ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ, ಭಾರತೀಯ ರೈತ ನಾಯಕ ನೆನಪು - 1 . ಕಾಗೋಡು ರೈತ ಹೋರಾಟಕ್ಕೆ 13 - 6 - 1951ರಲ್ಲಿ ಡಾ.ರಾಮಮನೋಹರ ಲೋಹಿಯಾ ಭಾಗವಾಹಿಸಿ ಕಾಗೋಡಿನ ಅರಳಿ ಮರದ ಕಟ್ಟೆಯ ಮೇಲೆ ಮಾಡಿದ ಭಾಷಣ "ನಿಮ್ಮ ಹೋರಾಟ ನ್ಯಾಯಬದ್ದವಾಗಿದೆ ಆದ್ದರಿಂದ ನಿಮಗೆ ನನ್ನ ಬೆಂಬಲ,ನ್ಯಾಯ ಸಿಗುವವರೆಗೆ ಹೋರಾಟ ನಡೆಯಲಿ, ಸರಕಾರ ಭೂಮಾಲಿಕರ ಪರವಹಿಸಿ ಕಳಂಕಿತವಾಗಿದೆ" ಎಂಬ ವಾಕ್ಯದೊಂದಿಗೆ ಉಳುವವನೇ ಹೊಲದೊಡೆಯ ಘೋಷಣೆ ಮಾಡಿ ಕಾಗೋಡು ಒಡೆಯರ ಗದ್ದೆಗೆ ಪ್ರವೇಶಿಸಿದರು.
ಸೇರಿದ್ದ ಜನಸ್ತೋಮ " ಲೋಹಿಯಾ ಜಿಂದಾಬಾದ್ " " ಸೋಷಿಲಿಸ್ಟ ಪಾಟಿ೯ ಜಿಂದಾಬಾದ್ " " ಗೋಪಾಲ ಗೌಡ ಜಿಂದಾಬಾದ್ " " ಗಣಪತಿಯಪ್ಪ ಜಿಂದಾಬಾದ್' ಘೋಷಣೆ ಮುಗಿಲು ಮುಟ್ಟಿತ್ತು.
ಇದು ಸ್ವಾತಂತ್ರ ಭಾರತದ ಮೊದಲ ಗೇಣಿ ರೈತ ಚಳವಳಿ ಇದರ ನೇತಾರ ಹೆಚ್.ಗಣಪತಿಯಪ್ಪರು ಸಾಗರದ ಜೈಲಿನಲ್ಲಿದ್ದರು ಕಾಗೋಡಿಗೆ ತೆರಳುವ ಮುನ್ನ ಲೋಹಿಯಾರು ಸಾಗರ ಜೈಲಿಗೆ ತೆರಳಿ ಗಣಪತಿಯಪ್ಪರ ಯೋಗ ಕ್ಷೇಮ ವಿಚಾರಿಸಿ "ಇದೊಂದು ದೇಶದಲ್ಲೇ ಮಹತ್ವಪೂಣ೯ವಾದ ಹೋರಾಟವನ್ನು ಪ್ರಾರಂಬಿಸಿರುವುದು ನಮಗೆಲ್ಲ ಆನಂದವಾಗಿದೆ, ಈ ಹೋರಾಟದಲ್ಲಿ ಜಯ ನಿಮ್ಮದಾಗುತ್ತದೆ, ಭಯ ಪಡಬೇಡಿ" ಎನ್ನುತ್ತಾರೆ.
