Skip to main content

Posts

Showing posts with the label Sagar taluk famous Snake expert Manmath kumar

Blog number 1454. ಸಾಗರದ ಸುಪ್ರಸಿದ್ದ ಉರಗ ತಜ್ಞ ಮನ್ಮಥ್ ಕುಮಾರ್ ಸ್ಮರಣೆ

#ಶ್ರದ್ದಾ೦ಜಲಿಗಳು #ಮಲೆನಾಡಿನ_ಉರಗ_ತಜ್ಞ_ಮನ್ಮಥಕುಮಾರ್_ಇನ್ನು_ನೆನಪು_ಮಾತ್ರ    ಮನ್ಮಥ್ ಕುಮಾರ್ ಎಂದರೆ 1980 ರಿಂದ 90 ರ ದಶಕದಲ್ಲಿ ಒಂದು ಥರ ಹೀರೋ ಸಾಗರದಲ್ಲಿ, ಅವರು ಬೈಕ್ ಲ್ಲಿ ಹಾದು ಹೋದರೆ ವಿದ್ಯಾಥಿ೯ಗುಂಪುಗಳಲ್ಲಿ ಅವರೆ ನೋಡು ಮನ್ಮಥ ಕುಮಾರ್ ಅಂತ ಉದ್ಘೋಷ, ಹೆಸರಿಗೆ ತಕ್ಕ ಸ್ಪುರದ್ರೂಪಿ ಮನ್ಮಥ ಕುಮಾರ್ ಅಂತರ್ಮುಖಿ ಮತ್ತು ಅಥ೯ ಮಾಡಿಕೊಳ್ಳಲಾಗದ ವ್ಯಕ್ತಿತ್ವದವರು.   ಹವ್ಯಕ ಬ್ರಾಹ್ಮಣರಲ್ಲಿ ಅಪರೂಪದ ಉರಗ ಪ್ರೇಮಿ, ಈಗ ಎಲ್ಲೆಲ್ಲೂ ವಿಷ ಸರ್ಪಗಳನ್ನು ಹಿಡಿಯುವವರಿದ್ದಾರೆ ಸುಮಾರು 30-40 ವಷ೯ದ ಹಿಂದೆಯೇ ಮನೆ ಪ್ರವೇಶಿಸುತ್ತಿದ್ದ ಬೃಹತ್ ಕಾಳಿಂಗ ಸಪ೯ಗಳನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದ ಮನ್ಮಥ ಕುಮಾರ್ ಅಂದರೆ ವಿಸ್ಮಯ ವ್ಯಕ್ತಿತ್ವ.   ಆಗೆಲ್ಲ ಸೋಷಿಯಲ್ ಮೀಡಿಯ, ಟೀವಿ ಚಾನಲ್ ಇಲ್ಲದ್ದರಿಂದ ಇವರು ರಾಜ್ಯದಾದ್ಯಂತ ಈಗಿನ ಸ್ನೇಕ್ ಕ್ಯಾಚರ್ ರೀತಿ ಪ್ರಚಾರ ಪಡೆಯಲಿಲ್ಲ ಮತ್ತು ಮನ್ಮಥ ಕುಮಾರ್ ಕೂಡ ಪ್ರಚಾರದಿಂದಲೂ ಬಲು ದೂರವೇ ಇರುತ್ತಿದ್ದರು.   ಸಾಗರ ತಾಲ್ಲೂಕಿನ ಮುಂಡಿಗೆಸರ ವಾಸಿ ಆದ ಇವರು ಹಿಡಿದ ಕಾಳಿಂಗ ಸರ್ಪವೇ ಹತ್ತಿರ ಹತ್ತಿರ 500 ಇನ್ನು ನಾಗರ ಹಾವುಗಳ೦ತೂ ಕೆಲವು ಸಾವಿರ, ಇವರ ವಿಶೇಷ ಅಂದರೆ ವೈಲ್ಡ್ ಲೈಫ್ ಇಲಾಖೆ ಪರವಾನಿಗೆ ಹೊಂದಿರುವ ವಿರಳ ಸ್ನೇಕ್ ಕ್ಯಾಚರ್ ಲ್ಲಿ ಇವರು ಒಬ್ಬರು.   ಉಡುಪಿಯಲ್ಲಿ ಹಾವಿನ ವಿಷ ಮಾರಟ ಪ್ರಕರಣದಲ್ಲಿ ಪ್ರತ್ಯಕ್ಷವಾಗ...