#ಕೋವಿಶೀಲ್ಡ_ವ್ಯಾಕ್ಸಿನ್_ಮೊದಲ_ಡೋಸ್_ಈದಿನ_ಪಡೆದೆ.
ಕಳೆದ ವರ್ಷ ಈ ಸಮಯದಲ್ಲಿ ಇಡೀ ವಿಶ್ವವವೇ ಚಿಕಿತ್ಸೆ ಇಲ್ಲದ ಹೊಸ ಸೊಂಕು ಕೋವಿಡ್ -19 ನಿಂದ ತತ್ತರಿಸಲು ಪ್ರಾರಂಬಿಸಿತ್ತು ಆಗ ಕೇಳಿ ಬಂದಿದ್ದು ಇದಕ್ಕೆ ರೋಗ ನಿರೋದಕ ಲಸಿಕೆ ಚುಚ್ಚುಮದ್ದು ಒಂದೇ ಪರಿಹಾರ ಆದರೆ ಅದನ್ನು ಕಂಡು ಹಿಡಿದು ಜನರ ಮೇಲೆ ಪ್ರಯೋಗ ಮಾಡಿ ಪಲಿತಾಂಶ ನೋಡಿದ ಮೇಲೆ ಸಾವ೯ಜನಿಕರಿಗೆ ನೀಡಬಹುದು ಇದಕ್ಕೆ ಒಂದರಿಂದ ಎರೆಡು ವರ್ಷ ಆದರೂ ಬೇಕು ಎನ್ನುವ ತಜ್ಞರ ಮಾತು ಮತ್ತು ಅಲ್ಲಿಯವರೆಗೆ ಮಾಸ್ಕ ದರಿಸುವ, ಸೋಪಿನಿಂದ ಕೈ ತೊಳೆದುಕೊಳ್ಳುವ ಹಾಗೂ ಜನ ಸಂದಣಿಯಿಂದ ದೂರವಿರಬೇಕೆಂದ ಮುಂಜಾಗೃತೆ ಮೀರಿಯೂ ಅನೇಕರನ್ನ ಕಳೆದುಕೊಂಡ ಘಟನೆಯೂ ನಡೆಯಿತು.
ಈಗ ಮೊದಲ ಹಂತದ 60 ವರ್ಷ ಮೇಲ್ಪಟ್ಟವರ ಲಸಿಕೆ ನಂತರದ 45 ವರ್ಷ ಮೇಲ್ಪಟ್ಟವರಿಗೆ ಕೂಡ ಲಸಿಕೆ ಸಕಾ೯ರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಕಾಯ೯ಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.
ಇದರ ನಡುವೆ ಲಸಿಕೆ ಬಗ್ಗೆ ಸುಳ್ಳು ಸುದ್ದಿಯೂ ಪ್ರಾರಂಭ ಆಗಿದೆ, ಲಸಿಕೆ ತೆಗೆದುಕೊಂಡರೆ ಮದ್ಯಪಾನ ಮಾಡುವಂತಿಲ್ಲ ಎಂಬುದು ಅನೇಕ ಪಾನಪ್ರಿಯರು ನಿರಾಶೆಯಿಂದ ಲಸಿಕೆಯಿ೦ದ ದೂರ ಉಳಿಯಲು ಒಂದು ಕಾರಣ ಆಗಿದೆ.
#ಆದರೆ_ಮದ್ಯಪಾನಕ್ಕೂ_ಲಸಿಕೆಗೂ_ಯಾವುದೇ_ಸಂಬಂದವಿಲ್ಲ_ಎಲ್ಲರೂ_ಕೊರಾನ_ಲಸಿಕೆ_ತೆಗೆದುಕೊಳ್ಳಬಹುದು
#ಎನ್ನುವ_ಪ್ರಚಾರ_ಸಕಾ೯ರ_ಮಾಡಬೇಕಿತ್ತು.
ಇವತ್ತಿಂದ 28 ದಿನದ ನಂತರ ಅಥವ 35 ದಿನದ ಒಳಗೆ ಎರಡನೆ ಡೋಸು ಪಡೆಯಬೇಕು ಅದರ ನಂತರದ 15 ದಿನದಲ್ಲಿ ದೇಹ ಕೊರಾನಾ ರೋಗ ನಿರೋದಕ ಶಕ್ತಿ ಉಂಟಾಗಿಸಿಕೊಳ್ಳುತ್ತದೆ ಅಲ್ಲಿಯವರೆಗೆ ಜಾಗೃತರಾಗಿರಬೇಕು ಅದರ ನಂತರವೂ ಕೊವಿಡ್ ಸೊಂಕು ತಾಗುವುದಿಲ್ಲ ಅಂತ ಹೇಳಲಾಗುವುದಿಲ್ಲ ಆದರೆ ಸೊಂಕಿನ ತೀಕ್ಷಣತೆ ಪ್ರಾಣ ಹಾನಿ ಇರುವುದಿಲ್ಲ ಎಂಬುದು ತಜ್ಞರ ಸಂಶೋದನೆ.
ಇವತ್ತು ಆನಂದಪುರಂನ ಆಸ್ಪತ್ರೆಯಲ್ಲಿ ಪೋಲಿಸ್ ಸಿಬ್ಬಂದಿ ವಗ೯ಕೂಡ ಎರಡನೇ ಡೋಸು ಪಡೆದರು.
ಆನಂದಪುರದ ಇನಾಂದಾರರಾಗಿದ್ದ ರಾಮಕೃಷ್ಣ ಅಯ್ಯಂಗಾರರ ದಮ೯ಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮರಣಾಥ೯ (ವಿದ್ಯಾಮಂತ್ರಿ ಬದರಿನಾರಾಯಣ್ ಅಯ್ಯಂಗಾರರ ಮಾತೃಶ್ರೀ ) ಕಟ್ಟಿಸಿದ ಈ ಆಸ್ಪತ್ರೆಯನ್ನ ಸಿಬ್ಬಂದಿ ವಗ೯ ತುಂಬಾ ಸ್ವಚ್ಚವಾಗಿ ನಿವ೯ಹಿಸಿದ್ದಾರೆ.
Comments
Post a Comment