#ಈಗಿನ_ರಾಜಕಾರಣದಲ್ಲಿ_ಪಕ್ಷಗಳು_ದಕ್ಷ_ಅಭ್ಯರ್ಥಿ_ಅನ್ನಬೇಕಾದರೆ ...
#ಬಾಷಣ_ಕೇಳಲು_ಜನ_ಸರಬರಾಜು_ಮಾಡುವ_ಏಜೆನ್ಸಿಗಳಿದೆ...
#ಆಕರ್ಷಕ_ಪ್ರಚಾರ_ಸಭೆ_ವ್ಯವಸ್ಥೆ_ಮಾಡುವ_ಈವೆಂಟ್_ಮ್ಯಾನೇಜ್ಮೆಂಟ್_ಕಂಪನಿಗಳಿದೆ....
#ಕೋಟಿ_ಕೋಟೆ_ಹಣ_ಸುರಿದು_ಚುನಾವಣೆಯಲ್ಲಿ_ಗೆಲ್ಲಬೇಕಾದರೆ .....
#ಚುನಾವಣಾ_ಆಯೋಗ_ಅಭ್ಯರ್ಥಿಯ_ಖರ್ಚು_ವೆಚ್ಚ_ಅನುಮೋದಿಸಿ_ಅಧಿಕೃತ_ಮೊಹರು_ಒತ್ತಬೇಕಾದರೆ ...
ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ.
ಚುನಾವಣಾ ಪ್ರಚಾರದಲ್ಲಿ ಹೈಟೆಕ್ ಭರಾಟೆ.
ಮೊದಲೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಕ್ ಕಟ್ಟಿದ ವಾಹನದಲ್ಲಿ ಪ್ರಚಾರ, ಪೋಸ್ಟ್ ರ್ ಅಂಟಿಸುವುದು, ತಾಲ್ಲೂಕ್ ಹೋಬಳಿ ಕೇಂದ್ರದಲ್ಲಿ ಅಭ್ಯಥಿ೯ ಎತ್ತರದ ಅಟ್ಟಣಿಗೆ ಅಂತ ಜಾಗದಲ್ಲಿ ಬಾಷಣ ಅದಕ್ಕೆ ಒಂದು ಮೈಕ್ ವ್ಯವಸ್ಥೆ.
ಅಭ್ಯಥಿ೯ಗೆ ಮಾತ್ರ ಕಾರು ನಂತರದ ದಿನದಲ್ಲಿ ಒಂದೊ೦ದು ಕ್ಷೇತ್ರದಲ್ಲಿ ನೂರಾರು ಬಾಡಿಗೆ ಕಾರು, ಪ್ಲೆಕ್ಸ್ ಗಳು ರಾರಾಜಿಸಲು ಪ್ರಾರಂಭವಾಯಿತು.
ಈಗ ಚುನಾವಣಾ ಆಯೋಗದ ಕಠಿಣ ನಿಧಾ೯ರಗಳಿಂದ ಪ್ರಚಾರಕ್ಕೆ ನಿಯಮಿತ ವಾಹನ, ಸಭೆಯ ಸಮಯಕ್ಕೆ ಮಾತ್ರ ಪ್ರಚಾರ ಸಾದನ ಅವಕ್ಕೆಲ್ಲ ಸ್ಲಾಬ್ ಮಾದರಿ ಚುನಾವಣಾ ವೆಚ್ಚದ ಲೆಖ್ಖ ಅಭ್ಯಥಿ೯ಯ ಖಾತೆಗೆ ಸೇರುತ್ತದೆ.
ಈಗಿನ ಪ್ರತಿ ಚುನಾವಣಾ ಸಭೆಯು ಇವೆಂಟ್ ಮ್ಯಾನೇಜ್ ಮೆಂಟ್ ಗೆ ಒಳಪಟ್ಟಿ ನಡಿಯುತ್ತಿದೆ.
ವಿಶಾಲ ಎತ್ತರದ ವೇದಿಕೆ, ಪತ್ರಕತ೯ರಿಗೆ ಪ್ರತ್ಯೇಕ ಬಾಕ್ಸ್ ಅಲ್ಲಿಗೆ ಸುಲಭ ಪ್ರವೇಶ, ಅದೇ ರೀತಿ ಲೈವ್ ವಿಡಿಯೋಗಾಗಿ ಪ್ರತ್ಯೇಕ ವೇದಿಕೆ, ಡ್ರೋನ್ ಚಿತ್ರಿಕರಣ, ಅರಮಾದಾಯಕ ಅಸನಗಳು, ವೇದಿಕೆ ಹವಾನಿಯ೦ತ್ರಿತ, ಹಿಂಬಾಗದಲ್ಲಿ ಗಣ್ಯರಿಗೆ ಮೊಬೈಲ್ ಟಾಯಿಲೆಟ್, ವಿ.ಐ.ಪಿಗಳಿಗೆ, ಪ್ರಮುಖರಿಗೆ, ವಿಶೇಷ ಆಹ್ವಾನಿತರಿಗೆ, ಜನಪ್ರತಿನಿಧಿಗಳಿಗಾಗಿ ಪ್ರತ್ಯೇಕ ಗ್ಯಾಲರಿ ಅದರ ಹಿಂದೆ ಜನಸಾಮಾನ್ಯರಿಗೆ.
