Skip to main content

ಶಾಸಕರು, ಸಂಸದರು, ವಿದಾನಪರಿಷತ್ ಸದಸ್ಯರು ಮತ್ತು ವಿದ್ಯಾ ಮಂತ್ರಿಗಳಾಗಿದ್ದ ಆನಂದಪುರಂ ನ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಒಂದು ನೆನಪು, 19 ಮತ್ತು 20ನೇ ಶತಮಾನದ ಆನಂದಪುರದ ಪ್ರತಿಷ್ಠಿತ ಕುಟುಂಬದ ಕಥೆ 21 ನೇ ಶತಮಾನಕ್ಕೆ ಮರೆತು ಹೋಗಿದೆ.

 ಶಿವಮೊಗ್ಗ ಜಿಲ್ಲೆಯ ಆನಂದಪುರದ ಅಯ್ಯಂಗಾರ್ ಕುಟುಂಬದ ನೆನಪುಗಳು.ಆಸ್ಪತ್ರೆ, ಪಶು ವೈದ್ಯ ಶಾಲೆ, ಶಾಲಾ ಕಾಲೇಜು, ಬ್ಯಾಂಕ್ ನಿಮಾ೯ತರು. ಶಾಸಕ, ಸಂಸದ ಮತ್ತು ವಿದ್ಯಾ ಮಂತ್ರಿ ಆದ ಇವರ ಕುಟುಂಬದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.



 1952ರ ಪ್ರಥಮ ಚುನಾವಣಾ ರಾಜಕೀಯದಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸ್ಪದಿ೯ಸಿದ್ದ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾಗಿದ್ದ ರಾಮ ಕೃಷ್ಣ ಅಯ್ಯಂಗಾರ ಪುತ್ರ, ವಕೀಲರು, ಸ್ಟಾತಂಂತ್ರ ಹೋರಾಟಗಾರರಾಗಿದ್ದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಸಮಾಜವಾದಿ ಪಾರ್ಟಿ ಅಭ್ಯಥಿ೯ ಕಾಗೋಡು ಚಳವಳಿಯ ನಾಯಕ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ.
  ಸ್ವಾತಂತ್ರ ನಂತರದ ಮೊದಲ ಚುನಾವಣೆ ಸೋಲಿನ ಪಲಿತಾಂಶದಿಂದ ನೊಂದ ರಾಮಕೃಷ್ಣ ಅಯ್ಯಂಗಾರ್ ಹೃದಯಾಘಾತದಿಂದ ಮೃತರಾಗಿದ್ದು ಆ ಕುಟುಂಬಕ್ಕೆ ದೊಡ್ಡ ಆಘಾತ ಆಯಿತು.
    ಆನಂದಪುರದಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆ, ಶಾಲಾ ಕಾಲೇಜು, ಬ್ಯಾಂಕ್ ಹೀಗೆ ಸಾಲು ಸಾಲು ಜನರ ಅಭ್ಯುದಯಕ್ಕಾಗಿ ಶ್ರಮಿಸಿದ ಸಾವಿರಾರು ಎಕರೆ ಜಮೀನ್ದಾರರಾಗಿದ್ದ ಅಯ್ಯಂಗಾರ್ ಕುಟುಂಬದವರು ಈಗ ಯಾರು ಆನಂದಪುರದಲ್ಲಿ ಇಲ್ಲ. ರೈಸ್ ಮಿಲ್, ತೋಟ, ಜಮೀನು ಮತ್ತು ಆನಂದಪುರದ ಇಕ್ಕೆಲದ ಮನೆ ನಿವೇಶನ ಎಲ್ಲಾ ಮಾರಿ ಈಗಿನ ತಲೆಮಾರಿನವರು ಬೆಂಗಳೂರು ಮತ್ತು ವಿದೇಶಗಳಲ್ಲಿ ಶ್ರೀಮಂತ ಜೀವನ ಮಾಡುತ್ತಿದ್ದಾರೆ.
  ಆನಂದಪುರದ ಇತಿಹಾಸ ಪ್ರಖ್ಯಾತ ರಂಗನಾಥ ಸ್ವಾಮಿ ದೇವಾಲಯದ ಹಿಂಭಾಗದ ಮೂಲ ಮನೆ ಉಳಿಸಿಕೊಂಡಿದ್ದಾರೆ, ಪ್ರತಿ ವಷ೯ ರಥ ಸಪ್ತಮಿಗೆ ನಡೆಯುವ ರಂಗನಾಥ ಸ್ವಾಮಿ ದೇವರ ರಥೋತ್ಸವದ ದಿನ ಬಾಗವಹಿಸಿ ವಾಪಾಸಾಗುತ್ತಾರೆ.
   ಈಗಿನ ತಲೆಮಾರಿನ ಆನಂದಪುರಂ ವಾಸಿಗಳಿಗೆ ಈ ಕುಟುಂಬದ ಮಾಹಿತಿ ಇಲ್ಲ, ಗೊತ್ತಿರುವವರು ಈಗಿಲ್ಲ.
  ಆನಂದಪುರ೦ನ ವೇದನಾರಾಯಣ ಭಟ್ಟರ ಮಕ್ಕಳಾದ ರಂಗನಾಥ ಭಟ್ಟರು ಅವರ ಸಹೋದರ ಕೆ.ವಿ.ಸುರೇಶ್ ಮತ್ತು ಆನಂದಪುರಂನ ಜನಾನುರಾಗಿ ಗುರುಗಳಾದ ಬೋಜ್ ರಾಜ್ ಅಯ್ಯಂಗಾರರಿಗಷ್ಟೆ ಮಾಹಿತಿ ಇದೆ.
