Skip to main content

Posts

Showing posts with the label My experience with restaurants

Blog number 1104. ಹೋಟೆಲ್ ಉದ್ಯಮದ ಅನುಭವಗಳು

#ರೆಸ್ಟೋರಂಟ್_ಮಾಲಿಕರು_ಹೊಸದಾಗಿ_ಹೋಟೆಲ್_ಉದ್ಯಮ_ಮಾಡುವವರಿಗಾಗಿ   ವಿಜಯವಾಣಿಯ ಶನಿವಾರದ ಹಣ- ಝುಣ - ಮನ ಕಾಲಂ ಬರೆಯುವ ಉದಯ್ ಜಾದುಗಾರರ ಇವತ್ತಿನ ಕಾಲಂ ವಿಶೇಷವಾಗಿದೆ ರೆಸ್ಟೋರಂಟ್ ಮಾಲಿಕರ ಕಷ್ಟ ಅದಕ್ಕೆ ಪರಿಹಾರದ ಟಿಪ್ಸ್ ಕೂಡ ನೀಡಿದ್ದಾರೆ.   2012 ರಿಂದ ನಾನು ಅನಿವಾಯ೯ವಾಗಿ ಈ ಉದ್ಯಮದಲ್ಲಿ ತೊಡಗ ಬೇಕಾಯಿತು, ಎಲ್ಲಾ ರೀತಿಯ ಸಕ೯ಸ್ ನಡಿತಾನೆ ಇದೆ ಅದರಲ್ಲೂ ಪ್ರತಿ ದಿನ ಬೆಳಿಗ್ಗೆ ಹೊಸ ರಿಪೈಂಡ್ ಆಯಿಲ್ ನಿಂದ ಅಡುಗೆ ಭಟ್ಟರು ಸ್ನಾನ ಮಾಡಿ ಬಂದು ಅಡಿಗೆ ಪ್ರಾರಂಬಿಸ ಬೇಕು, ಪ್ರತಿ ದಿನ ಒಗೆದು ಶುಭ್ರ ಮಾಡಿದ ಸಮವಸ್ತ್ರ, ತಲೆಯ ಕೂದಲು ಉದರುವುದು ತಡೆಯಲು ಟೋಪಿ, ಈಗ ಕೊರಾನಾ ಕಾಲದಲ್ಲಿ ಮಾಸ್ಕ್, ಅಡುಗೆ ಮನೆಗಾಗಿಯೇ ಪ್ರತ್ಯೇಕ ಶುಚಿಗೊಳಿಸಿದ ಪಾದರಕ್ಷೆ ದರಿಸಿ ಅಡುಗೆ ಶುರು ಮಾಡಬೇಕು.   ಬೇರೆ ಸಿಬ್ಬಂದಿ ಅಥವ ಅತಿಥಿಗಳಿಗೆ ಪ್ರವೇಶ ಇಲ್ಲ, ಪ್ರಿಜ್ ನಲ್ಲಿಟ್ಟು ಬಳಸುವ ಚಟ್ನಿ/ಸಂಬಾರ್ ಗೆ ನಮ್ಮಲ್ಲಿ ಅವಕಾಶ ಇಲ್ಲ, ಟೇಸ್ಟಿಂಗ್ ಪೌಡರ್ (ಅಜಿನೋ ಮೋಟೋ), ಕೃತಕ ಬಣ್ಣ ಬಳಕೆ ಕೂಡ ನಮ್ಮಲ್ಲಿ ನಿಶೇದ ಇದೆ, ತರಕಾರಿ ಪ್ರತಿ ನಿತ್ಯ ತೊಳೆದು ಟೇಬಲ್ ರೋಲ್ ಹಾಸಿದ ಟೀಬಲ್ ಮೇಲೆ ಚಾಪಿಂಗ್ ಪ್ಲೇಟ್ ಮೇಲೆ ತರಕಾರಿ ಹೆಚ್ಚಬೇಕು.   ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ಗಾಗಿ ಪ್ರತ್ಯೇಕ ಕಸದ ಬುಟ್ಟಿ ಬಳಸಬೇಕು ಇಡ್ಲಿ, ವಡೆ ಇತ್ಯಾದಿ ತಿಂಡಿ ಚಿಮುಟದಲ್ಲಿ ತೆಗೆದು ಬಳಸಬೇಕು, ಕುಡಿಯಲು ಶುದ್ಧ ಪಿಲ್ಟರ್ ನೀರು, ಚ...