#ಹೊಳಲೂರು_ಮೈಲಾರಪ್ಪನವರು_ಅಂದರೆ_ಸಜ್ಜನ_ರಾಜಕಾರಣಿ
#ಅಷ್ಟೇ_ಅಲ್ಲ_ಅವರ_ತಂದೆ_ಅವದೂತ_ಹನುಮಂತಪ್ಪರೆಂದು_ಬಹುಜನರಿಗೆ_ಗೊತ್ತಿಲ್ಲ.
ಮೈಲಾರಪ್ಪನವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರ ಅತ್ಮೀಯ ಬಳಗದವರು, ಜಮೀನ್ದಾರರು, ಯಾರನ್ನೂ ನೋವಿಸದ ಮಾನವೀಯ ಗುಣ ಹೊಂದಿದವರು ಅವರ ಆಡಳಿತದಲ್ಲಿ ನಾನು ಸಾಗರ ತಾಲ್ಲೂಕಿನ ಅನ೦ದಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯ.
ಬಹಳ ಜನಕ್ಕೆ ಗೊತ್ತಿಲ್ಲ ಹೊಳಲೂರಿನ ಅವದೂತರಾದ ಪವಾಡ ಪುರುಷರಾದ ಹನುಮಂತಪ್ಪ ಇವರ ತಂದೆ ಅಂತ.
ಸಂಸಾರದಿಂದ ವಿಮುಕ್ತರಾಗಿ ಸನ್ಯಾಸ ಸ್ವೀಕರಿಸಿ ಊರಿನ ಗುಡ್ಡದಲ್ಲಿ ನೆಲೆಸಿದ ಅವದೂತ ಹನುಮಂತಪ್ಪರಿಗೆ ಇಡೀ ರಾಜ್ಯದಲ್ಲಿ ಶಿಷ್ಯರಿದ್ದಾರೆ.
ಚಲನ ಚಿತ್ರ ನಟ ದೊಡ್ಡಣ್ಣ ಕೂಡ ಇವರ ಪಟ್ಟದ ಶಿಷ್ಯ, ದೊಡ್ಡಣ್ಣ ನಮ್ಮಲ್ಲಿ ಬಂದಾಗೆಲ್ಲ ಅವರ ಬಾಯಲ್ಲಿ ಅವದೂತ ಹನುಮಂತಪ್ಪರ ಬಗ್ಗೆ ಒಂದಲ್ಲ ಒ೦ದು ನೆನಪು ಮಾತಾಡುತ್ತಾರೆ, ದೊಡ್ಡಣ್ಣ ಪ್ರತಿ ಹುಣ್ಣಿಮೆಗೆ ತಪ್ಪದೆ ಅವದೂತರ ಗದ್ದುಗೆ (ಶಿವಮೊಗ್ಗದಿಂದ 15 ಕಿ.ಮಿ.ದೂರದ ಹೊಳಲೂರಿಗೆ) ಗೆ ಹೋಗುತ್ತಾರೆ ಅವತ್ತು ಅಲ್ಲಿ ನಡೆಯುವ ಪೂಜೆ, ಭಜನ ಮತ್ತು ಸಾಮೂಹಿಕ ಬೋಜನದಲ್ಲಿ ಭಾಗವಹಿಸುತ್ತಾರೆ.
ಆಗ ದೊಡ್ಡಣ್ಣರಿಗೆ ಭದ್ರಾವತಿಯಲ್ಲಿ ಸಣ್ಣ ಕೆಲಸ,
ಹವ್ಯಾಸಿ ನಾಟಕ ಕಲಾವಿದ, ಅಣ್ಣ ಮತ್ತು ತಾಯಿ ಇವರಿಗೆ ಮದುವೆ ಮಾಡಲು ಕನ್ಯೆ ಹುಡುಕಲು ಪ್ರಾರಂಬಿಸುತ್ತಾರೆ ಆದರೆ ಅವದೂತರು ದೊಡ್ಡಣ್ಣನಿಗೆ ಗಾಜಿನ ಕಣ್ಣಿನ ಕನ್ಯೆ ಸಿಗುತ್ತಾಳೆ ಅಂದಿದ್ದ ಭವಿಷ್ಯದಂತೆಯೇ ಅವರ ಮದುವೆ ಆಗುತ್ತದೆ.