   ಬೋಜರಾಜ್ ಅಯ್ಯಂಗಾರರ ಅಜ್ಜ 
 ಕಂಟ್ರಾಕ್ಟರಾಗಿದ್ದ ಶ್ರೀನಿವಾಸ ಅಯ್ಯಂಗಾರರು ರಾಮಕೃಷ್ಣ ಅಯ್ಯಂಗಾರರ ಅಣ್ಣರನ್ನು ಹಾಸನ ಜಿಲ್ಲೆಯ ಗೊರೂರಿನಿಂದ ಆನಂದಪುರಕ್ಕೆ ಕರೆ ತರುತ್ತಾರೆ ಆಗ ಬ್ರಿಟೀಶ್ ಆಡಳಿತ, ಆನಂದಪುರಂ ತಾಲ್ಲೂಕ್ ಕೇಂದ್ರವಾಗಿರುತ್ತದೆ ಅಲ್ಲಿ ತಾಲ್ಲೂಕ್ ಕಛೇರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ನಂತರ ತಮ್ಮ ಸಹೋದರ ಲಕ್ಷ್ಮೀಪತಿ ಅಯ್ಯಂಗಾರರನ್ನು ಇಲ್ಲಿಗೆ ಕರೆ ತರುತ್ತಾರೆ.
   ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.
   ರಾಮಕೃಷ್ಣ ಅಯ್ಯಂಗಾರ್ ಪತ್ನಿ ಕನಕಮ್ಮಾಳ್ ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.
  ರಾಮಕೃಷ್ಣ ಅಯ್ಯಂಗಾರ್ ಮೊದಲ ಪುತ್ರ ಅಕಾಲಿಕವಾಗಿ ಮೃತರಾದ್ದರಿಂದ ಅವರ ಸ್ಮರಣಾಥ೯ವಾಗಿ ಆನಂದಪುರದಲ್ಲಿ ಪಶು ಆಸ್ಪತ್ರೆಯನ್ನು ಸ್ವಂತ ಜಾಗದಲ್ಲಿ ನಿರ್ಮಿಸಿ ಅದಕ್ಕೆ ಜಗನ್ನಾಥ ಪಶು ವೈದ್ಯ ಶಾಲೆ ಎಂದು ನಾಮಕರಣ ಮಾಡುತ್ತಾರೆ.
  ಪತ್ನಿ ಕನಕಮ್ಮಾಳ್ ಮೃತರಾದಾಗ ಅವರ ಆಭರಣ ಮಾರಾಟ ಮಾಡಿ ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ಜಮೀನು ತೋಟ ಖರೀದಿಸುತ್ತಾರೆ.
  ಆದರೆ ಪತ್ನಿ ಕನಕಮ್ಮಾಳ್ ಹೆಸರು ಚಿರಸ್ಥಾಯಿ ಮಾಡಬೇಕೆಂದು ಹುಣಸಳ್ಳಿಯ ಜಮೀನು ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರಿ ಆ ಹಣದಿಂದ ಸ್ವಂತ ವಿಶಾಲ ಜಾಗದಲ್ಲಿ ಶ್ರೀಮತಿ ಕನಕಮ್ಮಾಳ್ ಆಸ್ಪತ್ರೆ ನಿಮಿ೯ಸಿ, ಆ ಕಾಲದಲ್ಲಿ ಉಚಿತ ಔಷದಿ ಖರೀದಿಸಲು ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟು ಅದರ ಬಡ್ಡಿಯಿಂದ ಔಷದಿ ಖರೀದಿಸಲು ಅನುವು ಮಾಡಿ ಸಕಾ೯ರಕ್ಕೆ ವಹಿಸಿಕೊಡುತ್ತಾರೆ.
  ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಮಕ್ಕಳು. ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ್ರೋತ್ಸವಕ್ಕೆ ಬಂದು ತಮ್ಮ ಭಕ್ತಿ ಸಮಪಿ೯ಸುತ್ತಾರೆ ಮತ್ತು ಇದಕ್ಕಾಗಿ ಕೆಲ ಲಕ್ಷ ರೂಪಾಯಿ ವ್ಯಯಿಸುತ್ತಾರೆ.
  ಬದರಿನಾರಾಯಣ್ (ಜನನ ದಿನಾಂಖ 21 ನವೆಂಬರ್ 1906) ಮತ್ತು ಶ್ರೀಮತಿ ರತ್ನಮ್ಮ ದಂಪತಿಗೆ ಖ್ಯಾತ ವೈದ್ಯ ಡಾ.ಸೀತಾರಾಮ್ ಎಂಬ ಏಕೈಕ ಪುತ್ರ ಮತ್ತು ಏಕೈಕ ಪುತ್ರಿ ಇದ್ದಾರೆ.
  ನಾಲ್ಕನೆ ಪುತ್ರ ಅನಂತರಾಮರಿಗೆ ಕೂಡ ಒಂದು ಗಂಡು ಮತ್ತು ಒ0ದು ಹೆಣ್ಣು ಸಂತಾನ.
