#ಬಹು_ವರ್ಷದ_ಆಸೆ_ನೆರವೇರಿದೆ
#ರಾಟ್_ವೀಲರ್_32_ದಿನದ_ಮರಿ_ಖರೀದಿಸಿ_ಆಯಿತು.
ನನಗೆ ರಾಟ್ ವೀಲರ್ ಸಾಕಬೇಕಂತ ಮನಸ್ಸಿದ್ದರು ಅದನ್ನು ಸಾಕಲೇ ಬೇಕಂತ ತೀಮಾ೯ನಕ್ಕೆ ತಂದವರು ಗೆಳೆಯ ಜೇಕಬ್ (ಜಗನ್) ಇವರ ಸ್ವಂತದ್ದಾದ ಕೆನಲ್ ಪಾಮ್೯ ಊಟಿಯಲ್ಲಿದೆ, ವಿದೇಶದಲ್ಲಿ ಪೆಟ್ರೋಲಿಯಂ ಸಂಸ್ಥೆಯಲ್ಲಿ ಇಂಜಿನಿಯರ್, ಮುಂಬೈ, ಬೆಂಗಳೂರು, ರಾಣಿಪೇಟೆ ಮತ್ತು ಊಟಿಯಲ್ಲಿ ಆಸ್ತಿ ಹೊಂದಿದ್ದಾರೆ.
ನಾಲ್ಕು ವರ್ಷದ ಹಿಂದೆ ನನಗೆ ಇವರ ಊಟಿಯ ಕೆನಲ್ ಪಾಮ೯ನಿಂದ ಒಂದು ರಾಟ್ ವೀಲರ್ ಗಿಫ್ಟ್ ಆಗಿ ನೀಡಿದರೂ ನನಗೆ ಅದನ್ನು ಸಾಕುವ ಸಂಪೂರ್ಣ ವ್ಯವಸ್ಥೆ ಆಗದೆ ಸ್ವೀಕರಿಸಲಿಲ್ಲ.
ನಂತರ ಜಗನ್ ಬಂದವರು ಅದಕ್ಕೆ ಎಲ್ಲಾ ಮಾರ್ಗದರ್ಶನ ನೀಡಿದ ನಂತರ ವ್ಯವಸ್ಥೆ ಮಾಡಿದೆ ಆದರೆ ಕೊರಾನಾ ಮೊದಲ ಅಲೆಯಿಂದ ರಾಟ್ ವೀಲರ್ ಬರಲಿಲ್ಲ.
ಇವತ್ತು ಮಗಳು ಅಳಿಯ ರಾಟ್ ವೀಲರ್ ಮಾರಾಟಕ್ಕೆ ಇರುವ ಬಗ್ಗೆ ಮತ್ತು ಅದನ್ನು ಇಲ್ಲಿಗೆ ತಲುಪಿಸುವ ಭರವಸೆ ನೀಡಿದ್ದರಿಂದ ಖರೀದಿ ಮಾಡಿದೆ.
ಜಾನ್ಸಿ ಅವಳ ಮಗಳು ಕಾಳು ಜೊತೆ ಈಗ ಬರುವ ರಾಟ್ ವೀಲರ್ ಗೆ ನಾಮಕರಣ ಆಗಬೇಕು, ನಿತ್ಯ ತರಬೇತಿ ಕೂಡ ಈಗ 32 ದಿನಕ್ಕೆ 7kg ಇದಾನೆ ಮುಂದೆ 70 ರಿಂದ 80 kg ಆಗುತ್ತಾನೆ, ಇವನ ಅಜ್ಜಿ ಜಮ೯ನ್ ದೇಶದವಳು ಇತ್ಯಾದಿ ಇವನ ಬತ್೯ ಸರ್ಟಿಪಿಕೇಟ್ ನೀಡುವ ಬೆಂಗಳೂರಿನ ಕೆನಲ್ ಬ್ರೀಡರ್ ಹೇಳುತ್ತಿದ್ದರು.
Comments
Post a Comment