Skip to main content

Posts

Showing posts with the label A great social work of Ramakrishna Iyyangar family

ಭಾಗ - 3 , ರಾಮಕೃಷ್ಣ ಅಯ್ಯಂಗಾರರು ತಮ್ಮ ಧರ್ಮಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮರಣೆಗಾಗಿ ನಿಮಿ೯ಸಿದ ಆನಂದಪುರಂ ಆಸ್ಪತ್ರೆ, ಸಮಾಜದಲ್ಲಿ ಅಯ್ಯಂಗಾರರ ಕುಟುಂಬದ ಹೆಸರು ಚಿರಸ್ಥಾಯಿಗೊಳಿಸಿದ ದೊಡ್ಡ ಸಮಾಜ ಸೇವೆ.

                            #ಬಾಗ_3                    #ಕನಕಮ್ಮಾಳ್_ಆಸ್ಪತ್ರೆ #ಅಯ್ಯಂಗಾರ್_ಕುಟುಂಬ_ಆನಂದಪುರಂ_ನಲ್ಲಿ_ಸ್ಥಾಪಿಸಿದ_ಆಸ್ಟತ್ರೆ. #ಈ_ಆಸ್ಪತ್ರೆ_ನಿಮಾ೯ಣದ_ಹಿಂದಿದೆ_ಒಂದು_ಮುಖ್ಯ_ಕಾರಣ        ರಾಮಕೃಷ್ಣ ಅಯ್ಯಂಗಾರರ ದಮ೯ ಪತ್ನಿ ಶೀಮತಿ ಕನಕಮ್ಮಾಳ್ ಅನಾರೋಗ್ಯದಿಂದ ಮರಣಿಸುತ್ತಾರೆ ಇದರಿಂದ ರಾಮಕೃಷ್ಣ ಅಯ್ಯಂಗಾರರು ತುಂಬಾ ದುಃಖಿತರಾಗುತ್ತಾರೆ, ಪತ್ನಿ ಕನಕಮ್ಮಾಳ್  ಅವರ ಆಭರಣ ಮಾರಾಟ ಮಾಡುತ್ತಾರೆ.      ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ದೊಡ್ಡ ಆಸ್ತಿ ಜಮೀನು ತೋಟ ಖರೀದಿಸುತ್ತಾರೆ.      ಆದರೆ ಇದು ರಾಮಕೃಷ್ಣ ಅಯ್ಯಂಗಾರರಿಗೆ ಸಮಾದಾನ ತರುವುದಿಲ್ಲ, ಮುದ್ದಿನ ಮಡದಿಯ ಹೆಸರು ಚಿರಸ್ಥಾಯಿ ಆಗುವಂತೆ ಮಾಡಬೇಕೆಂಬ ಅದಮ್ಯ ಆಸೆ ಅವರಲ್ಲಿ ಚಿಗುರೊಡೆದಿರುತ್ತದೆ.    ಹುಣಸಳ್ಳಿಯಲ್ಲಿ ಖರೀದಿಸಿದ್ದ ಆಸ್ತಿಯನ್ನು (ಜಮೀನು, ತೋಟ ಮನೆ) ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರುತ್ತಾರೆ, ಈಗಿನ ಆನಂದ ಪುರದಿಂದ ಬಟ್ಟೆಮಲ್ಲಪ್ಪ ರಸ್ತೆಯಲ್ಲಿ ಎಡ ಭಾಗದ ಹುಣಸಳ್ಳಿ ಶಾಲೆ ಅಕ್ಕ ಪಕ್ಕದ ಈ ಜಮೀನು ನೋಡ ಬಹುದು....