Skip to main content

Posts

Showing posts with the label T.P.Kilasam

4114. ಟಿ_ಪಿ_ಕೈಲಾಸಂಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.

ಟಿ_ಪಿ_ಕೈಲಾಸಂ ಜುಲೈ 29 ಅವರ 142ನೆ ಹುಟ್ಟು ಹಬ್ಬ, ಅವರ ಮೊದಲ ನಾಟಕ #ಟೊಳ್ಳುಗಟ್ಟಿ ಅವರು ಶಿವಮೊಗ್ಗದಲ್ಲಿದ್ದಾಗಲೇ ಬರೆದ ನಾಟಕ ಇದು.   ​ಕೈಲಾಸಂ ಅವರು ಇಂಗ್ಲೆಂಡ್‌ನಿಂದ ಹಿಂದಿರುಗಿದಾಗ, ಭಾರತದಲ್ಲಿದ್ದ (ವಿಶೇಷವಾಗಿ ಮೈಸೂರು/ಬೆಂಗಳೂರು ಪ್ರಾಂತ್ಯದ) ಅಂದಿನ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು ಹತ್ತಿರದಿಂದ ನೋಡಿದರು.    ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಬಾಯಿಪಾಠ (Rote learning) ಮಾಡುವುದನ್ನು, ಪೋಷಕರು ಅಂಕಗಳ ಆಧಾರದ ಮೇಲೆ ಮಕ್ಕಳನ್ನು ಅಳೆಯುವುದನ್ನು ಕಂಡು, ಆ ಪದ್ಧತಿಗೆ ವಿರೋಧವಾಗಿ ಹಾಗೂ ಜಾಗೃತಿ ಮೂಡಿಸಲು ಈ ನಾಟಕವನ್ನು ಬರೆದರು.    ಇನ್ನೂ ಒಂದು ವಿಶೇಷ ಆ ನಾಟಕದ ಮೊದಲ ರಂಗ ಪ್ರಯೋಗ ಆಗಿದ್ದು ಕುಂಸಿಯಲ್ಲಿ.  ಕುಂಸಿ -ಚೋರಡಿ ಮತ್ತು  ತುಪ್ಪೂರಿನಲ್ಲಿದ್ದ MML ಮ್ಯಾಂಗನೀಸ್ ಗಣಿಯ ಉನ್ನತಾಧಿಕಾರಿ ಆಗಿದ್ದರು ಟಿ.ಪಿ. ಕೈಲಾಸಂ.   ಮಹಾನ್ ನಾಟಕಕಾರ ಸಾಹಿತಿ ಟಿ.ಪಿ.ಕೈಲಾಸಂ ಶಿವಮೊಗ್ಗ ಜಿಲ್ಲೆಯಲ್ಲಿ ನಾಟಕ ಬರೆದರು ಮತ್ತು ಅ ನಾಟಕ  ಪ್ರದರ್ಶನ ಕುಂಸಿ ಎಂಬ ಊರಲ್ಲಿ ಮಾಡಿಸಿದ್ದರು ಎಂಬುದೇ ವಿಶೇಷ ಸುದ್ದಿ.     ಟಿ.ಪಿ.ಕೈಲಾಸಂ ಬರೆದ ಕೊ ಕೋ ಕೋಳಿಕೆ ರಂಗ ಎಂಬ ಹಾಡು ಕನ್ನಡದ ಖ್ಯಾತ ಗಾಯಕ ಕಾಳಿಂಗರಾವ್ ದ್ವನಿಯಲ್ಲ ಅದ್ಬುತವಾಗಿ ಮೂಡಿ ಬರುತ್ತಿತ್ತು ನೆನಪಿಸಿಕೊಳ್ಳಿ.    ನಮ್ಮ ಶಿವಮೊಗ್ಗ ತಾಲ್ಲೂಕಿನ ಕುಂಸಿ, ಚೋರಡಿ ಮತ್ತುತುಪ...