ನಾವು ಜನ ಸಾಮಾನ್ಯರು ನಮ್ಮ ಕುಟುಂಬದ ಸುರಕ್ಷೆ ನಮ್ಮದೇ ಜವಾಬ್ದಾರಿ, ಕೊರಾನ ಎರಡನೆ ಅಲೆ ಎದುರಿಸಲು ಇಲ್ಲಿದೆ ಆರೋಗ್ಯ ಕವಚದ ಉಪಾಯ
#ನಾವು_ಜನಸಾಮಾನ್ಯರು_ನಮ್ಮ_ಕೈ_ನಮ್ಮ_ತಲೆಮೇಲೆ
#ನಮಗೆ_ನಾವೇ_ರೋಗಮುಕ್ತ_ಉಪಾಯಗಳು_ಪಾಲಿಸೋಣ
ಕಳೆದ ವರ್ಷ ಕೊರಾನಾ ಮೊದಲ ಅಲೆ ಇಷ್ಟು ಕತರ್ ನಾಕ್ ಆಗಿರಲಿಲ್ಲ ಆದರೆ ಸರ್ಕಾರ ಮತ್ತು ಜನತೆ ಹೆಚ್ಚು ಜಾಗೃತಿ ವಹಿಸಿದೆವು ಆಗ ಸ್ಯಾನಿಟೈಸರ್, ಮಾಸ್ಕಗಳು ತುಂಬಾ ಕೊರತೆ ಇತ್ತು. ಆದರೂ ನಾವೆಲ್ಲ ಗೆದ್ದೆವು.
ಈ ವರ್ಷದ ಕೊರಾನಾ ಎರಡನೆ ಅಲೆ ಅತ್ಯಂತ ಅಪಾಯಕಾರಿ ಈಗಾಗಲೇ ರೋಗ ಪೀಡಿತರಿಗೆ ದೇಶದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಜಾಗ ಖಾಲಿ ಇಲ್ಲ. ಆದರೆ ವ್ಯಾಕ್ಸಿನ್ ಬಂದಿದೆ, ಮಾಸ್ಕ ಮತ್ತು ಸ್ಯಾನಿಟೈಸರ್ ಗೆ ಕೊರತೆ ಇಲ್ಲ.
ಜೀವ ಕಳೆದುಕೊಂಡವರ ಅಂತ್ಯಕ್ರೀಯೆ ಮಾಡಲೂ ಸ್ಮಶಾನದಲ್ಲಿ ಸರತಿ ಸಾಲುಗಳಿದೆ ಎರಡರಿಂದ ಮೂರು ದಿನ ಅಂತ್ಯಸಂಸ್ಕಾರಕ್ಕೆ ಕಾಯಬೇಕಾಗಿದೆ.
ಹಣ, ಅಧಿಕಾರ ಮತ್ತು ಪ್ರಭಾವ ಇದ್ದರೂ ಬದುಕಲು ಸಾಧ್ಯವಿಲ್ಲ ಅಂತ ಸಾವು ನೋವಿನ ಸುದ್ದಿ ಕೇಳುತ್ತಲೇ ಇದೆ.
ಈ ಸಂದಭ೯ದಲ್ಲಿ ನಾವು ಈ ಸಕಾ೯ರಗಳನ್ನು ಅವುಗಳ ನಡೆಸುವ ಪಕ್ಷಗಳನ್ನು ಅವುಗಳ ಕ್ರೀಯಾಶೀಲತೆ ಅಥವ ಕರ್ತವ್ಯ ಲೋಪ ವಿಮರ್ಶೆ ಮಾಡುತ್ತಲೋ, ವ್ಯಾಕ್ಸಿನ್ ಬಗ್ಗೆ ಯೋಚಿಸುತ್ತಾ ಕುಳಿತು ಕೊಳ್ಳದೆ ನಮ್ಮ ಕುಟುಂಬದ ಆರೋಗ್ಯ ಕವಚ ನಿರ್ಮಿಸಿಕೊಂಡು ಬದುಕುವ ಬಗ್ಗೆ ಹೆಚ್ಚು ಯೋಚಿಸಬೇಕು.
#ನಮ್ಮ_ಕುಟುಂಬದ_ಆರೋಗ್ಯ_ಕವಚ
1. ತಕ್ಷಣದಿಂದ ನಿಮ್ಮ ನಿಮ್ಮ ಮನೆಯ ಗೇಟಿಗೆ ಬೀಗ ಹಾಕಿ
ಯಾರೇ ಬರಲಿ, ಸಂಬಂದಿಗಳೇ ಬರಲಿ ಮನೆಯ ಒಳಗೆ ಕರೆಯಬೇಡಿ, ಅತಿಥ್ಯ ಕೂಡ ಬೇಡಿ ಮತ್ತು ಅವರಿಗೆ ಸದ್ಯದ ಗಂಡಾಂತರ ವಿವರಿಸಿ, ಸಿಟ್ಟು ಮಾಡಿದರೂ ನೀವು ಬದಲಾಗಬೇಡಿ ನೀವು ಬದುಕಿದರೆ ತಾನೆ ಮುಂದೆ ಅವರನ್ನು ಸಮಾದಾನ ಪಡಿಸಬಹುದು.
