#ಶ್ರದ್ದಾ೦ಜಲಿಗಳು
#ಮಲೆನಾಡಿನ_ಉರಗ_ತಜ್ಞ_ಮನ್ಮಥಕುಮಾರ್_ಇನ್ನು_ನೆನಪು_ಮಾತ್ರ
ಮನ್ಮಥ್ ಕುಮಾರ್ ಎಂದರೆ 1980 ರಿಂದ 90 ರ ದಶಕದಲ್ಲಿ ಒಂದು ಥರ ಹೀರೋ ಸಾಗರದಲ್ಲಿ, ಅವರು ಬೈಕ್ ಲ್ಲಿ ಹಾದು ಹೋದರೆ ವಿದ್ಯಾಥಿ೯ಗುಂಪುಗಳಲ್ಲಿ ಅವರೆ ನೋಡು ಮನ್ಮಥ ಕುಮಾರ್ ಅಂತ ಉದ್ಘೋಷ, ಹೆಸರಿಗೆ ತಕ್ಕ ಸ್ಪುರದ್ರೂಪಿ ಮನ್ಮಥ ಕುಮಾರ್ ಅಂತರ್ಮುಖಿ ಮತ್ತು ಅಥ೯ ಮಾಡಿಕೊಳ್ಳಲಾಗದ ವ್ಯಕ್ತಿತ್ವದವರು.
ಹವ್ಯಕ ಬ್ರಾಹ್ಮಣರಲ್ಲಿ ಅಪರೂಪದ ಉರಗ ಪ್ರೇಮಿ, ಈಗ ಎಲ್ಲೆಲ್ಲೂ ವಿಷ ಸರ್ಪಗಳನ್ನು ಹಿಡಿಯುವವರಿದ್ದಾರೆ ಸುಮಾರು 30-40 ವಷ೯ದ ಹಿಂದೆಯೇ ಮನೆ ಪ್ರವೇಶಿಸುತ್ತಿದ್ದ ಬೃಹತ್ ಕಾಳಿಂಗ ಸಪ೯ಗಳನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದ ಮನ್ಮಥ ಕುಮಾರ್ ಅಂದರೆ ವಿಸ್ಮಯ ವ್ಯಕ್ತಿತ್ವ.
ಆಗೆಲ್ಲ ಸೋಷಿಯಲ್ ಮೀಡಿಯ, ಟೀವಿ ಚಾನಲ್ ಇಲ್ಲದ್ದರಿಂದ ಇವರು ರಾಜ್ಯದಾದ್ಯಂತ ಈಗಿನ ಸ್ನೇಕ್ ಕ್ಯಾಚರ್ ರೀತಿ ಪ್ರಚಾರ ಪಡೆಯಲಿಲ್ಲ ಮತ್ತು ಮನ್ಮಥ ಕುಮಾರ್ ಕೂಡ ಪ್ರಚಾರದಿಂದಲೂ ಬಲು ದೂರವೇ ಇರುತ್ತಿದ್ದರು.
ಸಾಗರ ತಾಲ್ಲೂಕಿನ ಮುಂಡಿಗೆಸರ ವಾಸಿ ಆದ ಇವರು ಹಿಡಿದ ಕಾಳಿಂಗ ಸರ್ಪವೇ ಹತ್ತಿರ ಹತ್ತಿರ 500 ಇನ್ನು ನಾಗರ ಹಾವುಗಳ೦ತೂ ಕೆಲವು ಸಾವಿರ, ಇವರ ವಿಶೇಷ ಅಂದರೆ ವೈಲ್ಡ್ ಲೈಫ್ ಇಲಾಖೆ ಪರವಾನಿಗೆ ಹೊಂದಿರುವ ವಿರಳ ಸ್ನೇಕ್ ಕ್ಯಾಚರ್ ಲ್ಲಿ ಇವರು ಒಬ್ಬರು.
ಉಡುಪಿಯಲ್ಲಿ ಹಾವಿನ ವಿಷ ಮಾರಟ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಇವರು ಇರದಿದ್ದರೂ ಇವರನ್ನು ಸೇರಿಸಿದ ಪ್ರಕರಣ ಇವರ ಜೀವಮಾನದಲ್ಲಿ ಒಂದು ಕಪ್ಪು ಚುಕ್ಕೆ ಈ ಪ್ರಕರಣ ಕೂಡ ಖುಲಾಸೆ ಆಯಿತು.
