ಪೇಸ್ ಬುಕ್ ನಲ್ಲಿ ಇವರ ಪೋಟೋ ಸಿಗುವುದಿಲ್ಲ ಆದರೆ ಎಲ್ಲಾ ಬಹು ಮುಖ್ಯ ಚಚೆ೯ಯಲ್ಲಿ Faruk Gkr ಎಂಬ ಹೆಸರು ಕಾಣುತ್ತಿರುತ್ತದೆ.
ಕೊಪ್ಪದ ಮಹೇಂದ್ರ ಕುಮಾರ್ ಗೆಳೆಯರು ಕೂಡ.
ಪ್ರಗತಿ ಪರ ಚಿಂತನೆ, ದೇಶಾಭಿಮಾನ, ಮೂಡ ನಂಬಿಕೆ ವಿರೋದ ,ಸಾಹಿತ್ಯ ಚಿಂತನೆ, ಸಂವಿದಾನದ ಪರವಾಗಿ ಅನ್ಯಾಯದ ವಿರುದ್ದವಾಗಿ ಇವರ ಲೇಖನಗಳು ಇದೆ.
ಒಂದು ವಿಶೇಷ ಅಂದರೆ ನಾನು ಇವರನ್ನು ಮುಖಃತವಾಗಿ ಈ ವರೆಗೆ ಬೇಟಿ ಆಗಲಾಗಲಿಲ್ಲ ಆದರೆ ಅವರು ನನ್ನ ಎಲ್ಲಾ ಚಟುವಟಿಕೆ ನೋಡಿದ್ದಾರೆ.
ಇನ್ನೂ ಒಂದು ವಿಶೇಷ ಅಂದರೆ ನಾನು ಈ ಭಾಗದ ಅನೇಕ ಅನಾಮದೇಯ ವ್ಯಕ್ತಿ ಪರಿಚಯ ಬರೆದರೆ ಪಾರೂಕ್ ಅವರನ್ನು ನಮ್ಮ ಊರ ಭಾಗದಲ್ಲಿ ಅವರನ್ನು ನೋಡಿದ ಬಗ್ಗೆ ದ್ವನಿಸುತ್ತಾರೆ ಅಂದರೆ ಎಲ್ಲವನ್ನೂ ಗ್ರಹಿಸುವ ಶಕ್ತಿ ಹೊಂದಿದ್ದಾರೆ.
ಮೊನ್ನೆ ಲಕ್ಷ್ಮಣ ಫಲ (ಸುಮಾರು ಒಂದು ಕೆಜಿ ತೂಕದ್ದು) ಕಳಿಸಿ ಕೊಟ್ಟಿದ್ದರು, ಈ ಹಣ್ಣು ತಿಂದರೆ ಕ್ಯಾನ್ಸರ್ ತಡೆಯುತ್ತದೆಂಬ ನಂಬಿಕೆಯಿಂದ ಇದರ ಬೆಲೆ ಕನಿಷ್ಟ 500 ರಿಂದ ಸಾವಿರದ ತನಕ ಇದೆ ಮತ್ತು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ, ಈ ಹಣ್ಣನ್ನು ಸುಮಾರು 5 ವರ್ಷದಿಂದ ಚಿತ್ರದಲ್ಲಿ ಮಾತ್ರ ನೋಡಿದ್ದೆ ಈಗ ಪಾರೂಕರಿಂದ ಕೈ ಮುಟ್ಟಿ, ಸುವಾಸನೆ ಆಗ್ರಾಹಿಣಿಸಿ ಸ್ವತಃ ರುಚಿ ನೋಡುವಂತಾಯಿತು.
3-4 ವರ್ಷದ ಹಿಂದೆ ಪಾರೂಕರು ಖರೀದಿಸಿದ ತೋಟದಲ್ಲಿ ಇರುವ ಈ ಲಕ್ಷ್ಮಣ ಫಲ ಬ್ರಿಜಿಲ್ ಮೂಲದ್ದು ಬಾರತದಲ್ಲಿ ಲಕ್ಷ್ಮಣ ಫಲದ ಹೆಸರಲ್ಲಿದೆ ಆದರೆ ಸೀತಾಫಲದಷ್ಟು ರುಚಿ ಇಲ್ಲ, ಗಾತ್ರ ಮಾತ್ರ ದೊಡ್ಡದು.
ಹೊಸ ಫಲದ ಹೊಸ ರುಚಿ ಹೊಸ ತೋಟದಿಂದ ತೆಗೆದು ಕಳಿಸಿದ ಮಿತ್ರ ಪಾರೂಕ್ ಜಿ ಕೆ ಆರ್ ಗೆ ಧನ್ಯವಾದಗಳು.
Comments
Post a Comment