ಎಲ್ಲರಿಗೂ ಆಸನ ವ್ಯವಸ್ಥೆ, ಸಭಾಂಗಣದ ಪ್ರತಿ ಮೂಲೆಗೂ ಯಾವುದೇ ಅಡೆತಡೆ ಇಲ್ಲದೆ ಮುಟ್ಟುವ೦ತ ಸ್ಪೀಕರ್ ಗಳ ವ್ಯವಸ್ತೆ.
ಮೊದಲೆಲ್ಲ ಸ್ಥಳಿಯ ಪಕ್ಷದ ಪ್ರಮುಖರು ಈ ವ್ಯವಸ್ಥೆಗೆ ಒದ್ದಾಡ ಬೇಕಿತ್ತು ಆದರೆ ಈಗ ನಿಮ್ಮ ಆಡ೯ರ್ ಪಡೆದು ಮರುದಿನವೆ ಇಂದ್ರಲೋಕ ಸೃಷ್ಠಿಸುವ ಏಜೆನ್ಸಿಗಳಿದೆ, 50 ಸಾವಿರದಿಂದ 50 ಲಕ್ಷದ ತನಕ ಖಚು೯ ಮಾಡಿದರಾಯಿತು.
ರಾಜಕೀಯ ನಾಯಕರು, ಅಭ್ಯಥಿ೯ಗಳು ಮಾಡುವ ಭಾಷಣ ಕೇಳಲು ಜನ ಬೇಕಲ್ಲ! ಅದನ್ನು ಸರಭರಾಜು ಮಾಡುವ ಏಜೆನ್ಸಿಗಳಿದೆ, ಆ ಸಂದಭ೯ಕ್ಕೆ ಬೇಕಾದ ಶಾಲು, ಟೋಪಿಗಳನ್ನ ಮುದ್ರಿಸಿ ನೀಡುವ ವ್ಯವಸ್ಥೆ ಕೂಡ.
ಇವಾರಾರು ಮತದಾರರಲ್ಲ, ಪಕ್ಷದ ಕಾಯ೯ಕತ೯ರೂ ಅಲ್ಲ ಆದರೆ ನಿಮ್ಮ ಸಭೆಯ ಆ ದಿನದ ಸಭಾoಗಣ ತುಂಬಿಸಿ, ಮಯಾ೯ದೆ ಉಳಿಸುವ ಕೂಲಿ ಕಾಯ೯ಕತ೯ರು ಇವರೆಲ್ಲ.
ಕೋಟ್ಯಾಂತರ ಹಣ ಪೀಕಿ ಅಭ್ಯಥಿ೯ ಆದವನು ಇದೆಲ್ಲ ಚುನಾವಣೆಗಾಗಿ ಮಾಡಬೇಕಾದ ಅನಿವಾಯ೯ ಕೆಲಸ.
ಇ೦ತದ್ದನ್ನೆಲ್ಲ ಸರಿಯಾಗಿ ನಿವ೯ಹಿಸಿದರೆ ಮಾತ್ರ ಪಕ್ಷ ಅವರನ್ನ ದಕ್ಷ ಎಂದು ಪರಿಗಣಿಸುತ್ತದೆ, ಪತ್ರಿಕೆಗಳು ಮರುದಿನ ಬಾರಿ ಜನಸ್ತೊಮ ಸೇರಿತ್ತು ಅಂತ ಬರೆಯುತ್ತೆ, ಸಭೆಯ ಲೈವ್ ಚಿತ್ರಿಕರಣ, ಡ್ರೋಣ್ ಕೈ ಚಳಕ, ಸಂಗೀತ, ಮ್ಯೂಸಿಕ್ ಗಳ ಮಿಕ್ಸಿOಗ್, ಪಂಚಿ೦ಗ್ ಡಯ್ ಲಾಗ್ ಗಳ Highlight ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಲೈವ್ ಟಿಲಿಕಾಸ್ಟ್ ಹೀಗೆ ಇವತ್ತಿನ ಚುನಾವಣೆಗಳು ನೂರಾರು ಕೋಟಿಯ ವ್ಯವಹಾರವಾಗಿದೆ.
ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಕರಾಮತ್ತು ಕಲಿತಿದೆ.
ಇದೆಲ್ಲ ಅಂತಿಮವಾಗಿ ಕೆಲವೇ ಲಕ್ಷದಲ್ಲಿ ನಡೆದ ಚುನಾವಣೆ ಅಂತ ಚುನಾವಣಾ ಆಯೋಗ ಕೂಡ ಅಭ್ಯಥಿ೯ಯ ಚುನಾವಣಾ ವೆಚ್ಚವನ್ನ ಒಪ್ಪಿ ತನ್ನ ಅಧಿಕೃತ ಮೊಹರನ್ನ ಒತ್ತುತ್ತದೆ.
Comments
Post a Comment