ಕೊರಾನ ಎಲ್ಲಿದೆ?ಎಂದು ವಿತಂಡವಾದ ಮಾಡದಿರಿ ಗೆಳೆಯರೆ,ಕೊರಾನ ಮೊದಲ ಅಲೆ ಎದುರಿಸಿ ಬದುಕಿದ್ದೇವೆ ಈಗ ಎರಡನೇ ಅಲೆಗೆ ಸೋಲಬೇಡಿ
#ಕೊರಾನಾ_ಎಲ್ಲಿದೆ?
#ಮಾಸ್ಕ್_ಯಾಕೆ?
ಇದು ದೂರದ ಊರಿನ ವಿಡಿಯೋ ಅಲ್ಲ ನಮ್ಮ ಊರಿಂದ 10 ಕಿ.ಮಿ. ದೂರದ ರಿಪ್ಪನ್ ಪೇಟೆಯದ್ದು.
ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ನನ್ನ ಗೆಳೆಯ, ರಿಪ್ಪನ್ ಪೇಟೆಯ ಗ್ರಾ.ಪಂ.ನ ಮಾಜಿ ಸದಸ್ಯ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಕಾಮಗಾರಿಗೆ ಒತ್ತಾಯಿಸಿ 2001ರಲ್ಲಿ ದೆಹಲಿ ಚಲೋ ಕಾಯ೯ಕ್ರಮದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿದ ಯೋಗಿಶ್ ಗೌಡರು ಇಹಲೋಕ ತ್ಯಜಿಸಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ಹಾಗು ಸ್ವಗ೯ ಪ್ರಾಪ್ತಿಗೆ ದೇವರಲ್ಲಿ ಪ್ರಾಥಿ೯ಸುತ್ತೇನೆ.
ಕ್ರಿಯಾಶೀಲ, ಚಟುವಟಿಕೆಯಿಂದ ಇರುವ ಪ್ರತಿನಿತ್ಯ ವಾಕಿಂಗ್ ಮಾಡುತ್ತಿದ್ದ ಆರೋಗ್ಯವಂತರಾಗಿದ್ದ ಗೆಳೆಯ ಕೋವಿಡ್ ಎರಡನೆ ಅಲೆಗೆ ಬಲಿಯಾದದ್ದು ವಿಪಯಾ೯ಸ.
ಒಂದೂವರೆ ವರ್ಷದ ಹಿಂದೆ ನನ್ನ ಮಗಳ ಮದುವೆಗೆ ಬಂದು ಶುಭ ಹಾರೈಸಿದ್ದರು.
#45ವರ್ಷ_ಮೇಲ್ಪಟ್ಟವರು_ತಕ್ಷಣ_ನಿಮ್ಮ_ಸಮೀಪದ
#ಆರೋಗ್ಯ_ಕೇಂದ್ರದಲ್ಲಿ_ಲಸಿಕೆ_ಪಡೆಯಿರಿ
#ಮಾಸ್ಕ್_ದರಿಸಿ
#ತಿರುಗಾಟ_ನಿಲ್ಲಿಸಿ
#ಸ್ಯಾನಿಟೈಸರ್_ಸೋಪು_ಬಳಸಿ_ಕೈ_ಆಗಾಗ್ಗೆ_ತೊಳೆಯಿರಿ
ಆದರೂ ನಮ್ಮ ಗೆಳೆಯರು ಅನೇಕರು ಇನ್ನೂ ಕೊರಾನಾ ಎಲ್ಲಿದೆ? ಮಾಸ್ಕ್ ಏಕೆ? ಅನ್ನುತ್ತಿದ್ದಾರೆ ಅವರಿಗೆ ಮನ ಪರಿವರ್ತನೆ ಆಗಿ ಮುಂಜಾಗೃತೆವಹಿಸುವ ಬುದ್ದಿ ನೀಡಲಿ ಎಂದು ದೇವರಲ್ಲಿ ಮತ್ತೊಮ್ಮೆ ಪ್ರಾಥಿ೯ಸುತ್ತೇನೆ, ಕೊರಾನಾ ಕಣ್ಣಿಗೆ ಕಾಣುವುದಿಲ್ಲ ಮತ್ತು ಬಂದರೆ ಜೀವವನ್ನು ಬಿಡುವುದಿಲ್ಲ, ಕುಟುಂಬದಲ್ಲಿ ನಮ್ಮ ನಂಬಿದವರಿಗೆ ಅನ್ಯಾಯ ಉಂಟು ಮಾಡಬಾರದೆಂದು ಮು೦ಜಾಗೃತೆ ಯಾಕೆ ವಹಿಸಬಾರದು?
Comments
Post a Comment