ಭಾಗ - 3 , ರಾಮಕೃಷ್ಣ ಅಯ್ಯಂಗಾರರು ತಮ್ಮ ಧರ್ಮಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮರಣೆಗಾಗಿ ನಿಮಿ೯ಸಿದ ಆನಂದಪುರಂ ಆಸ್ಪತ್ರೆ, ಸಮಾಜದಲ್ಲಿ ಅಯ್ಯಂಗಾರರ ಕುಟುಂಬದ ಹೆಸರು ಚಿರಸ್ಥಾಯಿಗೊಳಿಸಿದ ದೊಡ್ಡ ಸಮಾಜ ಸೇವೆ.
#ಬಾಗ_3
#ಕನಕಮ್ಮಾಳ್_ಆಸ್ಪತ್ರೆ
#ಅಯ್ಯಂಗಾರ್_ಕುಟುಂಬ_ಆನಂದಪುರಂ_ನಲ್ಲಿ_ಸ್ಥಾಪಿಸಿದ_ಆಸ್ಟತ್ರೆ.
ರಾಮಕೃಷ್ಣ ಅಯ್ಯಂಗಾರರ ದಮ೯ ಪತ್ನಿ ಶೀಮತಿ ಕನಕಮ್ಮಾಳ್ ಅನಾರೋಗ್ಯದಿಂದ ಮರಣಿಸುತ್ತಾರೆ ಇದರಿಂದ ರಾಮಕೃಷ್ಣ ಅಯ್ಯಂಗಾರರು ತುಂಬಾ ದುಃಖಿತರಾಗುತ್ತಾರೆ, ಪತ್ನಿ ಕನಕಮ್ಮಾಳ್ ಅವರ ಆಭರಣ ಮಾರಾಟ ಮಾಡುತ್ತಾರೆ.
ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ದೊಡ್ಡ ಆಸ್ತಿ ಜಮೀನು ತೋಟ ಖರೀದಿಸುತ್ತಾರೆ.
ಆದರೆ ಇದು ರಾಮಕೃಷ್ಣ ಅಯ್ಯಂಗಾರರಿಗೆ ಸಮಾದಾನ ತರುವುದಿಲ್ಲ, ಮುದ್ದಿನ ಮಡದಿಯ ಹೆಸರು ಚಿರಸ್ಥಾಯಿ ಆಗುವಂತೆ ಮಾಡಬೇಕೆಂಬ ಅದಮ್ಯ ಆಸೆ ಅವರಲ್ಲಿ ಚಿಗುರೊಡೆದಿರುತ್ತದೆ.
ಹುಣಸಳ್ಳಿಯಲ್ಲಿ ಖರೀದಿಸಿದ್ದ ಆಸ್ತಿಯನ್ನು (ಜಮೀನು, ತೋಟ ಮನೆ) ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರುತ್ತಾರೆ, ಈಗಿನ ಆನಂದ ಪುರದಿಂದ ಬಟ್ಟೆಮಲ್ಲಪ್ಪ ರಸ್ತೆಯಲ್ಲಿ ಎಡ ಭಾಗದ ಹುಣಸಳ್ಳಿ ಶಾಲೆ ಅಕ್ಕ ಪಕ್ಕದ ಈ ಜಮೀನು ನೋಡ ಬಹುದು.
ಇದನ್ನು ಖರೀದಿಸಿದ ಸ್ವಾಮಿ ಗೌಡರ ಮಗ ಚಂದ್ರಶೇಖರ ಗೌಡರು ಆನಂದಪುರದಲ್ಲಿ ಪ್ರೌಡ ಶಾಲಾ ಶಿಕ್ಷಕರಾಗಿ, ನಂತರ ಹೊಸನಗರ ತಾಲ್ಲೂಕ್ ಬೋಡ್೯ ಅಧ್ಯಕ್ಷರಾಗಿ, ಒಂದು ಅವದಿಗೆ ಹೊಸನಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರೂ ಆಗಿ ಕಾರ್ಯನಿವ೯ಹಿಸಿದ ಸಜ್ಜನ ಜನಾನುರಾಗಿ ನಾಯಕರು.
ಆ ಜಮೀನು ಮಾರಿದ ಹಣದಿಂದ ಆನಂದಪುರದ ಮಧ್ಯದ ಅತ್ಯಂತ ಬೆಲೆ ಬಾಳುವ ಸುಮಾರು ನಾಲ್ಕು ಎಕರೆ ವಿಸ್ತಿರ್ಣದ ಸ್ವಂತ ವಿಶಾಲ ಜಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿಮಿ೯ಸುತ್ತಾರೆ.
ಆ ಕಾಲದಲ್ಲಿಯೇ ಉಚಿತ ಔಷದಿ ಖರೀದಿಸಲು ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟು ಅದರ ಬಡ್ಡಿಯಿಂದ ಔಷದಿ ಖರೀದಿಸಲು ಅನುವು ಮಾಡಿ ಈ ಆಸ್ಪತ್ರೆಗೆ ತಮ್ಮ ಪತ್ನಿಯ ಸ್ಮರಣಾಥ೯ #ಶ್ರೀಮತಿ_ಕನಕಮ್ಮಾಳ್_ಆಸ್ಪತ್ರೆ ಎಂದು ನಾಮಕರಣ ಮಾಡಿ ಸಕಾ೯ರಕ್ಕೆ ವಹಿಸಿಕೊಡುತ್ತಾರೆ.
ಈ ಆಸ್ಪತ್ರೆ ಒಂದು ಕಾಲದಲ್ಲಿ ತೀಥ೯ಹಳ್ಳಿ ತಾಲ್ಲೂಕಿನಿಂದ, ಹೊಸನಗರ ತಾಲ್ಲೂಕಿನಿಂದ, ಶಿಕಾರಿಪುರ ತಾಲ್ಲೂಕಿನಿಂದ ಮತ್ತು ಸಾಗರ ತಾಲ್ಲೂಕಿನಿಂದ ಹೆಚ್ಚು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು, ಆ ಕಾಲದಲ್ಲಿ ಈ ಆಸ್ಪತ್ರೆಯಲ್ಲಿ ಆಪರೇಷನ್ ಕೂಡ ಮಾಡುತ್ತಿದ್ದರು.
ಪತ್ನಿಯ ಹೆಸರಲ್ಲಿ ನಿಮಿ೯ಸಿದ್ದ ಆಸ್ಪತ್ರೆ ಯಶಸ್ವಿಯಾಗಿ ನಡೆಯುವುದು ನೋಡಿ ದಾನಿಗಳಾದ ನಿಮಾ೯ತೃ ರಾಮಕೃಷ್ಣ ಅಯ್ಯಂಗಾರರು ಸಂತೃಪ್ತರಾಗುತ್ತಾರೆ, ಈ ಜನಪೋಯೋಗಿ ಕಾಯ೯ದಿಂದ ರಾಮಕೃಷ್ಣ ಅಯ್ಯಂಗಾರರ ಹೆಸರು ಕೂಡ ಸಮಾಜದಲ್ಲಿ ಚಿರಸ್ಥಾಯಿ ಆಗಿ ಉಳಿಯಿತು.
ಈಗಲೂ ಆನಂದಪುರದ ಊರ ಮಧ್ಯದ ಈ ಆಸ್ಪತ್ರೆ ಅಯ್ಯಂಗಾರರ ಕುಟುಂಬದ ಕೊಡುಗೆಯ ಕಥೆ ಹೇಳುತ್ತದೆ.
Comments
Post a Comment