ಭಾಗ - 2 , ಆನಂದಪುರಂ ಪುರಾಭಿವೃದ್ದಿಗೆ ತನು-ಮನ-ಧನ ನೀಡಿದ ಅಯ್ಯಂಗಾರ್ ಕುಟುಂಬದ ನೆನಪು, ರಾಮಕೃಷ್ಣ ಅಯ್ಯಂಗಾರ್ ತಮ್ಮ ಪುತ್ರ ಜಗನ್ನಾಥ ಅಯ್ಯ೦ಗಾರ್ ಸ್ಮರಣಾಥ೯ ನಿಮಿ೯ಸಿದ್ದ ಪಶು ವೈದ್ಯ ಶಾಲೆ
#ಭಾಗ_2.
#ಈಗಿನ_ಬೋಡ್೯ನಲ್ಲಿ_ದಾನಿಗಳ_ಹೆಸರು_ಬಿಟ್ಟಿರುವುದು_ವಿಷಾದನೀಯ
ಬೋಜರಾಜ್ ಅಯ್ಯಂಗಾರರ ಅಜ್ಜ ಕಂಟ್ರಾಕ್ಟರಾಗಿದ್ದ ಶ್ರೀನಿವಾಸ ಅಯ್ಯಂಗಾರರು ರಾಮಕೃಷ್ಣ ಅಯ್ಯಂಗಾರರ ಅಣ್ಣರನ್ನು ಹಾಸನ ಜಿಲ್ಲೆಯ ಗೊರೂರಿನಿಂದ ಆನಂದಪುರಕ್ಕೆ ಕರೆ ತರುತ್ತಾರೆ ಆಗ ಬ್ರಿಟೀಶ್ ಆಡಳಿತ, ಆನಂದಪುರಂ ತಾಲ್ಲೂಕ್ ಕೇಂದ್ರವಾಗಿರುತ್ತದೆ ಅಲ್ಲಿ ತಾಲ್ಲೂಕ್ ಕಛೇರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ನಂತರ ತಮ್ಮ ಸಹೋದರ ಲಕ್ಷ್ಮೀಪತಿ ಅಯ್ಯಂಗಾರರನ್ನು ಇಲ್ಲಿಗೆ ಕರೆ ತರುತ್ತಾರೆ.
ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.
ರಾಮಕೃಷ್ಣ ಅಯ್ಯಂಗಾರ್ ಪತ್ನಿ ಕನಕಮ್ಮಾಳರು ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.
ರಾಮಕೃಷ್ಣ ಅಯ್ಯಂಗಾರ್ ಮೊದಲ ಪುತ್ರ ಅಕಾಲಿಕವಾಗಿ ಮೃತರಾದ್ದರಿಂದ ಅವರ ಸ್ಮರಣಾಥ೯ವಾಗಿ ಆನಂದಪುರದಲ್ಲಿ ಪಶು ಆಸ್ಪತ್ರೆಯನ್ನು ಸ್ವಂತ ಜಾಗದಲ್ಲಿ ನಿರ್ಮಿಸಿ ಅದಕ್ಕೆ ಜಗನ್ನಾಥ ಪಶು ವೈದ್ಯ ಶಾಲೆ ಎಂದು ನಾಮಕರಣ ಮಾಡುತ್ತಾರೆ.
ನಿನ್ನೆ ಗೆಳೆಯ ಆನಂದಪುರಂ ಪತ್ರಕರ್ತ ಬಿ.ಡಿ.ರವಿ ನನ್ನ ವಿನಂತಿ ಮೇರೆಗೆ ನನಗೆ ಬೇಕಾದ ಎಲ್ಲಾ ಪೋಟೋ ಕಳಿಸಿದ್ದಾರೆ ಅವರಿಗೆ ಕೃತಜ್ಞತೆಗಳು.
ಅವರು ಕಳಿಸಿದ ಆನಂದಪುರದ ಪಶು ವೈದ್ಯ ಚಿಕಿತ್ಸಾಲಯದ ಫೋಟೋದಲ್ಲಿ ಜಗನ್ನಾಥರ ಹೆಸರೇ ಕೈ ಬಿಟ್ಟಿದ್ದಾರೆ!?.
ದಾನಿಗಳಾದ ರಾಮ ಕೃಷ್ಣ ಅಯ್ಯಂಗಾರರು ತಮ್ಮ ಪುತ್ರ ಜಗನ್ನಾಥರ ಸ್ಮರಣಾಥ೯ ನಿಮಿ೯ಸಿ ಅರ್ಪಿಸಿದ ಈ ಪಶು ವೈದ್ಯ ಆಸ್ಪತ್ರೆಗೆ ಅವರು ಮಾಡಿದ ನಾಮಕರಣ ಈಗಿನ ತಲೆಮಾರು ಮರೆತಿದ್ದು ವಿಪಯಾ೯ಸ.
(ಮುಂದಿನ ಭಾಗ - 3 ನಾಳೆ)
Comments
Post a Comment