ಸ್ವಾತಂತ್ರ ಭಾರತದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸಾಗರ-ಹೊಸನಗರ-ತೀಥ೯ಳ್ಳಿ ಕ್ಷೇತ್ರದಿಂದ ಮೊದಲ ಶಾಸಕರಾಗಿ ಆಯ್ಕೆ ಆದ ಶಾಂತವೇರಿ ಗೋಪಾಲಗೌಡರು ಅವರ ಗೆಲುವಿಗೆ ಕಾರಣರಾದ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ
#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪ
#ಭಾರತೀಯ_ರೈತ_ನಾಯಕರು_3
#ಸ್ವಾತಂತ್ರ_ಭಾರತದ_ಮೊದಲ_ಚುನಾವಣೆ_1952
#ಸಾಗರ_ಹೊಸನಗರ_ತೀಥ೯ಹಳ್ಳಿ_ತಾಲ್ಲೂಕ್_ಸೇರಿ_ಒಂದು_ವಿಧಾನಸಭಾ_ಕ್ಷೇತ್ರ.
1952 ರ ಪ್ರಥಮ ಚುನಾವಣೆ ಅಧಿಕೃತ ಘೋಷಣೆಯಿಂದ ಸೋಷಿಲಿಸ್ಟ್ ಪಕ್ಷ ಚುನಾವಣೆಗೆ ಹೆಚ್ಚಿನ ಗಮನ ಹರಿಸಿತು, ರಾಜ್ಯ ಸಮಾಜವಾದಿ ಪಕ್ಷದ ಕಾಯ೯ದಶಿ೯ ಜಿ.ಸದಾಶಿವ ರಾಯರು ಜೈಲಿನಲ್ಲಿದ್ದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರನ್ನು ಬೇಟಿ ಮಾಡಿ ಚುನಾವಣೆ ಬಂದಿರುವುದರಿಂದ ಇನ್ನು ಜೈಲಲ್ಲಿ ಇರುವ ಅಗತ್ಯ ಇಲ್ಲ, ಮುಚ್ಚಳಿಕೆ ಬರೆದು ಕೊಟ್ಟು ಹೊರ ಬರಬೇಕೆಂದು ವಿನಂತಿಸುತ್ತಾರೆ, ಅವರ ಮನವಿ ಮೇರೆಗೆ ಎಲ್ಲಾ ಸತ್ಯಾಗ್ರಹಿಗಳು ಮುಚ್ಚಳಿಕೆ ಬರೆದು ಕೊಟ್ಟು ಜೈಲಿಂದ ಹೊರಬರುತ್ತಾರೆ.
ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಾಟಿ೯ ಅಭ್ಯಥಿ೯ ಆಗಿ 13722 ಮತ ಪಡೆದು ತಮ್ಮ ಎದುರಾಳಿ ಕಾಂಗ್ರೇಸ್ ಪಕ್ಷದ ಅಭ್ಯಥಿ೯ ಆನಂದಪುರದ A.R. ಬದರಿನಾರಾಯಣರನ್ನು ಸೋಲಿಸುತ್ತಾರೆ, ಬದರಿನಾರಾಯಣರು ಈ ಚುನಾವಣೆಯಲ್ಲಿ ಪಡೆದ ಮತ 11485 .
ಈ ಚುನಾವಣೆಯಲ್ಲಿ ರೈತ ಸಂಘ ಹಾಗೂ ರೈತ ನೇತಾರ ಗಣಪತಿಯಪ್ಪರ ಸಹಕಾರ ಅಪಾರ.
ಗೋಪಾಲಗೌಡರು ಜನರ ಅಪಾರ ಪ್ರೀತಿ - ಗೌರವ - ಅಭಿಮಾನವನ್ನು, ನಿಲ್ಲದ ಕಾಗೋಡು ಸತ್ಯಾಗ್ರಹ ಬಗೆಹರಿಯದ ವಿವಾದವನ್ನು ಹೊತ್ತು, ವಿದಾನ ಸಭೆ ಪ್ರವೇಶಿಸಿದರು.
ವಿದಾನಸಭೆ ಅವರ ಚಿಂತನೆ, ಘಷ೯ಣೆ ಹೋರಾಟದ ರಣರಂಗ ಎನಿಸಿತು. ಅಲ್ಲಿ ಅಭಿಮನ್ಯುವಾಗಿ ತನ್ನ ಶಕ್ತಿ - ಸಾಮಾಥ೯ಯದ ಪ್ರದರ್ಶನ ಮಾಡಿದರು.
ಸಾಗರ ತಾಲ್ಲೂಕಿನಿ, ಹೊಸನಗರ ತಾಲ್ಲೂಕಿನ ಮತ್ತು ತೀಥ೯ಗಳ್ಳಿ ತಾಲ್ಲೂಕಿನ ಮೊದಲ ವಿಧಾನಸಭಾ ಶಾಸಕರೆಂಬ ದಾಖಲೆ ಶಾಂತವೇರಿ ಗೋಪಾಲಗೌಡರದ್ದಾಯಿತು.
ಸ್ವಾತಂತ್ರ ಭಾರತದ ಪ್ರಥಮ ಚುನಾವಣೆಯಲ್ಲಿ ತಮ್ಮ ಭೂ ಹೋರಾಟಕ್ಕೆ ಬೆಂಬಲಿಸಿದ ಸಮಾಜವಾದಿ ಪಾಟಿ೯ಯ ಶಾಂತವೇರಿ ಗೋಪಾಲಗೌಡರನ್ನು ಅವರು ಹೊರಗಿನವರು ತಮ್ಮ ಜಾತಿಯವರಲ್ಲ ಎಂಬೆಲ್ಲ ನಕರಾತ್ಮಕ ಅಭಿಪ್ರಾಯಗಳನ್ನು ಗೌಣವಾಗಿಸಿ ಗೆಲ್ಲಿಸಿದ ಕೀರ್ತಿ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರದ್ದಾಯಿತು.
(ಮುಂದಿನ ಲೇಖನ 1957 ರಲ್ಲಿ ಶಾಂತವೇರಿ ಗೋಪಾಲಗೌಡರನ್ನು ಸೋಲಿಸಿದ ಎ.ಆರ್. ಬದರಿನಾರಾಯಣ್)
Comments
Post a Comment