Skip to main content

ಮಲೆನಾಡಿನ ಉರುಗ ತಜ್ಞ ಬರಿಗೈಯಲ್ಲಿಯೇ ಹಾವು ಹಿಡಿಯುವ ಪರಿಸರ ಪ್ರೇಮಿ ಮನ್ಮಥ ಕುಮಾರ್ ನೆನಪುಗಳೊಂದಿಗೆ ಶ್ರದ್ದಾ೦ಜಲಿಗಳು

                 ಶ್ರದ್ದಾ೦ಜಲಿಗಳು

ಮಲೆನಾಡಿನ ಉರಗ ತಜ್ಞ ಮನ್ಮಥಕುಮಾರ್ ಇನ್ನು ನೆನಪು ಮಾತ್ರ

  ಮನ್ಮಥ್ ಕುಮಾರ್ ಎಂದರೆ 1980 ರಿಂದ 90 ರ ದಶಕದಲ್ಲಿ ಒಂದು ಥರ ಹೀರೋ ಸಾಗರದಲ್ಲಿ, ಅವರು ಬೈಕ್ ಲ್ಲಿ ಹಾದು ಹೋದರೆ ವಿದ್ಯಾಥಿ೯ಗುಂಪುಗಳಲ್ಲಿ ಅವರೆ ನೋಡು ಮನ್ಮಥ ಕುಮಾರ್ ಅಂತ ಉದ್ಘೋಷ, ಹೆಸರಿಗೆ ತಕ್ಕ ಸ್ಪುರದ್ರೂಪಿ ಮನ್ಮಥ ಕುಮಾರ್ ಅಂತರ್ಮುಖಿ ಮತ್ತು ಅಥ೯ ಮಾಡಿಕೊಳ್ಳಲಾಗದ ವ್ಯಕ್ತಿತ್ವದವರು.
  ಹವ್ಯಕ ಬ್ರಾಹ್ಮಣರಲ್ಲಿ ಅಪರೂಪದ ಉರಗ ಪ್ರೇಮಿ, ಈಗ ಎಲ್ಲೆಲ್ಲೂ ವಿಷ ಸರ್ಪಗಳನ್ನು ಹಿಡಿಯುವವರಿದ್ದಾರೆ ಸುಮಾರು 30-40 ವಷ೯ದ ಹಿಂದೆಯೇ ಮನೆ ಪ್ರವೇಶಿಸುತ್ತಿದ್ದ ಬೃಹತ್ ಕಾಳಿಂಗ ಸಪ೯ಗಳನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದ ಮನ್ಮಥ ಕುಮಾರ್ ಅಂದರೆ ವಿಸ್ಮಯ ವ್ಯಕ್ತಿತ್ವ.
  ಆಗೆಲ್ಲ ಸೋಷಿಯಲ್ ಮೀಡಿಯ, ಟೀವಿ ಚಾನಲ್ ಇಲ್ಲದ್ದರಿಂದ ಇವರು ರಾಜ್ಯದಾದ್ಯಂತ ಈಗಿನ ಸ್ನೇಕ್ ಕ್ಯಾಚರ್ ರೀತಿ ಪ್ರಚಾರ ಪಡೆಯಲಿಲ್ಲ ಮತ್ತು ಮನ್ಮಥ ಕುಮಾರ್ ಕೂಡ ಪ್ರಚಾರದಿಂದಲೂ ಬಲು ದೂರವೇ ಇರುತ್ತಿದ್ದರು.
  ಸಾಗರ ತಾಲ್ಲೂಕಿನ ಮುಂಡಿಗೆಸರ ವಾಸಿ ಆದ ಇವರು ಹಿಡಿದ ಕಾಳಿಂಗ ಸರ್ಪವೇ ಹತ್ತಿರ ಹತ್ತಿರ 500 ಇನ್ನು ನಾಗರ ಹಾವುಗಳ೦ತೂ ಕೆಲವು ಸಾವಿರ, ಇವರ ವಿಶೇಷ ಅಂದರೆ ವೈಲ್ಡ್ ಲೈಫ್ ಇಲಾಖೆ ಪರವಾನಿಗೆ ಹೊಂದಿರುವ ವಿರಳ ಸ್ನೇಕ್ ಕ್ಯಾಚರ್ ಲ್ಲಿ ಇವರು ಒಬ್ಬರು.
  ಉಡುಪಿಯಲ್ಲಿ ಹಾವಿನ ವಿಷ ಮಾರಟ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಇವರು ಇರದಿದ್ದರೂ ಇವರನ್ನು ಸೇರಿಸಿದ ಪ್ರಕರಣ ಇವರ ಜೀವಮಾನದಲ್ಲಿ ಒಂದು ಕಪ್ಪು ಚುಕ್ಕೆ ಈ ಪ್ರಕರಣ ಕೂಡ ಖುಲಾಸೆ ಆಯಿತು.