ಸತ್ಯಾಗ್ರಹ ಸ್ಥಳದಲ್ಲಿ ಲೋಹಿಯಾರನ್ನು ಪೋಲಿಸರು ಬಂದಿಸಲಾಗದೆ ನಿಸ್ಸಾಹಯಕರಾಗುತ್ತಾರೆ ಆದರೆ ಅವತ್ತಿನ ರಾತ್ರಿ ಪೋಲಿಸರು ಕಾಗೋಡಿನ ದೀವರ ಮನೆಗಳಿಗೆ ನುಗ್ಗಿ ಹೆಂಗಸರು, ಮಕ್ಕಳು ಮತ್ತು ವೃದ್ದರಾದಿಯಾಗಿ ಎಲ್ಲರ ಮೇಲೂ ಲಾಠಿ ಪ್ರಹಾರ, ದೌಜ೯ನ್ಯದ ಹಿಂಸಾಚಾರ ನಡೆಸಿದ್ದು ಸ್ವಾತಂತ್ರ ಭಾರತದ ಒ0ದು ಕಪ್ಪು ಚುಕ್ಕೆ.
ಅವತ್ತು ರಾತ್ರಿ ಸಾಗರಕ್ಕೆ ಬಂದು ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಸಂಸದ ಡಾ. ರಾಮ ಮನೋಹರ ಲೋಹಿಯಾ ಮತ್ತು ಅವರ ಜೊತೆ ಇದ್ದ ಎಂ.ಪಿ. ಈಶ್ವರಪ್ಪ, ಮುಲ್ಕಾ ಗೋವಿಂದ ರೆಡ್ಡಿ, ಖಾದ್ರಿ ಶಾಮಣ್ಣ ಮತ್ತು ಸಾಗರದ ಜಿ.ಆರ್.ಜಿ.ಯವರನ್ನು ಬಂದಿಸಿ ಸಾಗರದ ಪೋಲಿಸ್ ಲಾಕಪ್ ನಲ್ಲಿ ಇಡುತ್ತಾರೆ.
ಮರುದಿನ ಸಾಗರ ಕೋಟಿ೯ಗೆ ಹಾಜರ್ ಪಡಿಸಿ ಕೇಸು ದಾಖಲಿಸುತ್ತಾರೆ ಇವರ ಮೇಲಿನ ಆಪಾದನೆ "ಡಾ. ಲೋಹಿಯಾರವರು ತಮ್ಮ ಘೋಷಣೆ ಅನುಸಾರವಾಗಿ ತಮ್ಮ 29 ಮಂದಿ ಸಂಗಡಿಗರೊಂದಿಗೆ ಮತ್ತು ನೂರು ಮಂದಿ ಇತರರೊಂದಿಗೆ ಕಾಗೋಡಿನ ಗುರುವೇ ಗೌಡರ ಜಮೀನಿನ ಅತಿಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತರೆಂದು, ಕಾನೂನು ವಿರುದ್ದ ಸಭೆ ನಡೆಸಿದರು, ಇದು ಗಣನೀಯ ಅಪರಾದ ಅದಕ್ಕಾಗಿ ಬಂದಿಸಲಾಯಿತು" ಅಂತ.
ಅವತ್ತೇ ಸಾಗರದಿಂದ ರೈಲಿನಲ್ಲಿ ಬೆಂಗಳೂರಿಗೆ ಒಯ್ದು ಕ್ರೆಸೆಂಟ್ ಹೌಸ್ ನಲ್ಲಿಡುತ್ತಾರೆ, ಲೋಹಿಯಾ ಈ ಭವ್ಯ ಸೆರಮನೆ ವಿರೋದಿಸುತ್ತಾರೆ ಪುನಃ ಜೂನ್ 20 ರಂದು ಸಾಗರದ ಮ್ಯಾಜಿಸ್ಟ್ರೇಟ್ ಕೋಟ್೯ನಲ್ಲಿ ಹಾಜರು ಪಡಿಸಿದಾಗ ಲೋಹಿಯಾ ನ್ಯಾಯಮೂರ್ತಿಗಳನ್ನು ಕುರಿತು " ರೈತರು ತಲೆತಲಾಂತರದಿಂದ ಉಳುಮೆ ಮಾಡಿ ಕೊಂಡು ಬಂದ ಭೂಮಿಯನ್ನು ಊಳಿದರೆ ಅತಿಕ್ರಮ ಪ್ರವೇಶವಾಗುತ್ತದಾ? ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 79ನೇ ವಿದಿ ಪ್ರಕಾರ ರೈತರಿಗೆ ನೀವು ನ್ಯಾಯದ ರಕ್ಷಣೆ ಕೊಡಬೇಕಾಗಿತ್ತು ಬದಲಾಗಿ ನೀವು ಅಪರಾದ ಮಾಡದ ರೈತರಿಗೆ ಜೈಲು ಶಿಕ್ಷೆ ನೀಡುತ್ತಿದ್ದೀರಿ, ನ್ಯಾಯಾದೀಶರೇ ಕಾನೂನು ಉಲ್ಲಂಘಿಸುತ್ತಿದ್ದೀರಿ ಆದ್ದರಿಂದ ನಾನು ಕಾನೂನು ಭಂಗ ಚಳವಳಿ ಮಾಡಲು ಬಂದಿದ್ದೀನಿ " ಎ೦ದದ್ದು ನ್ಯಾಯಾದೀಶರಿಗೆ ದಿಗಿಲಾಯಿತು ಕೇಸನ್ನು ಜುಲೈ 3ಕ್ಕೆ ಅಡ್ಜನ್೯ ಮಾಡಿದರು.