ಹವ್ಯಾಸಿ ನಾಟಕದ ನಟ ದೊಡ್ಡಣ್ಣ ರಾಜ್ಯದ ಪ್ರಖ್ಯಾತ ಪ್ರಸಿದ್ದ ನಟನಾಗುತ್ತಾರೆ ಅಂದಾಗ ಆ ಕಾಲದಲ್ಲಿ ದೊಡ್ಡಣ್ಣನವರೇ ನಂಬಿರಲಿಲ್ಲ ಆದರೆ ಅದು ಸತ್ಯವಾಯಿತು.
ಅವದೂತ ಹನುಮಂತಪ್ಪರ ಬಲ ಕಾಲಿನಲ್ಲಿ ಹುಣ್ಣಾಗಿದೆ ಎಂಬ ಸುದ್ದಿ ಕೇಳಿ ಆಗ ಪ್ರವದ೯ಮಾನದ ಜನಪ್ರಿಯ ನಟರಾದ ದೊಡ್ಡಣ್ಣ ಹೊಳಲೂರು ಆಶ್ರಮಕ್ಕೆ ದೌಡಾಯಿಸುತ್ತಾರೆ ಮತ್ತು ಚಿಕಿತ್ಸೆಗೆ ಬೆಂಗಳೂರಿನ ದುಬಾರಿ ಸುಸಜ್ಜಿತ ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ಬರುತ್ತಾರೆ ಆದರೆ ಅವದೂತರು ಯಾವುದೇ ಕಾರಣಕ್ಕೂ ಚಿಕಿತ್ಸೆಗೆ ಒಪ್ಪುವುದಿಲ್ಲ ಆದರೆ ಇಡೀ ಭಕ್ತ ಸಮುದಾಯದ ಒತ್ತಾಯದಂತೆ ದೊಡ್ಡಣ್ಣರ ಜೊತೆ ಬೆಂಗಳೂರಿಗೆ ಹೋಗಿ ಆಸ್ಪತ್ರೆ ಸೇರುತ್ತಾರೆ.
ಬೆಳಿಗ್ಗೆಯೇ ಮುಖ್ಯ ವೈದ್ಯಾದಿಕಾರಿ ಗಾಭರಿಯಿಂದ ದೊಡ್ಡಣ್ಣರನ್ನ ಕರೆಯುತ್ತಾರೆ ಅಲ್ಲಿ ವೈದ್ಯರು " ನಿನ್ನೆ ಇವರ ಬಲಗಾಲಿನ ಹುಣ್ಣಿನ ಎಲ್ಲಾ ಪರೀಕ್ಷೆ ಮಾಡಿದ ದಾಖಲೆಗಳಿದು ಆದರೆ ಇವತ್ತು ಅವರ ಬಲಗಾಲಿನಲ್ಲಿ ಏನೂ ಇಲ್ಲ ಈಗ ಎಡಗಾಲಿನಲ್ಲಿ ಹುಣ್ಣು ಇದೆ " ಎಂದರಂತೆ !
ದೊಡ್ಡಣ್ಣ ಅವದೂತರಿಗೆ ಇದನ್ನು ತಿಳಿಸಿದಾಗ ಮುಗಳು ನಗೆಯಿಂದ ಅವದೂತರು "ದೊಡ್ಡ (ಅವರು ದೊಡ್ಡಣ್ಣನ ವನ್ನು ಯಾವಾಗಲೂ ದೊಡ್ಡ ಅಂತಲೇ ಕರೆಯುವುದು) ನನ್ನ ವಾಪಾಸ್ ಕರೆದು ಕೊಂಡು ಹೋಗು ಏನು ಇರೊಲ್ಲ" ಅಂದರಂತೆ ಅವರ ಅಪೇಕ್ಷೆಯಂತೆ ವಾಪಾಸ್ ಕರೆತಂದರಂತೆ ಕಾಲಲ್ಲಿ ಹುಣ್ಣೆ ಇರಲಿಲ್ಲವಂತೆ!