2. ಮನೆಗೆ ಗೇಟ್ ಇಲ್ಲದಿದ್ದರೆ ಮನೆಯ ಬಾಗಿಲು ಲಾಕ್ ಮಾಡಿ ಬಿಡಿ.
3. ಸದ್ಯ ಯಾವುದೇ ಮದುವೆ, ಸಮಾರಂಭ, ಖರೀದಿ, ಪೂಜೆ , ಔತಣ ಕೂಟ ಅಂದರೂ ಮನೆಯಿಂದ ಹೊರಬರುವುದಿಲ್ಲ ಎಂಬ ಪ್ರತಿಜ್ಞೆ ಮುರಿಯಬೇಡಿ.
4. ಮನೆಯಲ್ಲಿರುವ 50 ವರ್ಷದ ಮೇಲಿನವರಿಗೆ ದುಡಿಮೆ, ವ್ಯವಹಾರಗಳಿದ್ದರೆ ಒಂದು ತಿಂಗಳು ಎಲ್ಲದನ್ನು ನಿಲ್ಲಿಸಿ ರಜಾ ದಲ್ಲಿ ಇರುವಂತೆ ನೋಡಿಕೊಳ್ಳಿ.
5, ಮನೆಗೆ ಬೇಕಾದ ದವಸದಾನ್ಯ, ತರಕಾರಿ, ಔಷದಿ ವಾರಕ್ಕೊಮ್ಮೆ ತಂದು ಬಿಡಿ. ಪ್ರತಿನಿತ್ಯ ಖರೀದಿಗೆ ಅಂಗಡಿಗೆ ಹೋಗಲೇ ಬೇಡಿ.
6. ಮನೆಯಲ್ಲಿ ಮಧ್ಯಪಾನ, ದೂಮಪಾನ ಮಾಡುವವರಿದ್ದರೆ ಅವರಿಗೆ ಅದಕ್ಕಾಗಿ ಹೊರ ಹೋಗುವುದನ್ನು ನಿಷೇದಿಸಿ ಮನೆಯಲ್ಲೇ ಅವರ ಹವ್ಯಾಸಕ್ಕೆ ಅನುವು ಮಾಡಿ ಕೊಡಿ.
7. ಮಾಸ್ಕ ದರಿಸುವುದು, ಸ್ಯಾನಿಟೈಸರ್ ಬಳಸುವುದು, ಸೋಪಿನಿಂದ ಕೈ ತೊಳೆಯುವುದು ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಪಾಲಿಸಿ.
8. ಪ್ರತಿಯೊಬ್ಬರೂ ಯಾವುದೇ ಕಾರಣಕ್ಕೂ ಕೈಯಿಂದ ಮುಖ ಮುಟ್ಟದಂತೆ ಜಾಗೃತೆ ಪಾಲಿಸಿರಿ.
9. ಬಿಸಿ ನೀರು, ಬಿಸಿ ಕಾಫಿ ಟೀ , ಬಿಸಿ ಮಾಡಿದ ಆಹಾರ, ಶುದ್ಧವಾಗಿ ತೊಳೆದ ಹಣ್ಣು ತರಕಾರಿ ಮಾತ್ರ ಬಳಸಿ.
10. ಆದಷ್ಟು ಮನೆಮದ್ದು, ಯಾವುದೇ ಕಷಾಯ, ಬಿಸಿ ತಿಳಿ ಸಾರು ಇಂತವುದನ್ನೆಲ್ಲ ಹೆಚ್ಚು ಬಳಸಿ.
11. ಕುಟುಂಬದ ಎಲ್ಲಾ ಸದಸ್ಯರಿಗೂ ಎಷ್ಟು ಬೇಗ ಸಾಧ್ಯ ಅಷ್ಟು ಬೇಗ ವ್ಯಾಕ್ಸಿನ್ ಕೊಡಿಸಿ (ಇಲ್ಲೂ ಕೆಲವರು ಕೋವಾಕ್ಸಿನ್ ಒಳ್ಳೇದು, ಕೋವಿ ಶೀಲ್ಡ ಒಳ್ಳೇದು ಅಂತ ಚಚಿ೯ಸುವುದು ಬಿಡಿ) ವ್ಯಾಕ್ಸಿನ್ ನಿಂದ ಶೇಕಡಾ 94% ಜನರ ಜೀವ ಹಾನಿ ಆಗಿಲ್ಲ ಎಂದು ಸಮೀಕ್ಷೆಯಲ್ಲಿ ದೃಡಪಟ್ಟಿದೆ ಅಂತೆ.
#ಮನೆಯ_ಯಜಮಾನನೇ_ಸಂಸಾರ_ಸಾಗರದ_ನೌಕೆಯ_ನಾವಿಕ_ಎಂಬುದು_ಮರೆಯಬೇಡಿ.
Comments
Post a Comment