ಭಗವಾನ್ ಶ್ರೀಧರ ಸ್ವಾಮಿ ಮತ್ತು ಮಹಾರಾಷ್ಟ್ರದ ಪ್ರಸಿದ್ದ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವ ಬೇಟಿಯ ಹಾಗೂ ಆಶ್ರೀವಾದದ ಚಿತ್ರ ಅಂಬೇಡ್ಕರ್ ಶ್ರೀಧರ ಸ್ವಾಮಿಯವರದ್ದೆಂದು ತಪ್ಪಾಗಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
#ನಿನ್ನೆಯಿಂದ_ಮೊದಲ_ಚಿತ್ರ_ಅಂಬೇಡ್ಕರ್_ಶ್ರೀಧರ_ಸ್ವಾಮಿಗಳ_ಆಶ್ರೀವಾದ_ಪಡೆದದ್ದು ಎಂಬ ತಪ್ಪು ಮಾಹಿತಿ ಹೆಚ್ಚು ಸಾಮಾಜಿಕ ತಾಣದಲ್ಲಿ ಪ್ರಸಾರ ಆಗುತ್ತಿದೆ ಆದರೆ ಅವರು ಅಂಬೇಡ್ಕರ್ ಅಲ್ಲ ಅಂಬೇಡ್ಕರ್ ರೀತಿ ಕಾಣುವ ಮಹಾರಾಷ್ಟ್ರದ ಸುಪ್ರಸಿದ್ಧ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು.
ಆತ್ರೆಯವರ ಮತ್ತು ಭಗವಾನ್ ಶ್ರೀಧರರ ಬೇಟಿಯ ಪೋಟೋ ಮತ್ತು ಲೇಖನ ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆಯಲ್ಲಿ ಪ್ರಕಟವಾಗಿದೆ ಅದನ್ನು ಇಲ್ಲಿ ಕೆಳಗೆ ಪೋಸ್ಟ್ ಮಾಡಿದೆ ಮತ್ತು ಸರಿಯಾದ ಎರಡನೆ ಚಿತ್ರ ಕೂಡ.
ಭಗವಾನರು ಮುಂಬೈಗೆ ಬಂದಿಳಿದ ಕೂಡಲೇ ಅನೇಕ ಭಕ್ತಾದಿಗಳು ಆದರದ ಸ್ವಾಗತ ಕೋರಿದರು. ಅಲ್ಲಿ ಮಾಮಾ ಕಾಣೆಯವರ ಮನೆಯಲ್ಲಿ ಭಗವಾನರ ಮುಕ್ಕಾಂ ಅಯಿತು. ಕೊಂಕಣ ದೇಶದಲ್ಲಿ ಆಗ ಬಿರುಗಾಳಿಯಿಂದ ಪೀಡಿತರಾದ ಜನರ ಸಹಾಯಕ್ಕಾಗಿ ಏರ್ಪಡಿಸಿದ್ದ ನಾಟಕವನ್ನು ಭಗವಾನರು ವೀಕ್ಷಿಸಿ, ಅದರ ಪಾತ್ರಧಾರಿಗಳಿಗೆ ಬಹುಮಾನವನ್ನು ನೀಡಿದರು. ಭಗವಾನರು ಅಲ್ಲಿನ ಸಂಕಷ್ಟ ಪೀಡಿತ ಜನರಿಗೆ ನೂರು ರೂಪಾಯಿಗಳ ದಾನ ನೀಡಿದರು. ಪ್ರವಚನವನ್ನು ನೀಡುತ್ತಾ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮವಾಗುವಂತಹ ನಾಟಕ ಸಿನೆಮಾಗಳನ್ನು ಮಾಡಬೇಕೆಂದು ಸಲಹೆ ನೀಡಿದರು. ಅಂದಿನ ಸಮಾರಂಭವನ್ನು ಮಹಾರಾಷ್ಟ್ರದಲ್ಲಿಯ ಸುಪ್ರಸಿದ್ಧ ಮರಾಠ ಪತ್ರಿಕೆಯ ಸಂಪಾದಕರಾದ ಆಚಾರ್ಯ ಅತ್ರೆಯವರು ಏರ್ಪಡಿಸಿದ್ದರು. ಭಗವಾನರ ಅಮೃತ ಹಸ್ತದಿಂದ ಬಹುಮಾನ ಪ್ರಸಾದವನ್ನು ದೊರಕಿಸಿಕೊಡಬೇಕೆಂದು ಅತ್ರೆಯವರೇ ಭಗವಾನರಲ್ಲಿ ಪ್ರಾರ್ಥಿಸಿಕೊಂಡು ಭಗವಾನರನ್ನು ಬರಮಾಡಿಕೊಂಡಿದ್ದರು. ಈ ಅತ್ರೆಯವರು ತಮ್ಮ ಪತ್ರಿಕೆಯಲ್ಲಿ ಭಾರತದ ಅನೇಕ ಸಾಧು ಸಂತರು ರಾಜಕಾರಣಿಗಳು ಮುಂತಾದವರ ಲೋಪದೋಷಗಳನ್ನು ಎತ್ತಿಹಿಡಿದು ನಿರ್ಭಿಡೆಯಿಂದ ಟೀಕೆ ಮಾಡಿ ಪತ್ರಿಕೆಯಲ್ಲಿ ಮುದ್ರಿಸುತ್ತಿದ್ದರು. ಇವರ ಟೀಕೆಗೆ ಒಳಗಾಗದವರು ಯಾರೂ ಉಳಿಯಲಿಲ್ಲವೆಂದರೂ ಒಪ್ಪುವಂತಿತ್ತು. ಅಂತಹ ಅತ್ರೆಯವರು ಭಗವಾನರ ದರ್ಶನ ಮಾಡಿದಾಗ ಮಾತ್ರ ಭಗವಾನರ ಜೀವನದಲ್ಲಿ ಒಂದೇ ಒಂದು ಲೋಪದೋಷವು ಇವರಿಗೆ ಸಿಗದೆ ನತಮಸ್ತಕರಾದರು. ಮಾತ್ರವಲ್ಲ ಕೆಲವು ದಿನಗಳ ಮೇಲೆ ತಮ್ಮ ಪತ್ರಿಕೆಯಲ್ಲಿ ಭಗವಾನರ ಛಾಯಾಚಿತ್ರವನ್ನು ಮುದ್ರಿಸಿ ‘ಸಮರ್ಥರ ಪುನರಾವತಾರ’ ಎಂಬ ಶೀರ್ಷಿಕೆಯನ್ನಿತ್ತು ಭಗವಾನರ ಬಗ್ಗೆ ಒಂದು ಲೇಖನವನ್ನು ಬರೆದು ಶ್ರೀ ಭಗವಾನರೆಂದರೆ ಸಾಕ್ಷಾತ್ ಭಗವಂತನೇ ಸರಿ ಎಂದು ಪ್ರತಿಪಾದಿಸಿದ್ದರು. ಮಹಾರಾಷ್ಟ್ರದಲ್ಲಿ ಎಲ್ಲರಿಗೂ ಇದೊಂದು ಆಶ್ಚರ್ಯದ ಘಟನೆಯಾಗಿ ಪರಿಣಮಿಸಿತ್ತು.
ಆಧಾರ :- ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ
https://m.facebook.com/story.php?story_fbid=3869242403165213&id=100002384735954
Comments
Post a Comment