   2001 ರಲ್ಲಿ ಸಾಗರದ ಹೈತೂರು ಎಂಬಲ್ಲಿ ಕಾಳಿಂಗ ಸಪ೯ 62 ಮೊಟ್ಟೆಗಳನ್ನು ಇಟ್ಟಿದ್ದು ಇವರ ಗಮನಕ್ಕೆ ಬಂದಾಗ ಸಾಗರದ ಪೋಟೋಗ್ರಾಪರ್ ಪ್ರಕಾಶ್ ಸ್ಟುಡಿಯೋದ ಕಿಟ್ಟಿಯವರಿಂದ ಚಿತ್ರಿಕರಣ ಮಾಡಿಸಿದ್ದು ನಿತ್ಯ ಪತ್ರಿಕೆಯಲ್ಲಿ ವೈರಲ್ ಆದ್ದರಿಂದ ವಿಪರೀತ ಜನಸಂದಣಿ ಆಗಲು ಪ್ರಾರಂಭ ಆದಾಗ ಈ ಕಾಳಿಂಗ ರಕ್ಷಿಸಲು ಇವರು ಮೊಟ್ಟೆ ಮತ್ತು ಹಾವು ಸ್ಥಳಾಂತರ ಮಾಡುತ್ತಾರೆ ಇದನ್ನು ಪ್ರತಿಷ್ಟೆ ಆಗಿ ತೆಗೆದುಕೊಂಡ ಸಿಂಗ್ ಎಂಬ DFO ದಂತ ಚೋರ ವೀರಪ್ಪನ್ ಹಿಡಿದ೦ತೆ ಮನ್ಮಥ ಕುಮಾರ್ ಮತ್ತು ಚಿತ್ರಿಕರಣ ಮಾಡಿದ ಪೋಟೋಗ್ರಾಪರ್ ಕಿಟ್ಟಿಯವರನ್ನು ರಾತ್ರೋ ರಾತ್ರಿ ಬಂದಿಸಿ 22 ಕಾಳಿಂಗ ಸರ್ಪದ ಮೊಟ್ಟಿ ಹಾಳಾಯಿತೆಂದು FIR ದಾಖಲಿಸಿ ಹಲ್ಲೆ ಮಾಡಿದ್ದು ಸಾಗರದ ಜನತೆಯ ಆಕ್ರೋಷಕ್ಕೆ ಪ್ರತಿಭಟನೆಗೆ ಕಾರಣ ಆಗಿತ್ತು. ನಂತರ ನ್ಯಾಯಾಲಯದಲ್ಲಿ ಈ ಕೇಸ್ ಖುಲಾಸೆ ಆಯಿತು.
  ಆಗ ನಾನು ನನ್ನ ಮೇಲಿನ ಅನೇಕ ಕೇಸ್ ಗಳಿಗಾಗಿ ಸಾಗರದಲ್ಲಿ ಕೋಟ್೯ಗೆ ಹೋದಾಗ ಮನ್ಮಥ ಕುಮಾರ್ ಜೊತೆ ಹಾವಿನ ಬಗ್ಗೆ ಅನೇಕ ಸಾರಿ ಮಾತಾಡುತ್ತಿದ್ದೆವು, ಯಾವುದೆ ಉಪಕರಣ, ಸ್ಟಿಕ್ ಇಲ್ಲದೆ ಹಾವು ಹಿಡಿಯುವ ಇವರು ಹೇಳುತ್ತಿದ್ದದ್ದು "ನೀವು ಹಾವು ಹಿಡಿದಾಗಲೇ ನಿಮ್ಮ ಕೈ ಹಿಡಿತದಲ್ಲೇ ಹಾವು ನಿಮ್ಮಿಂದ ಅಪಾಯ ಇಲ್ಲ ಎಂದು ಗ್ರಹಿಸಿ ಬಿಡುತ್ತೆ" ಅಂತಿದ್ದರು.
   ಸರಿ ಸೃಪ, ಕಾಡಿನ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದ ಮಲೆನಾಡಿನ ಪರಿಸರ ವಿಜ್ಞಾನಿ ಎಂದು ನಾನು ಕರೆಯುತ್ತಿದ್ದ ಮನ್ಮಥ ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ಮನಸ್ಸು ಬಾರವಾಯಿತು.
   ದೇವರು ಇವರ ಆತ್ಮಕ್ಕೆ ಸದ್ಗತಿ ಸ್ವಗ೯ ಪ್ರಾಪ್ತಿ ನೀಡಲೆಂದು ಪ್ರಾಥಿ೯ಸುತ್ತೇನೆ. 

