ಕಳೆದ ವರ್ಷ ಜನರಲ್ಲಿ ಜೀವ ಭಯ ಇತ್ತು ಅವತ್ತು ಕಾಯಿಲೆ ಪೀಡಿತರ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ಇತ್ತು, ಈ ವರ್ಷ ಕಾಯಿಲೆ ಪೀಡಿತರು ಕೆಲವು ಲಕ್ಷ ಸಂಖ್ಯೆ, ಸಾವಿನ ಸಂಖ್ಯೆ ನಾಲ್ಕು ಪಟ್ಟು ಆಗಿದೆ ಆದರೆ ಜನರಲ್ಲಿ ಸಾವಿನ ಭಯ ಮಾತ್ರ ಇಲ್ಲ.
#ಇದು_ಕಳೆದ_ವರ್ಷ_ಇದೇ_ದಿನ_ಬರೆದ_ಪೋಸ್ಟ್
#ಅವತ್ತು_ಸಾವಿನ_ಭಯ_ಇತ್ತು.
ಕಳೆದ ವರ್ಷ ಇವತ್ತಿನ ದಿನ ಇಡೀ ದೇಶದಲ್ಲಿ ಕೊರಾನಾ ಹರಡಿದ್ದು 24 942, ಸಾವು 780 ಅವತ್ತು ಕನಾ೯ಟಕ ರಾಜ್ಯದಲ್ಲಿ 489 ಜನರಿಗೆ ಪಾಸಿಟೀವ್ ಮತ್ತು 18 ಜನ ಮೃತರಾಗಿದ್ದರು ಅವತ್ತು ಇಡೀ ದೇಶದಲ್ಲಿ ಲಾಕ್ ಡೌನ್ ಆಗಿತ್ತು, ರೋಗ ನಿರೋದಕ ಚುಚ್ಚುಮದ್ದು ಬಂದಿರಲಿಲ್ಲ.
#ಇವತ್ತು_ಸಾವಿನ_ಭಯ_ಇಲ್ಲ
ಈ ವಷ೯ ಇವತ್ತಿನ ಸಂಖ್ಯೆ ದೇಶದಾದ್ಯಂತ ಕಾಯಿಲೆ ಪೀಡಿತರು 3,46,786 ಸಾವು 2,694. ಕನಾ೯ಟಕದಲ್ಲಿ 29,438 ಮತ್ತು ಸಾವು 208. ಈಗ ದೇಶದಲ್ಲಿ ಚುಚ್ಚುಮದ್ದು ಲಭ್ಯ, ಲಾಕ್ ಡೌನ್ ಇಲ್ಲ.
#ಸ್ವಯ೦_ರೋಗ_ಬರದಂತೆ_ಜನಸಂಪರ್ಕದಿಂದ_ದೂರವಿದ್ದು
#ಮಾಸ್ಕ್_ಸ್ಯಾನಿಟ್ಟೆಸರ್_ಬಳಸುವ_ಕಡ್ಡಾಯ_ಅಭ್ಯಾಸ_ಮುಂದಿನ_ಮೂರು_ತಿಂಗಳು_ಪಾಲಿಸಲೇ_ಬೇಕು
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_23
#ದಿನಾ0ಕ_26_ಏಪ್ರಿಲ್_2020
*ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.
ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.
ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.
ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.
ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.
ಇಡೀ ದೇಶದಲ್ಲಿ 18 ಸಾವು ಆಗಿತ್ತು ಮತ್ತು 721 ಜನರಿಗೆ ಸೋ೦ಕು ಹರಡಿತ್ತು.
ಇವತ್ತು ಅಂದರೆ ಏಪ್ರಿಲ್ 25ಕ್ಕೆ ಇಡೀ ದೇಶದಲ್ಲಿ ಕೊರಾನ ವೈರಸ್ ನಿಂದ 24942 ಜನರಿಗೆ ಸೋ೦ಕು ಹರಡಿದೆ, ಸಾವು 780 ಆಗಿದೆ, ಕನಾ೯ಟಕದಲ್ಲಿ 489 ಜನರಿಗೆ ಸೋ೦ಕು ಮತ್ತು 18 ಸಾವು ಆಗಿದೆ.
ಅಮೆರಿಕಾದಲ್ಲಿ ಈ ಸೋ೦ಕು ಇವತ್ತಿಗೆ 9 ಲಕ್ಷ ದ 41 ಸಾವಿರದ 478 ಜನರಿಗೆ ಹರಡಿದೆ, 52 ಸಾವಿರದ 948 ಸಾವು ಆಗಿದೆ.
ಬೇರೆ ದೇಶದ ಜೊತೆ ಹೋಲಿಸಿದರೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ ಆದರೂ ಒಂದು ವೇಳೆ ಲಾಕ್ ಡೌನ್ ತೆಗೆದ ಮೇಲೆ ಜನತೆ ಮೈಮರೆತರೆ ಮೇ ತಿಂಗಳ ಅಂತ್ಯದಲ್ಲಿ ಈ ವೈರಸ್ 2 ಲಕ್ಷ ದಾಟಿದರೆ ಸುಮಾರು 90 ಸಾವಿರ ಜನರನ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಡ್ಮಿಟ್ ಮಾಡಬೇಕಾದ ಸಂದಭ೯ ಬರುವ ಸಾಧ್ಯತೆ ತೆಗೆದು ಹಾಕುವ ಹಾಗಿಲ್ಲ.
ಹಾಗಾದರೆ ನಮ್ಮ ದೇಶದ ಪರಿಸ್ಥಿತಿ ಯಾವ ನಿಯOತ್ರಣಕ್ಕೂ ಸಿಗಲಾರದು, ಹಾಗಾಗದಿರಲಿ, ದೇಶದ ಅದೃಷ್ಟ ಮತ್ತು ದೇವರ ದಯೆ ಈ ಕೊರಾನ ವೈರಸ್ ದೇಶದಿಂದಲೇ ಅಷ್ಟೆ ಅಲ್ಲ ಪ್ರಪ೦ಚದಿಂದಲೆ ನಿಗ೯ಮಿಸಲಿ ಎಂದು ಹಾರೈಸೋಣ.
ಸೆಪ್ಟೆ೦ಬರ್ ಅಂತ್ಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯ ಔಷದಿ ಬಳಕೆಗೆ ಸಿಗಬಹುದಾದ ಪ್ರಯೋಗಗಳು ನಡೆಯುತ್ತಿದೆ ಅಲ್ಲಿನ ವರೆಗೆ ನಾವು ಆದಷ್ಟು ಸ್ವಯಂ ಮತ್ತು ಸ್ವಾವಲಂಬನೆಯಿಂದ ಎಚ್ಚರಿಕೆ ಜೀವನ ನಡೆಸಬೇಕಾಗಿದೆ.
ಎಲ್ಲದನ್ನು ನಕಾರತ್ಮಕವಾಗಿ ಪರಿಗಣಿಸದೆ ಸಕಾರತ್ಮಕ ಚಿಂತನೆಯ ಒಗ್ಗಟ್ಟು ಕಾಪಾಡಿಕೊಳ್ಳಬೇಕಾದ ಅತಿ ಅನಿವಾಯ೯ತೆ ಇದೆ.
Comments
Post a Comment