Skip to main content

Posts

Showing posts with the label Pepper queen Channabyradevi ruled region Jains Rice roti preparation recepe is quite different but tasty

Blog number 1577. ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿ ಆಳ್ವಿಕೆ ಪ್ರದೇಶದಲ್ಲಿನ ಜೈನ ಧರ್ಮದ ಅನುಯಾಯಿಗಳ ವಿಶಿಷ್ಟ ಸಂಪ್ರದಾಯಿಕ ಅಕ್ಕಿ ರೊಟ್ಟಿ ತಯಾರಿಸುವ ವಿಧಾನಕ್ಕೆ ಕಾರಣ ಏನಿರಬಹುದು? ಈ ರೊಟ್ಟಿಗಳ ರುಚಿ ಮತ್ತು ಘಮವೇ ಬಿನ್ನವಾಗಿರುತ್ತದೆ.

#ಪಶ್ಚಿಮ_ಘಟ್ಟದ_ಜೈನರು_ತಯಾರಿಸುವ_ವಿಶಿಷ್ಟ_ಅಕ್ಕಿ_ರೊಟ್ಟಿ. #ಗೇರುಸೊಪ್ಪೆಯ_ಕಾಳುಮೆಣಸಿನ_ರಾಣಿ_ಚೆನ್ನಾಬೈರಾದೇವಿ_ಆಳ್ವಿಕೆ_ಪ್ರದೇಶದಲ್ಲಿ_ಮಾತ್ರ. #ಇದು_ಅಕ್ಕಿ_ಹಿಟ್ಟಿನಿಂದ_ತಯಾರಾಗುವ_ರೊಟ್ಟಿ_ಅಲ್ಲ #ಇದರ_ರುಚಿ_ಘಮವೇ_ಬೇರೆ. #ಇದು_ಪಶ್ಚಿಮಘಟ್ಟದ_ಜೈನರ_ಸೂಪರ್_ರೆಸಿಪಿ. #ಕೆಳದಿ_ರಾಜ_ವೆಂಕಟಪ್ಪ_ನಾಯಕರಿಂದ_ಇಕ್ಕೇರಿ_ಕೋಟೆಯಲ್ಲಿ_ಬಂದಿಸಲ್ಪಟ್ಟ_ರಾಣಿ_ಚೆನ್ನಾಭೈರಾದೇವಿ. #ಚೆನ್ನಾಭೈರಾದೇವಿ_ಸಮಾದಿ_ತಪ್ಪು_ತಿಳುವಳಿಕೆಯಿಂದ_ದೇವರ_ವಿಗ್ರಹ_ಪ್ರತಿಷ್ಟಾಪಿಸಿ_ದೇವಸ್ಥಾನ_ಆಗಿದೆ.    ಯುರೋಪಿನ ದೇಶಗಳಲ್ಲಿ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಪಡೆದಿದ್ದ ಗೇರುಸೊಪ್ಪೆಯ ಜೈನರ ರಾಣಿ ಚೆನ್ನಾಭೈರಾದೇವಿ ಆಳಿದ ಪ್ರದೇಶವಾದ ಸಾಗರ ತಾಲೂಕಿನ ಕರೂರು,ಬಾರಂಗಿ ಹೋಬಳಿಗಳಲ್ಲಿ ಮಾರಿಗೊಂದು ಜೈನ ಬಸದಿಯ ಪಳಯುಳಿಕೆಗಳಿದೆ.      ರಾಣಿಯ ಕಾನೂರು ಕೋಟೆ ಇಲ್ಲೇ ಇತಿಹಾಸದ ಕಥೆ ಹೇಳುತ್ತಿದೆ, ಜೋಗ್ ಜಲಪಾತ ದಾಟಿದರೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಾ ಬೈರಾದೇವಿ ಪಶ್ಚಿಮ ಘಟ್ಟದಲ್ಲಿ ಸಂಗ್ರಹಿಸಿದ ಕಾಳು ಮೆಣಸು ಯುರೋಪಿಯನ್ನರ, ಅರಬ್ ದೇಶದ ವ್ಯಾಪಾರಿಗಳಿಗೆ ಸೇರಿದ ಹಡಗುಗಳಿಗೆ ತುಂಬುವ ಒಳನಾಡ ಬಂದರಾಗಿತ್ತು.   ಇಲ್ಲಿ ಹರಿಯುವ ನದಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಂಬೂ ತೀರ್ಥದಲ್ಲಿ ಹುಟ್ಟುವ ಶರಾವತಿ ನದಿ.    ಪೋಚು೯ಗೀಸರೊಂದಿಗೆ ಯುದ್ದ ಮಾಡಿದ್ದ ದೀರ ರಾಣ...