ಮೈಲಾರಪ್ಪರಲ್ಲಿ ಅವರ ತಂದೆ ಅವದೂತರಾದ ಬಗ್ಗೆ ಕೇಳಿದಾಗ ಅವರು ಹೇಳಿದ್ದು " ಅವರು ಸತ್ಪುರುಷರು ಯಾರು ಏನೇ ಸಹಾಯ ಕೇಳಿ ಬಂದರು ಹೋಗಿ ಜನರ ಬಾಯಿ ಸಿಹಿ ಮಾಡು ನಿನ್ನ ಕೆಲಸ ಆಗುತ್ತೆ" ಅನ್ನುತ್ತಿದ್ದರಂತೆ.
ಅದನ್ನು ನಾನು ನನ್ನ ಜೀವನದಲ್ಲಿಅಳವಡಿಸಿಕೊಂಡಿದ್ದೇನೆ ಮತ್ತು ಆಚರಿಸುತ್ತಿದ್ದೇನೆ ಪ್ರತ್ಯಕ್ಷವಾಗಿ ಅವದೂತ ಹನುಮಂತಪ್ಪರನ್ನು ನೋಡಿಲ್ಲ ಆದರೆ ಅವರ ವಾಕ್ಯ ನನ್ನ ಜೀವನದಲ್ಲಿ ಅಳವಡಿಸಿ ಆಚರಿಸುತ್ತಾ ಅವರನ್ನು ಸ್ಮರಿಸುತ್ತೇನೆ.
ಕಳೆದ 2019 ರ ನವೆಂಬರ್ 10 ರಂದು ನನ್ನ ಮಗಳ ಮದುವೆಗೆ ಆಮಂತ್ರಣವನ್ನು ಮೈಲಾರಪ್ಪರಿಗೆ ಅಂಚೆ ಮೂಲಕ ಕಳಿಸಿದೆ ಆದರೆ ಅವರು ಬರುವ ಬಗ್ಗೆ ಯಾವ ನಿರೀಕ್ಷೆಯೂ ಇರಲಿಲ್ಲ ಯಾಕೆಂದರೆ ಪ್ರತ್ಯಕ್ಷ ಹೋಗಿ ಕರೆದರೂ ಅನೇಕ ಕಾರಣದಿಂದ ಬರಲಾಗುವುದಿಲ್ಲ ಆದರೆ ಆಶ್ಚಯ೯ ಅಂದರೆ ಸುಮಾರು 20 ವರ್ಷದ ನಂತರ (ನನ್ನ ಅವರ ಬೇಟಿ) ಮೈಲಾರಪ್ಪನವರು ನನ್ನ ಮಗಳು ಮತ್ತು ಅಳಿಯನನ್ನು ಅವರ ದಾಂಪತ್ಯ ಜೀವನಕ್ಕಾಗಿ ಆಶ್ರೀವಾದ ಮಾಡಲು ಬಂದಿದ್ದು ನನ್ನ ಸೌಭಾಗ್ಯ.
#ಶಿವಮೊಗ್ಗ_ಜಿಲ್ಲೆಯ_ಅವದೂತ_ಹನುಮಂತಪ್ಪರ_ಬಗ್ಗೆ_ಪುಸ್ತಕ_ಬರೆದು_ಪ್ರಕಟಿಸುವ_ನನ್ನ_ಹಂಬಲ_ಈಡೇರಲಿ_ಅಂತ_ಆಶಿಸುತ್ತೇನೆ.
Comments
Post a Comment