2001 ರಲ್ಲಿ ಸಾಗರದ ಹೈತೂರು ಎಂಬಲ್ಲಿ ಕಾಳಿಂಗ ಸಪ೯ 62 ಮೊಟ್ಟೆಗಳನ್ನು ಇಟ್ಟಿದ್ದು ಇವರ ಗಮನಕ್ಕೆ ಬಂದಾಗ ಸಾಗರದ ಪೋಟೋಗ್ರಾಪರ್ ಪ್ರಕಾಶ್ ಸ್ಟುಡಿಯೋ ಕಿಟ್ಟಿಯವರಿಂದ ಚಿತ್ರಿಕರಣ ಮಾಡಿಸಿದ್ದು ನಿತ್ಯ ಪತ್ರಿಕೆಯಲ್ಲಿ ವೈರಲ್ ಆದ್ದರಿಂದ ವಿಪರೀತ ಜನಸಂದಣಿ ಆಗಲು ಪ್ರಾರಂಭ ಆದಾಗ ಈ ಕಾಳಿಂಗ ರಕ್ಷಿಸಲು ಇವರು ಮೊಟ್ಟೆ ಮತ್ತು ಹಾವು ಸ್ಥಳಾಂತರ ಮಾಡುತ್ತಾರೆ ಇದನ್ನು ಪ್ರತಿಷ್ಟೆ ಆಗಿ ತೆಗೆದುಕೊಂಡ ಸಿಂಗ್ ಎಂಬ DFO ದಂತ ಚೋರ ವೀರಪ್ಪನ್ ಹಿಡಿದ೦ತೆ ಮನ್ಮಥ ಕುಮಾರ್ ಮತ್ತು ಚಿತ್ರಿಕರಣ ಮಾಡಿದ ಪೋಟೋಗ್ರಾಪರ್ ಪ್ರಕಾಶ್ ಸ್ಟುಡಿಯೋದ ಕಿಟ್ಟಿಯವರನ್ನು ರಾತ್ರೋ ರಾತ್ರಿ ಬಂದಿಸಿ 22 ಕಾಳಿಂಗ ಸರ್ಪದ ಮೊಟ್ಟಿ ಹಾಳಾಯಿತೆಂದು FIR ದಾಖಲಿಸಿ ಹಲ್ಲೆ ಮಾಡಿದ್ದು ಸಾಗರದ ಜನತೆಯ ಆಕ್ರೋಷಕ್ಕೆ ಪ್ರತಿಭಟನೆಗೆ ಕಾರಣ ಆಗಿತ್ತು. ನಂತರ ನ್ಯಾಯಾಲಯದಲ್ಲಿ ಈ ಕೇಸ್ ಖುಲಾಸೆ ಆಯಿತು.
ಆಗ ನಾನು ನನ್ನ ಮೇಲಿನ ಅನೇಕ ಕೇಸ್ ಗಳಿಗಾಗಿ ಸಾಗರದಲ್ಲಿ ಕೋಟ್೯ಗೆ ಹೋದಾಗ ಮನ್ಮಥ ಕುಮಾರ್ ಜೊತೆ ಹಾವಿನ ಬಗ್ಗೆ ಅನೇಕ ಸಾರಿ ಮಾತಾಡುತ್ತಿದ್ದೆವು, ಯಾವುದೆ ಉಪಕರಣ, ಸ್ಟಿಕ್ ಇಲ್ಲದೆ ಹಾವು ಹಿಡಿಯುವ ಇವರು ಹೇಳುತ್ತಿದ್ದದ್ದು "ನೀವು ಹಾವು ಹಿಡಿದಾಗಲೇ ನಿಮ್ಮ ಕೈ ಹಿಡಿತದಲ್ಲೇ ಹಾವು ನಿಮ್ಮಿಂದ ಅಪಾಯ ಇಲ್ಲ ಎಂದು ಗ್ರಹಿಸಿ ಬಿಡುತ್ತೆ" ಅಂತಿದ್ದರು.
ಸರಿ ಸೃಪ, ಕಾಡಿನ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದ ಮಲೆನಾಡಿನ ಪರಿಸರ ವಿಜ್ಞಾನಿ ಎಂದು ನಾನು ಕರೆಯುತ್ತಿದ್ದ ಮನ್ಮಥ ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ಮನಸ್ಸು ಬಾರವಾಯಿತು.
ದೇವರು ಇವರ ಆತ್ಮಕ್ಕೆ ಸದ್ಗತಿ ಸ್ವಗ೯ ಪ್ರಾಪ್ತಿ ನೀಡಲೆಂದು ಪ್ರಾಥಿ೯ಸುತ್ತೇನೆ.
ಮನ್ಮಥ ಕುಮಾರರ ಬಗ್ಗೆ ಈ ಪೋಸ್ಟಿನಲ್ಲಿ ಪ್ರತಿಕ್ರಿಯೆ ನೀಡಿದವರು ಅನೇಕ ವಿಷಯ ತಿಳಿಸಿದ್ದಾರೆ ಆದರೆ ಇದನ್ನೆಲ್ಲ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ ಇವರು ಪುತ್ತೂರಿನ ಬಾಲವನದಲ್ಲಿ ಸರ್ಪವನದ ಜವಾಬ್ದಾರಿ ವಹಿಸಿದ್ದರು ಹಾಗಾಗಿ ಇವರು ಪುತ್ತೂರಿನಲ್ಲಿ ತುಂಬಾ ಪ್ರಸಿದ್ಧರಾಗಿದ್ದರು ಮತ್ತು ಬೆಂಗಳೂರಿನ ಬನ್ನೇರು ಘಟ್ಟದಲ್ಲಿನ ಸಪ೯ವನದ ಸಲಹೆಗಾರರೂ ಆಗಿದ್ದರು.
ಆಯುರ್ವೇದ ಗಿಡಮೂಲಿಕೆಗಳಲ್ಲಿ ಅನೇಕರಿಗೆ ಚಿಕಿತ್ಸೆ ನೀಡುತ್ತಿದ್ದರಂತೆ ಅದರಲ್ಲೂ ಗ್ಯಾಂಗ್ರೀನ್ ಆದವರು ಅನೇಕರು ಇವರಿಂದ ಚಿಕಿತ್ಸೆ ಪಡೆದು ಗುಣ ಆಗಿದ್ದಾರೆ.
ಜಾದು ಕಲಿತು ಪ್ರದಶ೯ನ ನೀಡುವಂತ ಜಾದು ತಜ್ಞತೆ ಪಡೆದಿದ್ದರು, ಇವರ ಮಗ ಚವನ ಕುಮಾರ್ ಕೂಡ ತಂದೆಯಿಂದ ಹಾವು ಹಿಡಿಯುವ ಕಲೆ ಕಲಿತಿದ್ದಾರಂತೆ.
Comments
Post a Comment