  ಬದರಿನಾರಾಯಣ ಅಯ್ಯಂಗಾರರು ತಮ್ಮ ಪ್ರಾಥಮಿಕ ಶಿಕ್ಷಣ ಪಡೆದ ಶಾಲೆ ಆನಂದಪುರದ ಮಸೀದಿ ಎದರು ಇರುವ ಸರ್ಕಾರಿ ಪ್ರಾಥಮಿಕ ಶಾಲೆ 1999 ಕ್ಕೆ ಶಿಕ್ಷಣ ಮಂತ್ರಿ ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಓದಿದ ಶಾಲೆಗೆ ಶತಮಾನೋತ್ಸವ ಆಗಿದ್ದರೂ ಆಚರಿಸಲಿಲ್ಲ.
   ರಾಮಕೃಷ್ಣ ಅಯ್ಯಂಗಾರರು ಹಾಸನದ ಗೊರೂರಿನಿಂದ ಶ್ರೀನಿವಾಸ ಅಯ್ಯಂಗಾರ್ ಮತ್ತು ಶ್ರೀರಂಗಂ ದಂಪತಿಗಳನ್ನು ಆನಂದಪುರಂ ಗೆ ಕರೆ ತರುತ್ತಾರೆ ಅವರ ಮಗ ತಿರುಮಲಾಚಾರ್ಯ ಅಯ್ಂಗಾರ್ ಕಂಟ್ರಾಕ್ಟರಾಗಿ ಪ್ರಖ್ಯಾತರಾಗುತ್ತಾರೆ ಒ0ದು ಅವಧಿಗೆ ಗಾ.ಪಂ ಅಧ್ಯಕ್ಷರಾಗುತ್ತಾರೆ ನಮ್ಮ ತಂದೆ ಇವರ ಜೊತೆ ಗ್ರಾ.ಪಂ.ಸದಸ್ಯರಾಗಿರುತ್ತಾರೆ.
 ಆನಂದಪುರ೦ ನ ರಂಗನಾಥಸ್ವಾಮಿ ದೇವಾಲಯಕ್ಕೆ ಸಾವಿರ ವರ್ಷದ ಇತಿಹಾಸ ಇದೆ, ಈ ದೇವಾಲಯದ ದ್ವಜ ಸ್ಥಂಬದಲ್ಲಿ ಹೊಸಗುಂದ ಅರಸರ ದಾನ ದತ್ತಿ ಉಲ್ಲೇಖ ಇದೆ, ಈ ದೇವಾಲಯ ಮೂಲ ಶ್ರೀರಾಮ ದೇವರ ದೇವಸ್ಥಾನ, ಟಿಪ್ಪು ಸುಲ್ತಾನ್ ಆನಂದಪುರಂ ಮಾಗ೯ವಾಗಿ ಬಿದನೂರು ಹೋಗುವ ಸುದ್ದಿ ಬಂದಾಗ ಅಗ್ರಹಾರದ ಪುರೋಹಿತ ವಗ೯ ಚಿ೦ತಿಸುತ್ತದೆ ಮತ್ತು ಪರಿಹಾರ ಮಾರ್ಗವೂ ಕಂಡು ಹಿಡಿದು ಕಾಯ೯ ಪ್ರವೃತ್ತರಾಗುತ್ತಾರೆ, ಅದೇನೆಂದರೆ ಶ್ರೀ ರಾಮನಿಗೆ ಶ್ರೀ ರಂಗನಾಥ ಎಂದು ಮರುನಾಮಕರಣ ಶಾಸ್ತ್ರೋಕ್ತವಾಗಿ ಮಾಡುತ್ತಾರೆ.
   ಬೆಳಿಗ್ಗೆ ಆನಂದಪುರ೦ಗೆ ಬರುವ ಟಿಪ್ಪು ಸುಲ್ತಾನರಿಗೆ ಮಸೀದಿ ಎದರು ಮುಸ್ಲಿಂ ಬಾಂದವರು ಮಸೀದಿಗೆ ಸ್ವಾಗತಿಸುತ್ತಾರೆ ಅಲ್ಲೇ ಟಿಪ್ಪು ಸುಲ್ತಾನರಿಗೆ ಆನಂದಪುರದ ಅಗ್ರಹಾರದ ಪುರೋಹಿತರು ನಮ್ಮ ದೇವಾಲಯಕ್ಕೂ ಬನ್ನಿ ಎಂದು ಆಹ್ವಾನ ನೀಡುತ್ತಾರೆ, ನಿಮ್ಮ ದೇವಾಲಯ ಯಾವುದು ಎಂದು ಟಿಪ್ಪು ಸುಲ್ತಾನರು ಕೇಳಿದಾಗ ಶ್ರೀರಂಗನಾಥ ಎಂದಾಗ ಟಿಪ್ಪು ಸಂತೋಷದಿಂದ ರಂಗನಾಥ ದೇವರ ದರ್ಶನ ಮಾಡಿ ದೇವರಿಗೆ ಪುರೋಹಿತರಿಗೆ ಬಂಗಾರ ಬೆಳ್ಳಿಯ ಕಾಣಿಕೆ ಸಮರ್ಪಿಸುತ್ತಾರೆ, ಟಿಪ್ಪು ಬೇರೆ ದೇವಾಲಯ ಆದರೆ ಬರುವುದಿಲ್ಲ ಎಂಬ ಒಂದು ಕಾರಣ ಇನ್ನೊಂದು ದೇವಾಲಯ ಅಗ್ರಹಾರ ಸುರಕ್ಷಿತ ಗೊಳಿಸುವ ದೂರಾಲೋಚನೆಯಿಂದ ಶ್ರೀರಾಮ ಆನಂದಪುರದಲ್ಲಿ ರಂಗನಾಥ ನಾಗುತ್ತಾನೆ, ಈ ದೇವಾಲಯ ಅಯ್ಯಂಗಾರರ ಕುಟುಂಬದಿಂದ ಅನೇಕ ಬಾರಿ ನವೀಕರಣ ಆಗಿದೆ. ಈ ದೇವಾಲಯಕ್ಕೆ ಅರ್ಚಕರಾಗಿ ಗೊರೂರಿನಿಂದ ವಾಲ್ಮೀಕಿ ರಂಗಯ್ಯಂಗಾರ್ ರನ್ನು ಕರೆತರುತ್ತಾರೆ ನಂತರ ಅವರ ತಮ್ಮ ವಾಲ್ಮೀಕಿ ಆನಂದ ಆಳ್ವಾರರು ಅನೇಕ ದಶಕ ಈ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ, ಊರಲ್ಲಿ ಇವರ ಕುಟುಂಬದವರು ಈಗ ಯಾರು ಇಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ನಂತರ ಅವರು ತಮ್ಮ ಹೆಚ್ಚಿನ ವ್ಯಾಸಂಗ ವಕೀಲಿಕೆ ವಿದ್ಯಾಬ್ಯಾಸ ತುಮಕೂರಿನಲ್ಲಿ ಮಾಡುತ್ತಾರೆ, ನಂತರ ಶಿವಮೊಗ್ಗ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರಂಬಿಸಿ ಹೆಸರು ಮಾಡುತ್ತಾರೆ, ಒಂದು ಕೇಸಿನಲ್ಲಿ ಅಪರಾದ ಮಾಡಿದವನ ಪರವಾಗಿ ಕೇಸು ಗೆಲ್ಲುತ್ತಾರೆ, ವಾಸ್ತವವಾಗಿ ನಿರಪರಾದಿಗೆ ಜೈಲು ಆಗುತ್ತದೆ. ನಿರಪರಾದಿ ಕೋಟ್೯ನಲ್ಲೇ ನಾನು ನಿರಪರಾದಿ ಆದರೂ ಜೈಲು ಕಾಣಬೇಕಾಯಿತು ಎಂದು ನೊಂದು ನುಡಿದದ್ದು ಬದರಿನಾರಾರಾಯಣ್ ಆಯ್ಯ೦ಗಾರರಿಗೆ ದೊಡ್ಡ ಮನಪರಿವರ್ತನೆಗೆ ಕಾರಣವಾಗಿ ವಕೀಲಿ ವೃತ್ತಿ ತೊರೆಯಲು ಕಾರಣ ಆಗುತ್ತದೆ.
  ಮೈಸೂರು ಅರಸರ ಪರಿವಾರದ ಅತ್ಯಾಪ್ತ ಬಳಗಕ್ಕೆ ಸೇರುವ ಈ ಕುಟುಂಬದ ಪಶು ಸಂಗೋಪನೆ ಮಾಡುತ್ತಿದ್ದ ಲಕ್ಷ್ಮೀಪತಿ ಅಯ್ಯಂಗಾರರಿಗೆ ಆನಂದಪುರದ ಕೆಳದಿ ಅರಸರ ಕೋಟೆಯಲ್ಲಿ ನಿಧಿ ದೊರೆಯಿತು ಅದರಿಂದ ಅವರು ಸುತ್ತಮುತ್ತಲಿನ ಕೃಷಿ ಕುಟುಂಬಕ್ಕೆ ಲೇವಾದೇವಿ ವ್ಯವಹಾರ ಮಾಡಿ ಶ್ರೀಮಂತರಾದರೆಂಬ ಕಥೆ ಕೂಡ ಇದೆ.
  ಸಾವಿರಾರು ಎಕರೆ ಇನಾಂದಾರರಾದ ರಾಮಕೃಷ್ಣ ಅಯ್ಯಂಗಾರರಿಗೆ ಮೈಸೂರು ಅರಸರು ಎರೆಡು ಸಾವಿರ ಎಕರೆ ಅರಣ್ಯ ನೀಡುತ್ತಾರೆ, ಈ ಅರಣ್ಯದಿಂದ ಪ್ರತಿವಷ೯ ಎರೆಡು ಟನ್ ಶ್ರೀ ಗಂಧ ಶೃಂಗೇರಿ ಮಠಕ್ಕೆ ಸಂಗ್ರಹಿಸಿ ನೀಡುವ ಕರಾರಿನಿಂದ.
    ಇಂತಹ ಕುಟುಂಬದಿಂದ ಬಂದ ಸಜ್ಜನ ವಿದ್ಯಾವ೦ತ ಬದರಿನಾರಾಯಣ ಅಯ್ಯಂಗಾರರು ಕ್ವಿಟ್ ಇಂಡಿಯಾ ಸ್ವಾತಂತ್ರ ಸಂಗ್ರಾಮದಲ್ಲಿ ಆನಂದಪುರದ ಚಿಪ್ಗೀರು ರಾಮಣ್ಣ ಮತ್ತು ಸಂಗಡಿಗರೊಂದಿಗೆ ಜೈಲು ವಾಸ ಅನುಭವಿಸುತ್ತಾರೆ.
  ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗುತ್ತಾರೆ ಆಗ ಸಾಗರ ತಾಲ್ಲೂಕಿನ ಮೂಗಿ ಮನೆ ಹೆಗ್ಗಡೆ ಮತ್ತು ತುಂಬೆ ಸುಬ್ರಾಯರು ಇವರಿಗೆ ಎಡ ಬಲದಂತೆ ಇರುತ್ತಾರೆ.