ಇದು ದೇಶ ಮತ್ತು ಅಂತರಾಷ್ಟ್ರಿಯ ಸುದ್ದಿ ಆಯಿತು ಡಾ.ಲೋಹಿಯಾ ಬಂದನದ ಅನಾಹುತ ಅರಿತ ಸಕಾ೯ರ ಜೂನ್ 22ಕ್ಕೆ ಲೋಹಿಯಾರ ಮೇಲಿನ ಎಲ್ಲಾ ಕೇಸು ಹಿಂದೆ ತೆಗೆದು ಕೊಂಡು ಜೈಲಿನಿಂದ ಬಿಡುಗಡೆ ಮಾಡುತ್ತದೆ.
ಲೋಹಿಯಾ ಬಿಡುಗಡೆ ನಂತರ ಸಾಗರ ನ್ಯಾಯಾಲಯದಲ್ಲಿ ಸತ್ಯಾಗ್ರಹಿಗಳಿಗೆ ಅತಿಕ್ರಮ ಪ್ರವೇಶ ಎಂಬುದರ ಮೇಲೆ ಶಿಕ್ಷೆ ನೀಡುವುದು ತಪ್ಪಿತು ಮುಂದೆ ಸತ್ಯಾಗ್ರಹಿಗಳು ಜೈಲುಶಿಕ್ಷೆ ಇಲ್ಲದೆ ಬಿಡುಗಡೆ ಹೊಂದಿದರು ಇದು ಜಮೀನ್ದಾರರಿಗೆ ದೊಡ್ಡ ಸೋಲು ಮತ್ತು ಕಾಗೋಡು ಹೋರಾಟಕ್ಕೆ ದೊಡ್ಡ ಗೆಲುವಾಯಿತು.
ಶಾಂತವೇರಿ ಗೋಪಾಲಗೌಡರು ಕಾಗೋಡು ಹೋರಾಟ ರಾಷ್ಟ್ರ ಮಟ್ಟದಲ್ಲಿ ಜನರ ಗಮನ ಸೆಳೆಯಲು ಡಾ. ಲೋಹಿಯಾರನ್ನು ಆಹ್ವಾನಿಸಲು ಆಗ ಜೈಲಲ್ಲಿದ್ದ ಗಣಪತಿಯಪ್ಪರಿಂದ ಕೋರಿಕೆ ಪತ್ರ ಪಡೆದು ಲೋಹಿಯಾರನ್ನು ಆಹ್ವಾನಿಸಿದ್ದರು.
(ಮುಂದಿನ ಭಾಗ ಜೆ.ಪಿ.ಯವರು ಕಾಗೋಡು ಹೋರಾಟಕ್ಕೆ ಬೆಂಬಲಿಸಲು ಬಂದದ್ದು)
Comments
Post a Comment