#ಶಾಸಕರು_ಸಂಸದರು_ವಿದಾನಪರಿಷತ್_ಸದಸ್ಯರು_ಮತ್ತು_ವಿದ್ಯಾ_ಮಂತ್ರಿಗಳಾಗಿದ್ದ_ಆನಂದಪುರಂನ
#ಎ_ಆರ್_ಬದರಿನಾರಾಯಣ್_ಅಯ್ಯಂಗಾರ್_ಒಂದು_ನೆನಪು
ಭಾಗ - 1
#ಶಿವಮೊಗ್ಗ_ಜಿಲ್ಲೆಯ_ಆನಂದಪುರದ_ಅಯ್ಯಂಗಾರ್_ಕುಟುಂಬದ_ನೆನಪುಗಳು.
ಆನಂದಪುರಂನ ಆಸ್ಪತ್ರೆ, ಪಶು ವೈದ್ಯ ಶಾಲೆ, ಶಾಲಾ ಕಾಲೇಜು, ಬ್ಯಾಂಕ್ ನಿಮಾ೯ತರು.
ಶಾಸಕ, ಸಂಸದ ಮತ್ತು ವಿದ್ಯಾ ಮಂತ್ರಿ ಆದ ಇವರ ಕುಟುಂಬದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.
1952ರ ಪ್ರಥಮ ಚುನಾವಣಾ ರಾಜಕೀಯದಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸ್ಪದಿ೯ಸಿದ್ದ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾಗಿದ್ದ ರಾಮ ಕೃಷ್ಣ ಅಯ್ಯಂಗಾರ ಪುತ್ರ, ವಕೀಲರು, ಸ್ಟಾತಂಂತ್ರ ಹೋರಾಟಗಾರರಾಗಿದ್ದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯ ಕಾಗೋಡು ಚಳವಳಿಯ ನಾಯಕ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ.
ಸ್ವಾತಂತ್ರ ನಂತರದ ಮೊದಲ ಚುನಾವಣೆ ಸೋಲಿನ ಪಲಿತಾಂಶದಿಂದ ನೊಂದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮೃತರಾಗಿದ್ದು ಆ ಕುಟುಂಬಕ್ಕೆ ದೊಡ್ಡ ಆಘಾತ ಆಯಿತು.
ಆನಂದಪುರದಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆ, ಶಾಲಾ ಕಾಲೇಜು, ಬ್ಯಾಂಕ್ ಹೀಗೆ ಸಾಲು ಸಾಲು ಜನರ ಅಭ್ಯುದಯಕ್ಕಾಗಿ ಶ್ರಮಿಸಿದ ಸಾವಿರಾರು ಎಕರೆ ಜಮೀನ್ದಾರರಾಗಿದ್ದ ಅಯ್ಯಂಗಾರ್ ಕುಟುಂಬದವರು ಈಗ ಯಾರು ಆನಂದಪುರದಲ್ಲಿ ಇಲ್ಲ. ರೈಸ್ ಮಿಲ್, ತೋಟ, ಜಮೀನು ಮತ್ತು ಆನಂದಪುರದ ಇಕ್ಕೆಲದ ಮನೆ ನಿವೇಶನ ಎಲ್ಲಾ ಮಾರಿ ಈಗಿನ ತಲೆಮಾರಿನವರು ಬೆಂಗಳೂರು ಮತ್ತು ವಿದೇಶಗಳಲ್ಲಿ ಶ್ರೀಮಂತ ಜೀವನ ಮಾಡುತ್ತಿದ್ದಾರೆ.
ಆನಂದಪುರದ ಇತಿಹಾಸ ಪ್ರಖ್ಯಾತ ರಂಗನಾಥ ಸ್ವಾಮಿ ದೇವಾಲಯದ ಹಿಂಭಾಗದ ಮೂಲ ಮನೆ ಉಳಿಸಿಕೊಂಡಿದ್ದಾರೆ, ಪ್ರತಿ ವಷ೯ ರಥ ಸಪ್ತಮಿಗೆ ನಡೆಯುವ ರಂಗನಾಥ ಸ್ವಾಮಿ ದೇವರ ರಥೋತ್ಸವದ ದಿನ ಬಾಗವಹಿಸಿ ವಾಪಾಸಾಗುತ್ತಾರೆ.
ಈಗಿನ ತಲೆಮಾರಿನ ಆನಂದಪುರಂ ವಾಸಿಗಳಿಗೆ ಈ ಕುಟುಂಬದ ಮಾಹಿತಿ ಇಲ್ಲ, ಗೊತ್ತಿರುವವರು ಈಗಿಲ್ಲ.
ಆನಂದಪುರ೦ನ ವೇದನಾರಾಯಣ ಭಟ್ಟರ ಮಕ್ಕಳಾದ ರಂಗನಾಥ ಭಟ್ಟರು ಅವರ ಸಹೋದರ ಕೆ.ವಿ.ಸುರೇಶ್ ಮತ್ತು ಆನಂದಪುರಂನ ಜನಾನುರಾಗಿ ಗುರುಗಳಾದ ಬೋಜ್ ರಾಜ್ ಅಯ್ಯಂಗಾರರಿಗಷ್ಟೆ ಮಾಹಿತಿ ಇದೆ.
(ಮುಂದಿನ ಮಾಹಿತಿ ಭಾಗ- 2ರಲ್ಲಿ )
Comments
Post a Comment