  1957 ರಲ್ಲಿ ಎರಡನೆ ಮಹಾ ಚುನಾವಣೆಗೆ ಕಾಂಗ್ರೇಸ್ ಪಕ್ಷದಿಂದ ಎರಡನೇ ಬಾರಿ ಎ.ಆರ್. ಬದರಿನಾರಾಯಣ್ ಸ್ಪದಿ೯ಸುತ್ತಾರೆ ಎದುರಾಳಿ ಒಂದು ಅವಧಿ ಶಾಸಕರಾಗಿ ಅವದಿ ಪೂರೈಸಿದ ಸಮಾಜವಾದಿ ಪಾಟಿ೯ ಶಾಂತವೇರಿ ಗೋಪಾಲಗೌಡರು, ಶಾಂತವೇರಿ ಗೋಪಾಲಗೌಡರು ನಾಡಿನಾದ್ಯಂತ ಜನಪ್ರಿಯರಾಗಿದ್ದರು ಆದರೆ ಪಲಿತಾಂಶ ಕಾಂಗ್ರೇಸ್ ಪಕ್ಷದ ಬದರಿನಾರಾಯಣ್ ಅಯ್ಯ೦ಗಾರ್ ಬಾರೀ ಬಹುಮತದಿಂದ ವಿದಾನಸಭೆಗೆ ಆಯ್ಕೆ ಆಗುತ್ತಾರೆ.
  ಮುಂದಿನ ಅವರ ರಾಜಕೀಯ ಜೀವನ ಪುನಃ ಎರೆಡು ಬಾರಿ ಶಾಸಕರು, ಒಂದು ಬಾರಿ ಪರಿಷತ್ ಸದಸ್ಯರು, ಒಂದು ಬಾರಿ ಸಂಸದರು ಮತ್ತು ವಿದ್ಯಾ ಮಂತ್ರಿಗಳೂ ಆಗುತ್ತಾರೆ.
  ಶಿವಮೊಗ್ಗ ಡಿಸ್ಟ್ರಿಕ್ಟ್ ಬೋಡ್೯ ಎಕ್ಸಿಕ್ಕೂಟೀವ್ ಕಮಿಟಿ ಅಧ್ಯಕ್ಷರು, ಆಲ್ ಇಂಡಿಯಾ  ಮಲ್ನಾಡು ಕಾನ್ಪರೆನ್ಸ್ ಚೇರ್ ಮನ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿರ್ಧೇಶಕರು, ಶಿವಮೊಗ್ಗದ ಡಿ.ವಿ.ಎಸ್. ಸಂಸ್ಥೆ, ಅಧ್ಯಕ್ಷರು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸಂಸ್ಕೃ ತ್ ಸ್ಟಡಿ ಪ್ರೆಸಿಡೆಂಟ್, ಅನೇಕ ದೇಶಗಳ ಸಂಚಾರ, ಕನಾ೯ಟಕ ಪ್ರದೇಶ ಕಾಂಗ್ರೇಸ್ ಖಜಾಂಚಿ ಆಗುತ್ತಾರೆ.
  ಮುಖ್ಯಮಂತ್ರಿ ನಿಜಲಿಂಗಪ್ಪನವರು ಇವರನ್ನು ಮಂತ್ರಿ ಮಾಡಲು ಬಿಡುವುದಿಲ್ಲ ಆಗ ಬದರಿನಾರಾಯಣ್ ಆಯ್ಯಂಗಾರ್ ರರು ದೇವರಾಜ ಅರಸ್ಸು, ಕೊಲ್ಲೂರು ಮಲ್ಲಪ್ಪ, ಸಿದ್ಧ ವೀರಪ್ಪ, ಆರ್.ಎಂ. ಪಾಟೀಲರ ಜೊತೆ ಬಿನ್ನ ಮತೀಯರಾಗಿ ಗುರುತಿಸಿಕೊಳ್ಳುತ್ತಾರೆ.
  ಆನಂದಪುರದ ಅಯ್ಯಂಗಾರರ ಹೊಸಕೊಪ್ಪದ ತೋಟದ ಮನೆಯಲ್ಲಿ ಇವರ ಅನೇಕ ಗುಪ್ತ ಸಭೆ ನಡೆಯುತ್ತದೆ, ಈಗ ಈ ತೋಟ ಬೆಂಗಳೂರಿನ ಪ್ರಖ್ಯಾತ ನಮಸ್ತೆ ಗಾಮೆ೯೦ಟ್ ಖರೀದಿಸಿದೆ.
