ತೊಟ್ಟಿಲ ಮಗುವಿನ ಜೊತೆ ವಾಸವಾಗಿದ್ದ ನಾಗರ ಹಾವು 1960 ರ ದಶಕದಲ್ಲಿ ದೊಡ್ಡ ವಿಸ್ಮಯ ಸುದ್ದಿ ಆಗಿತ್ತು ಅದೇ ವ್ಯಕ್ತಿಯ ಜೊತೆ 60 ವರ್ಷದ ನಂತರ ಸಂದಶ೯ನ
#ಪ್ರಜಾವಾಣಿ_ದಿನಪತ್ರಿಕೆಯಲ್ಲಿ_60_ವಷ೯ದ_ಹಿಂದೆ_ಸುದ್ದಿ_ಆದ_ವ್ಯಕ್ತಿ_ಸಂದಶ೯ನ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೊಸಕೊಪ್ಪದಲ್ಲಿನ ಒಂದು ರೈತನ ಮನೇಲಿ ದೊಡ್ಡದಾದ ನಾಗರ ಹಾವು ತೊಟ್ಟಲಲ್ಲಿ ಮಲಗಿರುವ ಶಿಶುವಿನ ಜೊತೆ ಸದಾ ಮಲಗಿರುತ್ತೆ ಎಂಬ ಸುದ್ದಿ ಆ ಕಾಲದಲ್ಲಿ ಜನರಿಂದ ಜನರಿಗೆ ಹರಡಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಸುದ್ದಿ ಆಗಿತ್ತ೦ತೆ.
ಇದು ನಾನು ಸಣ್ಣಕ್ಕಿದ್ದಾಗ ನಮ್ಮ ತಂದೆ ಅವರ ಗೆಳೆಯರ ಜೊತೆ ಇದನ್ನೆಲ್ಲ ಮಾತಾಡುವುದು ಕೇಳಿದ್ದೆ ನ0ತರ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಾಗರ ಹಾವಿನ ಸಹಪಾಟಿ ಆಗಿ ಸುದ್ದಿ ಆಗಿದ್ದ ವ್ಯಕ್ತಿ ತಲಾಷ್ ಮಾಡಿದ್ದೆ.
ಶ್ರೀಮತಿ ಚೆನ್ನಮ್ಮ ಮತ್ತು ಬಡಿಯಪ್ಪ ದಂಪತಿಗಳು ಹೊಸಗುಂದದಿಂದ ಹೊಸಕೊಪ್ಪ ಎಂಬ ಹಳ್ಳಿಗೆ ವಲಸೆ ಬಂದು ಹುಲ್ಲಿನ ಮಾಡಿನ ಮತ್ತು ಬಿದಿರ ತಟ್ಟಿಯ ಗೋಡೆಯ ಗುಡಿಸಲು ಮಾಡಿ ಬಡತನದಿಂದ ಜೀವಿಸುತ್ತಿದ್ದರು ಅವರಿಗೆ ಒಂದು ಹೆಣ್ಣು ಮಗು ಇತ್ತು.
ಇಲ್ಲಿಗೆ ಬಂದ ಮೇಲೆ ಪುತ್ರ ಸಂತಾನವಾಯಿತು ಮಗುವನ್ನು ಮಾತ್ರ ನಾಗರ ಹಾವು ಬಿಟ್ಟು ದೂರ ಹೋಗುತ್ತಿರಲಿಲ್ಲವಂತೆ, ಹಾಲು ಕುಡಿಸುವಾಗ ಮಾತ್ರ ದೂರ ಇರುತ್ತಿತ್ತಂತೆ ಹಾಗಾಗಿ ಮಗುವಿಗೆ ನಾಗರಾಜ ಅಂತ ಹೆಸರಿಡುತ್ತಾರೆ.
ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ಅನೇಕ ಮಠಾದೀಶರೇ ಬಂದು ಮಗು ದತ್ತು ಪಡೆಯಲು ಪ್ರಯತ್ನಿಸಿದರಂತೆ ಆದರೆ ಪೋಷಕರು ಒಪ್ಪುವುದಿಲ್ಲ.
ಮಗು 4 ವರ್ಷದವನಾಗುವಾಗಲು ನಾಗರ ಹಾವು ಬಿಡುವುದಿಲ್ಲ ನಂತರ ಈ ದಂಪತಿ ಈ ಊರು ಬಿಟ್ಟು ಸಮೀಪದ ಕಣ್ಣೂರಿಗೆ ಹೋಗಿ ನೆಲೆಸುತ್ತಾರೆ ನಂತರ ಮಗುವಿಗೆ ಸೀತಾರಾಮ ಅಂತ ಹೊಸ ಹೆಸರು ಇಡುತ್ತಾರೆ.
ಇದೆಲ್ಲ ನಾನು 1995 - 2000 ನೇ ಇಸವಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ತಿಳಿದರೂ ಈಗಿನ ಮೊಬೈಲ್ ಇಲ್ಲದ್ದರಿಂದ ದಾಖಲಿಸಲು ಆಗಿರಲಿಲ್ಲ.
Comments
Post a Comment