ಲೋಕನಾಯಕ ಜಯಪ್ರಕಾಶ್ ನಾರಾಯಣರು ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರನ್ನು ಸಾಗರದ ಜೈಲಲ್ಲಿ ಬೇಟಿ ಮಾಡಿ ಗಣಪತಿಯಪ್ಪರ ದಿನಚರಿ ಪುಸ್ತಕದಲ್ಲಿ ದಾಖಲಿಸಿದ "ಮೇರಿ ಹಾದಿ೯ಕ್ ಶುಭ ಕಾಮನ " ಒಂದು ಐತಿಹಾಸಿಕ ದಾಖಲೆ ಆಗಿದೆ.
#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪ
#ಭಾರತೀಯ_ರೈತ_ನಾಯಕ
#ನೆನಪು_2
21- ಸೆಪ್ಟೆಂಬರ್ -1951ರಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಕಾಗೋಡು ಸತ್ಯಾಗ್ರಹಕ್ಕೆ ಬೆಂಬಲಿಸಲು ಬರುತ್ತಾರೆ ಅವರ ಜೊತೆ ಅವರ ದಮ೯ಪತ್ನಿ ಶ್ರೀಮತಿ ಪ್ರಭಾವತಿ ದೇವಿ, ಜನ ನಾಯಕ ಜಾಜ್೯ ಪನಾ೯೦ಡೀಸ್ ಮತ್ತು ಸಮಾಜವಾದಿ ದುರೀಣ ಜಿ.ಸದಾಶಿವ ರಾಯರು ಒಂದಾಗಿ ಬರುತ್ತಾರೆ.
ಲೋಹಿಯಾರು ಬಂದು ಮೂರು ತಿಂಗಳ ನಂತರ ಇವರ ಬೇಟಿ ಇದಾಗಿರುತ್ತದೆ.
ಸಾಗರಕ್ಕೆ ಬಂದವರೇ ನೇರವಾಗಿ ಸಾಗರದ ಜೈಲಿನಲ್ಲಿ ಇದ್ದ ಗಣಪತಿಯಪ್ಪರನ್ನು ಬೇಟಿಯಾಗಲು ದೌಡಾಯಿಸುತ್ತಾರೆ, ಇವರು ಜೈಲಿಗೆ ಬೇಟಿ ನೀಡುವ ಸುದ್ದಿಯನ್ನು ಜೈಲಿನಲ್ಲಿದ್ದ ಸತ್ಯಾಗ್ರಹಿಗಳಿಗೆ ಮೊದಲೇ ತಿಳಿಸಲಾಗಿರುತ್ತದೆ.
ಸಾಗರದ ಜೈಲಿನ ಬಾಗಿಲಿಗೆ ಬಂದವರೇ ಜೈಲಿನ ಕಾವಲುಗಾರ ಸಿಬ್ಬಂದಿಗೆ "ಕಿಸಾನ್ ನೇತಾರ ಕಹಾಃ ಹೈ?" ಎನ್ನುತ್ತಾ ಒಳಗೆ ಬರುತ್ತಾರೆ, ಜೈಲಿನ ಒಳಗಡೆ ಇದ್ದ ಸತ್ಯಾಗ್ರಹಿ ಬಂಧಿಗಳೆಲ್ಲ ಸಾಲಾಗಿ ಅವರಿಗೆ ಗೌರವ ಸೂಚಿಸುತ್ತಾರೆ.
" ಜಯಪ್ರಕಾಶ್ ನಾರಾಯಣ್ ಜಿಂದಾಬಾದ್ "
" ಪ್ರಭಾವತಿ ದೇವಿ ಜಿಂದಾಬಾದ್" ಎಂದು ಘೋಷಣೆ ಹಾಕುತ್ತಾರೆ, ರೈತ ಸತ್ಯಾಗ್ರಹಿಗಳು ಇವರೇ ನಮ್ಮ ನಾಯಕ #ಗಣಪತಿಯಪ್ಪ ಎಂದು ಪರಿಚಯಿಸುತ್ತಾರೆ.
ಕೂಡಲೇ ಜೆ ಪಿ ಯವರು ತಮ್ಮ ಎರಡೂ ಬಾಹುಗಳಿಂದ ಗಣಪತಿಯಪ್ಪನವರನ್ನು ತಬ್ಬಿಕೊಂಡು "ನಿಮ್ಮ ಹೋರಾಟದ ವಿಷಯ ಇಡೀ ರಾಷ್ಟ್ರಕ್ಕೆ ಗೊತ್ತಾಗಿದೆ, ನಿಮ್ಮ ಹೋರಾಟಕ್ಕೆ ಜಯ ಲಭಿಸುತ್ತದೆ ಹೆದರಬೇಡಿ, ನಿಮ್ಮ ಹೆಸರು ಚಿರಾಯುವಾಗಿರುತ್ತದೆ,ಇದಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ " ಎಂದು ದೈಯ೯ ಹೇಳುತ್ತಾರೆ, ಆಗ ಗಣಪತಿಯಪ್ಪರು ನಿಮ್ಮಂತಹ ಮಹಾನುಭಾವರ ಆಶ್ರೀವಾದ ಬೆಂಬಲ ಬೇಕು ಎಂದಾಗ ಅವರು ಗಣಪತಿಯಪ್ಪರ ದಿನಚರಿ ಪುಸ್ತಕದಲ್ಲಿ #ಮೇರಿ_ಹಾದಿ೯ ಕ್_ಶುಭ_ಕಾಮನ ಎಂದು ಹಾರೈಸಿ ಬರೆದು ದಿನಾಂಕ ನಮೂದಿಸಿ ತಮ್ಮ ಹಸ್ತಾಕ್ಷರ ನಮೂದಿಸುತ್ತಾರೆ.
ಅದೇ ದಿನ ಸಾಗರದಲ್ಲಿ ಸಾವ೯ಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಆ ಸಭೆಗೆ ಜನ ಸಾಗರವೆ ಸೇರಿತ್ತು.
(ಮುಂದಿನ ಭಾಗ : ಪ್ರಥಮ ಸಾರ್ವಜನಿಕ ಚುನಾವಣೆ ಸಾಗರ - ಹೊಸನಗರ- ತೀಥ೯ಳ್ಳಿ ವಿಧಾನ ಸಭಾ ಕ್ಷೇತ್ರ)
Comments
Post a Comment