  ವೀರೇಂಂದ್ರ ಪಾಟೀಲರ ನಂತರ ದೇವರಾಜ ಅರಸರು ಮುಖ್ಯಮಂತ್ರಿ ಆದಾಗ ಬದರಿನಾರಾಯಣ್ ಅಯ್ಯಂಗಾರರು ವಿದ್ಯಾ ಮಂತ್ರಿಗಳಾಗಿ ನಾಡಿನಲ್ಲಿ ಪ್ರಖ್ಯಾತರಾಗುತ್ತಾರೆ ಆಗ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಸಕಾ೯ರದಿಂದ ದೇಶ ನಾಯಕರಾದ ಭಗತ್ ಸಿಂಗ್, ರಾಜೇಂದ್ರ ಪ್ರಸಾದ್ ಹೀಗೆ ಅನೇಕ ಸ್ಟಾತಂತ್ರ್ಯ ಹೋರಾಟಗಾರರ ಕಿರು ಪರಿಚಯ ಪುಸ್ತಕ ಮುದ್ರಣಕ್ಕೆ ರಾಷ್ಟ್ರೋತ್ಥಾನ ಪರಿಷತ್ ಗೆ ಸಕಾ೯ರದಿಂದ ಸಹಾಯ ಧನ ಸದುದ್ದೇಶದಿಂದ ನೀಡುತ್ತಾರೆ ಆದರೆ ಇದನ್ನು ಇವರ ವಿರೋದಿಗಳು ಪ್ರದಾನಿ ಇಂದಿರಾಗಾಂಧಿಗೆ ಆರ್.ಎಸ್.ಎಸ್ ಗೆ ಬದರಿನಾರಾಯಣರು ಬೆಂಬಲಿಸಿ ಸಹಾಯ ಮಾಡುತ್ತಿರುವುದಾಗಿ ತಿರುಚಿ ಹೇಳಿದ್ದರಿಂದ ಕೆಂಡ ಮಂಡಲರಾದ ಇಂದಿರಾಗಾಂಧಿ ಇವರ ವಿದ್ಯಾ ಮಂತ್ರಿ ಸ್ಥಾನ ಕಳೆಯುತ್ತಾರೆ ಇದರ ಹಿನ್ನೆಲೆಯಲ್ಲಿ ಶಿರನಾಳಿ ಚಂದ್ರಶೇಖರ್ ಕೈವಾಡ ಇತ್ತು ಅನ್ನುತ್ತಾರೆ.
  ದೇವರಾಜ ಅರಸು ಮತ್ತು ಇಂದಿರಾಗಾಂಧಿ ಬಿನ್ನಮತ ಸ್ಪೋಟಗೊಂಡಾಗ ಇಂದಿರಾ ಗಾಂಧಿ ಬ್ರಾಹ್ಮಣರೋವ೯ರನ್ನು ಮುಖ್ಯಮಂತ್ರಿ ಮಾಡುವ ತೀಮಾ೯ನಕ್ಕೆ ಬಂದು ಬದರಿನಾರಾಯಣರನ್ನು
ಆಯ್ಕೆ ಮಾಡಲಿಕ್ಕಾಗಿ ದೆಹಲಿಗೆ ಆಮಂತ್ರಣ ನೀಡುತ್ತಾರೆ ಆದರೆ ಅರಸು ಮತ್ತು ಅಯ್ಯಂಗಾರರ ಸ್ನೇಹ ಮುಖ್ಯಮಂತ್ರಿ ಸ್ಥಾನ ನಿರಾಕರಿಸಲು ಕಾರಣ ಅಗುತ್ತದೆ, ದಮಿ೯ಷ್ಟರು ಮತ್ತು ದುರಾಸೆ ಇಲ್ಲದವರಾದ್ಧರಿಂದ ಶಿವಮೊಗ್ಗ ಜಿಲ್ಲೆಗೆ ಸಿಗಬಹುದಾಗಿದ್ದ ಮುಖ್ಯಮಂತ್ರಿ ಸ್ಥಾನ ನಿರಾಕರಿಸುತ್ತಾರೆ.
    ಶಿವಮೊಗ್ಗದ ರಾಮರಾವ್ ಗೆ ಆನಂದಪುರದ ರೈಸ್ ಮಿಲ್, ಬಾಡಿಗೆ ಮನೆಗಳ ಉಸ್ತುವಾರಿಗೆ ಜಿ.ಪಿ.ಎ. ನೀಡುತ್ತಾರೆ.
     ಶಿವಮೊಗ್ಗದ ಆ ಕಾಲದ ರಾಜಕೀಯ ದಿಗ್ಗಜರಾದ ತಿಮ್ಮಯ್ಯ (ಶೇಷಾದ್ರಿ ತಂದೆ), ಕೆಂಚಪ್ಪ (ಮರಿಯಪ್ಪರ ತಂದೆ), ಶೀನಪ್ಪ ಶೆಟ್ಟರು, ನಾಗಪ್ಪ ಶೆಟ್ಟರು ಸದಾ ಬದರಿಯವರ ಆಪ್ತ ವಲಯದಲ್ಲಿರುತ್ತಾರೆ.
  ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾಥಿ೯ನಿಲಯ ಸ್ಥಾಪನೆಗೆ ಮುಂದಾಗುತ್ತಾರೆ.
  ಮುಂಗೋಪದ ಬದರಿನಾರಾಯಣರು ಮಹಾತ್ಮಾ ಗಾಂಧಿ ಅನುಯಾಯಿಗಳು, ಯಾರಿಂದಲೂ ಭ್ರಷ್ಟಾಚಾರ ನಡೆಯಬಾರದೆಂಬ ಎಚ್ಚರಿಕೆಯ ನಡೆ ನಡೆಯುತ್ತಾರೆ, ಕಾನೂನು ಬಾಹಿರ ಯಾವುದೇ ಕೆಲಸ ಸಹಿಸುತ್ತಿರಲಿಲ್ಲ ಮತ್ತು ಸ್ವತಃ ಇವರಿಗೆ ಯಾವುದೇ ದುರಾಬ್ಯಾಸ ಇರಲಿಲ್ಲ.
