Blog number 1379. ರಾಮಕೃಷ್ಣ ಹೆಗ್ಗಡೆ ಅವರ ಸ್ವಂತ ಮೊಮ್ಮಗನಾರು ಬಿಜೆಪಿ ಸೇರಿಲ್ಲ, ಶಶಿಭೂಷಣ ಹೆಗ್ಗಡೆ ರಾಮಕೃಷ್ಣ ಹೆಗಡೆ ದೊಡ್ಡಪ್ಪನ ಮಗ ಗಣೇಶ ಹೆಗಡೆ ಮೊಮ್ಮಗ ಎಂಬುದು ಮರೆ ಮಾಚುವುದು ಎಷ್ಟು ಸರಿ?
#ಶಿವಮೊಗ್ಗ_ಜಿಲ್ಲೆಯ_ಅಂಚಾದ_ತಾಳಗುಪ್ಪದಿಂದ_ಅತಿ_ಸಮೀಪದಲ್ಲಿದೆ.
#ತಾಳಗುಪ್ಪದಿಂದ_ಕಾರವಾರ_ಜಿಲ್ಲಾ_ಕೇಂದ್ರ_160_ಕಿಮಿ_ದೂರ.
#ಸಿದ್ದಾಪುರದ_ಶಶಿಭೂಷಣ_ಹೆಗ್ಗಡೆ_ಬಿಜೆಪಿ_ಸೇರಿದ್ದಾರೆ
#ಪತ್ರಿಕೆ_ರಾಜಕೀಯ_ಪಕ್ಷಗಳು_ಇವರನ್ನು_ರಾಮಕೃಷ್ಣ_ಹೆಗ್ಗಡೆ_ಮೊಮ್ಮಗ_ಅನ್ನುತ್ತಿರುವುದು_ಎಷ್ಟು_ಸರಿ ?
ಶಶಿಭೂಷಣ ಹೆಗ್ಗಡೆ ಎರೆಡು ಬಾರಿ ಭಾರತೀಯ ಜನತಾ ಪಕ್ಷದಿಂದ ಕುಮಟಾ-ಹೊನ್ನಾವರ ವಿದಾನ ಸಭಾ ಕ್ಷೇತ್ರದಿಂದ ಮತ್ತು ಶಿರಸಿ - ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಎರೆಡು ಬಾರಿ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿ ಪರಾಜಿತರಾಗಿದ್ದವರು ಈಗ ಪುನಃ ಜಾತ್ಯಾತೀತ ಜನತಾದಳ ತೊರೆದು ಬಿಜೆಪಿ ಸೇರಿದ್ದಾರೆ.
ಇವರ ಈ ಪಕ್ಷ ಸೇರ್ಪಡೆಯಲ್ಲಿ ಇವರನ್ನು ರಾಮಕೃಷ್ಣ ಹೆಗ್ಗಡೆ ಮೊಮ್ಮಗ ಎಂದು ಪತ್ರಕರ್ತರು ಮಾತ್ರವಲ್ಲ ಮಾಜಿ ಸ್ಪೀಕರ್ ಕಾಗೇರಿ ವಿಶ್ವೇಶ್ವರ ಹೆಗ್ಗಡೆ ಕೂಡ ಹೇಳುತ್ತಿದ್ದಾರೆ ಬಹುಶಃ ರಾಮಕೃಷ್ಣ ಹೆಗ್ಗಡೆಯಂತ ದೀಮಂತ ಮುಖ್ಯಮಂತ್ರಿಯ ಮೊಮ್ಮಗನೇ ತಮ್ಮ ಪಕ್ಷ ಸೇರಿದ್ದಾರೆಂಬ ರಾಜಕೀಯ ಮೈಲೇಜ್ ಪಡೆಯುವ ಉದ್ದೇಶ ಇರಬಹುದು.
ಶಶಿಭೂಷಣ ಹೆಗ್ಗಡೆ ದೊಡ್ಮನೆ ವಿನಾಯಕ ಹೆಗ್ಗಡೆ ಮಗ, ದೊಡ್ಮನೆ ವಿನಾಯಕ ಹೆಗ್ಗಡೆ ದಿವ೦ಗತ ಗಣೇಶ ನಾರಾಯಣ ಹೆಗ್ಗಡೆ ಮಗ, ದಿವಂಗತ ಗಣೇಶ ನಾರಾಯಣ ಹೆಗ್ಗಡೆ ತಂದೆ ದಿವಂಗತ ನಾರಾಯಣ ಹೆಗ್ಗಡೆ ಆದ್ದರಿಂದ ಶಶಿಭೂಷಣ ಹೆಗ್ಗಡೆ ದಿವಂಗತ ಗಣೇಶ ನಾರಾಯಣ ಹೆಗ್ಗಡೆ ಮೊಮ್ಮಗ ಎನ್ನುವುದು ಸರಿಯಾದ ಸಂಬಂದವಾಗಿದೆ.
ರಾಜ್ಯದ ಧೀಮಂತ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗ್ಗಡೆ ತಂದೆ ಮಹಬಲೇಶ್ವರ ಹೆಗ್ಗಡೆ ಮತ್ತು ಗಣೇಶ ಹೆಗ್ಗಡೆ ತಂದೆ ನಾರಾಯಣ ಹೆಗ್ಗಡೆ ಖಾಸಾ ಅಣ್ಣ ತಮ್ಮಿಂದಿರು.
ರಾಮಕೃಷ್ಣ ಹೆಗ್ಗಡೆ ಮತ್ತು ಶ್ರೀಮತಿ ಶಕುಂತಳಾ ಹೆಗ್ಗಡೆ ಅವರಿಗೆ ಏಕೈಕ ಪುತ್ರ ದಿವಂಗತ ಭರತ ಹೆಗ್ಗಡೆ ಮತ್ತು ಪುತ್ರಿಯರಾದ ಮಮತಾ ಮತ್ತು ಸಮತಾ.
ಆದ್ದರಿಂದ ರಾಮಕೃಷ್ಣ ಹೆಗಡೆ ಅವರ ದೊಡ್ಡಪ್ಪನ ಮಗ ಗಣೇಶ ಹೆಗ್ಗಡೆ ಅವರ ಮೊಮ್ಮಗ ಶಶಿಭೂಷಣ ಹೆಗ್ಗಡೆ ಅನ್ನುವುದು ಸರಿಯಾದ ಸಂಬಂದ ಸೂಚಕವಾಗಿದೆ.
ರಾಮಕೃಷ್ಣ ಹೆಗ್ಗಡೆ ಅವರ ಮನೆತನದವರಾದ ಶಶಿಭೂಷಣ ಹೆಗ್ಗಡೆ ಎನ್ನುವುದು ಬಿಟ್ಟು ಇಲ್ಲಿ ರಾಮಕೃಷ್ಣ ಹೆಗ್ಗಡೆ ಮೊಮ್ಮಗ ಅಂತ ಬಿಂಬಿಸಲು ಹೊರಟಿದ್ದು ಎಷ್ಟು ಸರಿ? ಶಶಿಭೂಷಣ ಹೆಗ್ಗಡೆ ಸ್ವಂತ ತಂದೆ ವಿನಾಯಕ ಹೆಗ್ಗಡೆ ಮತ್ತು ಅಜ್ಜ ಗಣೇಶ ಹೆಗ್ಗಡೆಯವರ ಹೆಸರನ್ನು ರಾಜಕೀಯ ಆಕಾಂಕ್ಷೆಯಿಂದ ಮುಚ್ಚಿಡುವುದು ಎಷ್ಟು ಸರಿ?
Comments
Post a Comment