Blog number 1421. ಸ್ಪೀಡ್ ಗವರ್ನರ್ ನಿಷ್ಕ್ರಿಯಗೊಳಿಸಿ ಸಾಮರ್ಥ್ಯಕ್ಕಿಂತ ಹೆಚ್ಚು ಲಗೇಜ್ ಲೋಡ್ ಮಾಡಿ ಸಂಚರಿಸುವ ರಾತ್ರಿ ಬಸ್ಸುಗಳು.
ಜಿಲ್ಲೆಯಲ್ಲಿ ಸಂಚರಿಸುವ ಸಾವ೯ಜನಿಕ ಸಾಗಾಣಿಕೆ ವಾಹನಗಳಾದ ಬಸ್ ಗಳು ಪದೇ ಪದೇ ಅಪಘಾತಕ್ಕೆ ಈಡಾಗಿ ಸಾವುಗಳಾಗುತ್ತಿದೆ.
ನಿನ್ನೆ ರಾತ್ರಿ (17 ಏಪ್ರಿಲ್ 2019) ಸಾಗರದ ಉಳ್ಳುರು ಸಮೀಪ ಹೊನ್ನಾವರದಿಂದ ಬೆಂಗಳೂರಿಗೆ ಸಾಗುತ್ತಿದ್ದ ಸೀ ಬಡ್೯ ಎಂಬ ಖಾಸಾಗಿ ಬಸ್ ಚಾಲಕನ ಅಜಾಗೃತಿಯಿಂದ ಅಪಘಾತವಾಗಿ 3 ಪ್ರಯಾಣಿಕರು ಮೃತರಾಗಿದ್ದಾರೆ.
ಸದರಿ ಸಂಸ್ಥೆಯ ಬಸ್ ಸಾಗರ ತಾಲ್ಲೂಕಿನಲ್ಲಿ 15 ದಿನದಲ್ಲಿ 3 ಸಾರಿ ಅಪಘಾತ ಆಗಿದೆ.
ಕ್ಲೀನರ್ ಗೆ ಚಾಲನೆ ನೀಡಿದ್ದರೆಂದು, ಬಸ್ಸಿನಲ್ಲಿ ವಿಪರೀತ ಲಗೇಜ್ ( ಅಡಿಕೆ ಚೀಲ ಕೂಡ) ಹಾಕಿದ್ದರೆಂದು ಮತ್ತು ಈ ಬಸ್ ಸಂಚಾರಕ್ಕೆ ಯೋಗ್ಯ ಆಗಿರಲಿಲ್ಲ ಎಂದು ತಿಳಿದು ಬಂದಿದೆ.
ಸ್ಪೀಡ್ ಗೌವನ೯ರ್ ನಿಷ್ಕ್ರಿಯಗೊಳಿಸಿ ರಾತ್ರಿ ಆನೇಕ ಬಸ್ ಗಳು ವೇಗದ ಮಿತಿ ದಾಟಿ ಪ್ರಯಾಣಿಸುತ್ತಿರುವುದು,ಚಾಲನ ಪರವಾನಿಗೆ ಇಲ್ಲದವರು ಬಸ್ ಚಲಾಯಿಸುವುದು, ಕುಡಿದು ಚಾಲನೆ ಮಾಡುವುದು, ವಿಪರೀತ ಲಗೇಜು ಹಾಕುವುದನ್ನು ಪ್ರತಿ ನಿತ್ಯ ಪರಿಶೀಲಿಸಿದರೆ ಇಂತಹ ಅಪಘಾತ, ಸಾವು ನೋವು ತಡೆಯಬಹುದಾಗಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ರೀಜನಲ್ ಟ್ರಾನ್ಸ್ಪೋಟ್೯ ಅಥಾರಿಟಿಯ ಮುಖ್ಯಸ್ಥರಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸಾವ೯ಜನಿಕರ ಪರವಾಗಿ ಮನವಿ.
ಕೆ.ಅರುಣ್ ಪ್ರಸಾದ್
ಮಾಜಿ.ಜಿಪಂ ಸದಸ್ಯ
ಆನಂದಪುರಂ
Comments
Post a Comment