  ವಿನೋಬಾ ಭಾವೆ ಭೂದಾನ ಚಳವಳಿಗೆ ಆನಂದಪುರಕ್ಕೆ ಬಂದಾಗ ಇವರ ಗೆಳೆಯ ಎಣ್ಣೆ ಕೊಪ್ಪದ ಮಲ್ಲಿಕಾರ್ಜುನ ಗೌಡರ ಸಲಹೆಯಂತೆ ಅಯ್ಯಂಗಾರರು ಭೂದಾನ ಮಾಡುತ್ತಾರೆ, ಒ0ಟಿ ಎತ್ತಿನ ಗಾಡಿಯಲ್ಲಿ ಎಣ್ಣೆ ಕೊಪ್ಪದ ಮಲ್ಲಿಕಾಜು೯ನ ಗೌಡರು ಅಯ್ಯಂಗಾರರ ಬೇಟಿಗೆ ಬರುತ್ತಿದ್ದರಂತೆ, ಇದೇ ಸಂದರ್ಭದಲ್ಲಿ ಇರುವಕ್ಕಿ ಕುಂಬಾರ ಬಸಣ್ಣರ ತಂದೆ ಚೌಡ ಶೆಟ್ಟರು ಭೂದಾನ ಮಾಡುತ್ತಾರೆ.
  ಬಂಗಾರಪ್ಪನವರನ್ನು ಕಾಂಗ್ರೇಸ್ ಪಕ್ಷಕ್ಕೆ ತರುವುದರಲ್ಲಿ ಬದರಿನಾರಾಯಣ್ ಅಯ್ಯಂಗಾರರು ಪ್ರಮುಖ ಪಾತ್ರ ವಹಿಸುತ್ತಾರೆ, ಎಸ್.ಎಂ.ಕೃಷ್ಣರು ಬದರಿಯವರಿಗೆ ಅತ್ಯಾಪ್ತರು.
  ಜಾಪರ್ ಷರೀಪರು ರೈಲ್ವೆ ಮಂತ್ರಿ ಆಗಿದ್ದಾಗ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಶಂಕುಸ್ಥಾಪನೆಗೆ ಹೆಲಿಕಾಪ್ಟರ್ ನಲ್ಲಿ ಬದರಿನಾರಾಯಣ್ ಆಯ್ಕಂಗಾರರನ್ನು ಶಿವಮೊಗ್ಗಕ್ಕೆ ಕರೆತಂದದ್ದೇ ಅವರ ಶಿವಮೊಗ್ಗದ ಕೊನೆಯ ಭೇಟಿ.
   ಒಮ್ಮೆ ಜೋಗದಲ್ಲಿ ಆಂಧ್ರ ಮುಖ್ಯಮಂತ್ರಿ ವೆಂಗಲ್ ರಾವ್ ಬೇಟಿಗೆ ಬಂದಾಗ ಜೋಗದಲ್ಲಿ ಸಿಡಿ ಮದ್ದು ಪ್ರದರ್ಶನ ದೇವರಾಜ ಅರಸರು ವ್ಯವಸ್ಥೆ ಮಾಡುತ್ತಾರೆ ಸ್ವತಃ ಕುಟುಂಬದೊಂದಿಗೆ ಬಾಗವಹಿಸಿ ವಾಪಾಸು ಹೋಗುವಾಗ ಬದರಿನಾರಾಯಣ ಅಯ್ಯಂಗಾರ್ ಮನೆಯಲ್ಲಿ ಬೋಜನ ವ್ಯವಸ್ಥೆ ಮಾಡುತ್ತಾರೆ, ಅರಸು ಪತ್ನಿ ಲಕ್ಷಮ್ಮಣ್ಣಿ, ಮಗಳು ನಾಗರತ್ನ ಅಳಿಯ ನಟರಾಜ್ ಇರುತ್ತಾರೆ ಅಯ್ಯಂಗಾರರ ಮನೆಯಲ್ಲಿ ಅವತ್ತಿನ ಬೋಜನ ಬಡಿಸಿದವರು ರಂಗನಾಥ ಭಟ್ಟರು ಮತ್ತು ಅವರ ಸಹೋದರ ಕೆ.ವಿ.ಸುರೇಶ್ .
  ಅವತ್ತೇ ಆನಂದಪುರದ ಸುಭಾಷ್ ಯುವಕ ಸಂಘದ (ಈಗಿನ ಕನ್ನಡ ಸಂಘ) ಸಾರ್ವಜನಿಕ ಗಣಪತಿ ಪೆಂಡಾಲ್ ಗೆ ಮುಖ್ಯಮಂತ್ರಿ ಬಂದಿದ್ದು ಮತ್ತು ಯುವಕ ಸಂಘದ ಕಟ್ಟಡ ನಿರ್ಮಾಣಕ್ಕೆ 25 ಸಾವಿರ ಮಂಜೂರು ಮಾಡಿದ್ದು ಆ ಕಾಲದಲ್ಲಿ ಆನಂದಪುರದಲ್ಲಿ ದೊಡ್ಡ ಸುದ್ದಿ
      1982 - 83ರಲ್ಲಿ ಇವರ ರೈಸ್ ಮಿಲ್ ಮತ್ತು ತೋಟಗಳನ್ನು ಖರೀದಿಸಿದ್ದ ಸುಬ್ಬಣ್ಣ ನಾಯ್ಕರ ನಾಲ್ಕು ಕಾಮಿ೯ಕರ ಕೊಲೆಯಿಂದ ಪ್ರಾರಂಭ ಆಗಿದ್ದ ರೈತ ಬಂದು ರೈಸ್ ಮಿಲ್ ಹೋರಾಟ ಬಗೆಹರಿಸಲು ಬದರಿನಾರಾಣ್ ಆಯ್ಯಂಗಾರ್ ಮತ್ತು ವೆಂಕಟಚಲಾಯ್ಯಂಗಾರ್ ನಮ್ಮನ್ನೆಲ್ಲ ಅವರ ಮನೆಗೆ ಕರೆದಿದ್ದಾಗ ಅವರನ್ನು ಪ್ರತೃಕ್ಷ ಬೇಟಿ ಆದದ್ದು ನನ್ನ ಮೊದಲ ಮತ್ತು ಕೊನೆಯ ಅವರ ಬೇಟಿ.
