಸಿದ್ದಕ್ಕೆ ಅವರಿಗೆ ನನ್ನ ಸಾಷ್ಟಾ೦ಗ ಪ್ರಣಾಮಗಳನ್ನ ಅಪಿ೯ಸುತ್ತಾ ದೇವರು ಅವರಿಗೆ ಆಯುರಾರೋಗ್ಯ ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.
ದೀಘ೯ವಾಗಿ ಮನದಾಳದಿಂದ ಬರೆದ ಅವರ ಪತ್ರದಲ್ಲಿ ಅವರ ವೃದ್ಧಾಪ್ಯದಿಂದ ದೇಶದಲ್ಲೇ ಅತ್ಯಂತ ವಿಸ್ತಾರವಾಗಿದ್ದ ವಿದೇಶಿ ವಿದ್ವಾಂಸರಿಂದ ಪ್ರಶಂಸಿಲ್ಪಟ್ಟ ಕೆಳದಿ ಸಂಸ್ಥಾನದ ಹೆಚ್ಚಿನ ಕೆಲಸ ಮುಂದುವರಿಸಲಾಗದ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡೂರಪ್ಪರಿಗೆ ಎಲ್ಲೆಲ್ಲಿ ಯಾವ ಯಾವ ಕೆಳದಿ ರಾಜರ ಮತ್ತು ರಾಣಿಯರ ನಾಮಕರಣ ಮಾಡಬಹುದೆಂದು, ಕಾಶಿಯಲ್ಲಿ ಕೆಳದಿ ಅರಸರು ಸ್ಥಾಪಿಸಿದ ಮಠದ ಅಭಿವೃದ್ದಿ ಇತ್ಯಾದಿ ಬಗ್ಗೆ ಬರೆದ ಪತ್ರವನ್ನೂ ಲಗತ್ತಿಸಿದ್ದಾರೆ.
ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಹತ್ತಿರ ಕೆಳದಿ ಗುಂಡಾ ಜೋಯಿಸರನ್ನ ಕರೆದೊಯ್ದು ಪರಿಚಯಿಸಿ ಕೆಳದಿ ಮ್ಯೂಸಿಯಂ ಸ್ಥಾಪನೆಗೆ, ಕೆಳದಿ ಇತಿಹಾಸ ಸಂಶೋದನೆಗೆ ಕಾರಣ ಕತ೯ರಾದ ಡಾಕ್ಟರ್ ಜಯದೇವಿ ತಾಯಿ ಲಿಗಾಡೆಯವರನ್ನು ಸ್ಮರಿಸುತ್ತಾ ಇವತ್ತು ಕೆಳದಿ ಮ್ಯೂಸಿಯಂ ಮತ್ತು ಕೆಳದಿ ಸಂಶೋದನೆ ಸಕಾ೯ರಗಳ ನಿರಾಸಕ್ತಿಯಿಂದ ತಟಸ್ಥವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
#ರಾಜ್ಯ_ಸಕಾ೯ರ_ಕೆಳದಿ_ಇತಿಹಾಸದ_ಬಗ್ಗೆ_ಹೆಚ್ಚಿನ_ಆಸಕ್ತಿಯಿಂದ_ಸಂಶೋದನೆಗೆ_ಕೆಳದಿ_ಮ್ಯೂಸಿಯಂ_ಅಭಿವೃದ್ಧಿಗೆ_ಮುಂದಾಗಲು ಎಲ್ಲರೂ ಒತ್ತಾಯಿಸಬೇಕಾಗಿದೆ.
Comments
Post a Comment