 ಮನ್ಮಥ ಕುಮಾರರ ಬಗ್ಗೆ ಈ ಪೋಸ್ಟಿನಲ್ಲಿ ಪ್ರತಿಕ್ರಿಯೆ ನೀಡಿದವರು ಅನೇಕ ವಿಷಯ ತಿಳಿಸಿದ್ದಾರೆ ಆದರೆ ಇದನ್ನೆಲ್ಲ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ ಇವರು ಪುತ್ತೂರಿನ ಬಾಲವನದಲ್ಲಿ ಸರ್ಪವನದ ಜವಾಬ್ದಾರಿ ವಹಿಸಿದ್ದರು ಹಾಗಾಗಿ ಇವರು ಪುತ್ತೂರಿನಲ್ಲಿ ತುಂಬಾ ಪ್ರಸಿದ್ಧರಾಗಿದ್ದರು ಮತ್ತು ಬೆಂಗಳೂರಿನ ಬನ್ನೇರು ಘಟ್ಟದಲ್ಲಿನ ಸಪ೯ವನದ ಸಲಹೆಗಾರರೂ ಆಗಿದ್ದರು.
  ಆಯುರ್ವೇದ ಗಿಡಮೂಲಿಕೆಗಳಲ್ಲಿ ಅನೇಕರಿಗೆ ಚಿಕಿತ್ಸೆ ನೀಡುತ್ತಿದ್ದರಂತೆ ಅದರಲ್ಲೂ ಗ್ಯಾಂಗ್ರೀನ್ ಆದವರು ಅನೇಕರು ಇವರಿಂದ ಚಿಕಿತ್ಸೆ ಪಡೆದು ಗುಣ ಆಗಿದ್ದಾರೆ.
  ಜಾದು ಕಲಿತು ಪ್ರದಶ೯ನ ನೀಡುವಂತ ಜಾದು ತಜ್ಞತೆ ಪಡೆದಿದ್ದರು, ಇವರ ಮಗ ಚವನ ಕುಮಾರ್ ಕೂಡ ತಂದೆಯಿಂದ ಹಾವು ಹಿಡಿಯುವ ಕಲೆ ಕಲಿತಿದ್ದಾರಂತೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...