  ಇವರ ಅಣ್ಣ ವೆಂಕಟಾಚಲ ಅಯ್ಯಂಗಾರರು ಆನಂದಪುರದ ವಿಲೇಜ್ ಪಂಚಾಯತ್ ಗೆ ಸತತ 35 ವಷ೯ ಅಧ್ಯಕ್ಷರಾಗಿರುತ್ತಾರೆ ಅವರನ್ನು ಸೋಲಿಸಿ ಭಾಲಗಂಗಾಧರಪ್ಪ ಗೌಡರು ಅಧ್ಯಕ್ಷರಾದದ್ದು ಒ0ದು ಇತಿಹಾಸ ವೆಂಕಟಾಚಲ ಅಯ್ಯಂಗಾರರು ಕೊನೆಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಆಗ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ಒಂದು ವಿಲೇಜ್ ಪಂಚಾಯತ್ (ಈಗ ಇವೆಲ್ಲ ಪ್ರತ್ಯೇಕ ಗ್ರಾಮ ಪಂಚಾಯತ್)
ಆಗ ಇವರ ಜೊತೆ ಆಯ್ಕೆ ಆದವರು ಭಾಲಗಂಗಾದರ್ ಗೌಡರು, ಮಲಂದೂರು ಚೆನ್ನಪ್ಪ ಗೌಡರು, ಗಂಗಪ್ಪ, ದಾಸಕೊಪ್ಪ ವಸಂತಪ್ಪ, ಯಡೇಹಳ್ಳಿ ಜಲೀಲ್ ಸಾಹೇಬರು, ತಮ್ಮಣ್ಣೆ ಗೌಡರು, ಜೋಗಿ ಹನುಮಂತಣ್ಣ, ಮಸಾಲ್ತಿ ರಾಮಣ್ಣ, ಈಸೂಪ್ ಸಾಹೇಬರು, ಯಹ್ಯಾ ಸಾಹೇಬರು, ಸೀತಮ್ಮ ಮತ್ತು ಮುರಿಗೆಮ್ಮ ಹಿಂದಿನ ದಿನ ಎಲ್ಲರೂ ಸೇರಿ ಮರುದಿನ ಅಧ್ಯಕ್ಷರ ಚುನಾವಣೆಯಲ್ಲಿ ವೆಂಕಟಾಚಲ ಅಯ್ಯಂಗಾರರೇ ಅಧ್ಯಕ್ಷರೆಂದು ಆಯ್ಕೆ ಮಾಡುವುದಾಗಿ ತೀಮಾ೯ನಿಸುತ್ತಾರೆ ಆದರೆ ಮರುದಿನ ಎಲ್ಲರೂ ಸೇರಿ ಬಾಲ ಗಂಗಾದರರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ ಆಗ ವೆಂಕಟಚಲಾಯ್ಯಂಗಾರ್ ಏಕಾಂಗಿ ಆಗಿ ಉಳಿಯುತ್ತಾರೆ ಈ ಆನಂದಪುರದ ಕ್ಷಿಪ್ರ ರಾಜಕೀಯ ಬದಲಾವಣೆಗೆ ಆಗಿನ ತಾಲ್ಲೂಕ್ ಬೋಡ್೯ಸದಸ್ಯರಾಗಿದ್ದ ಶಿವಗಂಗೆ ಶಾಂತಪ್ಪ ಗೌಡರು ಮತ್ತು ಭಾಲಗಂಗಾಧರರ ತಂದೆ ಪಟೇಲರಾದ ಸೋಮಶೇಖರಪ್ಪ ಗೌಡರ ಚಾಣಕ್ಯ ನಡೆ ಕಾರಣ ಅಗುತ್ತದೆ.
  ನಂತರ ಎಲ್ಲರೂ ವೆಂಕಟಾಚಲ ಅಯ್ಯಂಗಾರರಲ್ಲಿ ರಾಜಿ ಆಗಿ ಅವರ ಮಾರ್ಗದರ್ಶನದಲ್ಲಿ ಆನಂದಪುರ೦ ನ ಅವತ್ತಿನ ಜನಸಂಖ್ಯೆ, ಆದಾಯ ಆದಾರಿತ ಅಭಿವೃದ್ದಿ ಕೆಲಸ ಮಾಡಿದ್ದು ಇತಿಹಾಸ, ಆನಂದಪುರದ ಬಸ್ ನಿಲ್ದಾಣಕ್ಕೆ 1997 ರಲ್ಲಿ ವೆಂಕಟಾಚಲ ಅಯ್ಯಂಗಾರ್ ಎಂದು ನಾಮಕರಣ ಮಾಡಿದೆ.
ಇದು ಆನಂದಪುರಂ ನ ಇತಿಹಾಸ, ಮರೆಯಲಾರದ ಗಣ್ಯರುಗಳು ಆದರೆ ಎಲ್ಲೂ ದಾಖಲಾಗದ ಕಾರಣ ಈಗಿನ ಯುವ ಜನತೆಗೆ ಇನ್ನೊಮ್ಮೆ ಇದನ್ನು ನೆನಪಿಸಲು ಇಲ್ಲಿ ಸಂಗ್ರಹಿಸಿ ಬರೆಯಲಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...